ಸೋಮವಾರ, ಏಪ್ರಿಲ್ 28, 2025
HomeCrimeಸಿಎಂ ಖಾತೆಗೆ 58 ಕೋಟಿ ಕನ್ನ ಯತ್ನ : ತುಳು ಚಿತ್ರ ನಿರ್ದೇಶಕ ಅರೆಸ್ಟ್

ಸಿಎಂ ಖಾತೆಗೆ 58 ಕೋಟಿ ಕನ್ನ ಯತ್ನ : ತುಳು ಚಿತ್ರ ನಿರ್ದೇಶಕ ಅರೆಸ್ಟ್

- Advertisement -

ಮಂಗಳೂರು : ಆತ ತುಳು ಚಿತ್ರರಂಗ ನಿರ್ದೇಶಕ. ಸಿನಿಮಾ ನಿರ್ದೇಶನ ಮಾಡಿಕೊಂಡು ತನ್ನಪಾಡಿಗೆ ಇರೋದನ್ನು ಬಿಟ್ಟು, ಇದೀಗ ದಿಢೀರ್ ಶ್ರೀಮಂತನಾಗೋ ಕನಸು ಕಂಡು ಇದೀಗ ಮಾಡಿದ ತಪ್ಪಿಗೆ ಜೈಲು ಸೇರಿದ್ದಾನೆ. ಈತ ಕನ್ನ ಹಾಕೋಕೆ ಹೊರಟಿದ್ದು ಮನೆಗಲ್ಲಾ, ಬದಲಾಗಿ ಸಿಎಂ ಪರಿಹಾರ ನಿಧಿಗೆ. ಅದ್ರಲ್ಲೂ ದೋಚೋದಕ್ಕೆ ಯತ್ನಿಸಿದ್ದು, ಸಾವಿರವೋ, ಲಕ್ಷವೋ ಅಲ್ಲಾ ಬದಲಾಗಿ 58 ಕೋಟಿ ರೂಪಾಯಿ !

ಹೌದು, ಆಂಧ್ರಪ್ರದೇಶ ಸಿಎಂ ರಿಲೀಫ್​ ಫಂಡ್​ಗೆ ಕನ್ನ ಹಾಕಲು ಯತ್ನಿಸಿದ್ದ ತುಳು ಚಿತ್ರರಂಗದ​ ನಿರ್ದೇಶಕ ಉದಯ್ ಕುಮಾರ್ ಸೇರಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಖದೀಮರ ತಂಡ ನಕಲಿ ಚೆಕ್ ಬಳಕೆ ಮಾಡಿಕೊಂಡು ಹಣ ವಿತ್​ ಡ್ರಾ ಮಾಡಲು ಮುಂದಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಬ್ಯಾಂಕ್​ನಲ್ಲಿ ಡ್ರಾ ಮಾಡಲು ಚೆಕ್ ನೀಡಿದ್ದರು.

ಆದರೆ ಇಷ್ಟು ದೊಡ್ಡ ಮೊತ್ತವನ್ನು ಸಿಎಂ ರಿಲೀಫ್ ಫಂಡ್ ನಿಂದ ವಿಥ್ ಡ್ರಾ ಆಗುತ್ತಿರೋದು ಬ್ಯಾಂಕಿನವರಿಗೆ ಅನುಮಾನ ಮೂಡಿಸಿತ್ತು. ಬ್ಯಾಂಕ್ ಮ್ಯಾನೇಜರ್ ಆಂಧ್ರ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. ಈ ವೇಳೆಯಲ್ಲಿ ಖದೀಮರ ಕೈಚಳಕ ಬಯಲಾಗಿದೆ.

ಬ್ಯಾಂಕ್ ಮ್ಯಾನೇಜರ್ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲೀಗ ಪೊಲೀಸರು ತುಳು ಚಿತ್ರರಂಗದ ನಿರ್ದೇಶಕ ಉದಯ್ ಕುಮಾರ್, ಮೂಡಬಿದಿರೆ ನಿವಾಸಿ ಯೋಗಿಶ್ ಆಚಾರ್ಯ, ನಿರ್ದೇಶಕ ಉದಯ ಶೆಟ್ಟಿ ಕಾಂತಾವರ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ್ ಸುವರ್ಣ ಅವರನ್ನು ಬಂಧಿಸಿದ್ದಾರೆ.

ಈ ಆರೋಪಿಗಳು ಇಂತಹ ದಂಧೆ ನಡೆಸಿರೋದು ಇದೇ ಮೊದಲೇನಲ್ಲಾ. ಈ ಹಿಂದೆಯೂ ಇಂತಹದ್ದೇ ದಂಧೆಯನ್ನು ನಡೆಸಿರೋ ಕುರಿತು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಪೊಲೀಸರು ಈ ಹಿನ್ನೆಲೆಯಲ್ಲೀಗ ತನಿಖೆ ನಡೆಸುತ್ತಿದ್ದಾರೆ.

RELATED ARTICLES

Most Popular