Consumption of pesticides: ಕೀಟನಾಶಕ ಬೆರೆಸಿ ಮದ್ಯ ಸೇವನೆ : ಇಬ್ಬರ ಸಾವು

ಮಧ್ಯಪ್ರದೇಶ: (Consumption of pesticides) ಕೀಟನಾಶಕ ಬೆರೆಸಿದ ಮದ್ಯ ಸೇವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಇದು ಆತ್ಮಹತ್ಯೆಯ ಪ್ರಕರಣ ಎಂದು ಶಂಕಿಸಲಾಗಿದ್ದು, ಬದ್ನಾವರ್ ತಹಸಿಲ್ ವ್ಯಾಪ್ತಿಯ ಸಾಲ್ರಿಯಾಪಾಡಾ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆದಿತ್ಯ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ರಾಜಾರಾಂ ಭಿಲ್ (40) ಮತ್ತು ಭೂರಾಲಾಲ್ (38) ಇಬ್ಬರು ಮೃತ ವ್ಯಕ್ತಿಗಳು. ಕುಟುಂಬ ಸದಸ್ಯರ ಪ್ರಕಾರ, ಇಬ್ಬರೂ ಕೀಟನಾಶಕ ಮಿಶ್ರಿತ ಮದ್ಯವನ್ನು ಸೇವಿಸಿದ್ದು, ನಂತರದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಇದು ಮದ್ಯದಲ್ಲಿ ಕೀಟನಾಶಕ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತೋರುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಶಂಕಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಭುರಾಲಾಲ್ ಮನೆಗೆ ಬಂದಾಗ ರಾಜಾರಾಮ್ ಮನೆಯಲ್ಲಿ ಮದ್ಯ ಸೇವಿಸುತ್ತಿದ್ದರು. ನಂತರದಲ್ಲಿ ರಾಜಾರಾಮ್‌ ಜೊತೆಗೆ ಭುರಾಲಾಲ್‌ ಅವರು ಮದ್ಯ ಕುಡಿಯಲು ಪ್ರಾರಂಭಿಸಿದ್ದಾರೆ. ಹೀಗೆ ಕುಡಿಯುತ್ತಿರಬೇಕಾದರೆ ಇಬ್ಬರ ಸ್ಥಿತಿ ಹದಗೆಟ್ಟಿದ್ದು, ಕೂಡಲೇ ಕುಟುಂಬ ಸದಸ್ಯರು ಅವರನ್ನು ಬದ್ನಾವರ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆಯನ್ನು ಕೊಡಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ರತ್ಲಾಮ್ ಜಿಲ್ಲಾ ಆಸ್ಪತ್ರೆಗೆ ಅವರನ್ನು ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಾಜಾರಾಮ್‌ ಮೃತಪಟ್ಟಿದ್ದು, ಚಿಕಿತ್ಸೆ ವೇಳೆ ಭೂರಾಲಾಲ್‌ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Assault by police – video viral:‌ ಸೈಕಲ್‌ನಿಂದ ಬಿದ್ದ ವೃದ್ದ ಶಿಕ್ಷಕ: ಅಮಾನುಷವಾಗಿ ಥಳಿಸಿದ ಲೇಡಿ ಪೊಲೀಸರು

ಇದನ್ನೂ ಓದಿ : Chikkamagaluru serial accident: ಚಿಕ್ಕಮಗಳೂರಲ್ಲಿ ಭೀಕರ ಸರಣಿ ಅಪಘಾತ : 20 ವಿದ್ಯಾರ್ಥಿಗಳಿಗೆ ಗಾಯ

ಇದನ್ನೂ ಓದಿ : Strange incident: ವಿಚಿತ್ರ ಘಟನೆ: ಸಾಕು ನಾಯಿಯನ್ನು ʻನಾಯಿʼ ಎಂದಿದ್ದಕ್ಕೆ ವೃದ್ದನ ಕೊಲೆ

Consumption of pesticides: Consumption of alcohol mixed with pesticides: two deaths

Comments are closed.