ಕೊರೋನಾ ಎಫೆಕ್ಟ್…! ಈ ವರ್ಷ ಹಾಸನಾಂಬೆ ದೇಗುಲಕ್ಕೆ ಭಕ್ತರಿಗಿಲ್ಲ ಎಂಟ್ರಿ…!!

0

ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ  ಹಾಸನದ ಅಧಿದೇವತೆ ಹಾಸನಾಂಬಾ ದರ್ಶನಕ್ಕೂ ಈ ಬಾರಿ ಕೊರೋನಾ ಎಫೆಕ್ಟ್ ತಟ್ಟಿದ್ದು, ಹಾಸನಾಂಬೆ ನೇರ ದರ್ಶನಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.

ಈ ವರ್ಷ ನವೆಂಬರ್ 5 ರಿಂದ 17 ರವರೆಗೆ ಹಾಸನಾಂಬೆ ದರ್ಶನ ನೀಡಲಿದ್ದು, ದೇವಾಲಯದ ಬಾಗಿಲು ತೆರೆದು ಪೂಜೆ ಸಲ್ಲಿಸಲಾಗುತ್ತದೆ. ಆದರೆ ಹಾಸನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ದೇವಿಯ ನೇರ ದರ್ಶನಕ್ಕೆ ಅವಕಾಶ ನೀಡೋದಿಲ್ಲ ಎಂದು ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಗೋಪಾಲಯ್ಯ ಹೇಳಿದ್ದಾರೆ.

ದೇವಾಲಯದ ಹೊರಭಾಗದಲ್ಲಿ ಹಲವೆಡೆ ಎಲ್.ಇ.ಡಿ ಸ್ಕ್ರೀನ್ ಅಳವಡಿಸಿ ದೇವಿಯ ಪೂಜೆ ಹಾಗೂ ದರ್ಶನದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೇ ಆನ್ ಲೈನ್ ದರ್ಶನಕ್ಕೂ ಅವಕಾಶವಿರಲಿದೆ. ಆದರೆ ದೇವಿಯ ಸನ್ನಿಧಾನಕ್ಕೆ ಮಾತ್ರ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಾಸನಾಂಬೆ ದೇವಿ ವರ್ಷಕ್ಕೊಮ್ಮೆ ಮಾತ್ರ ಪೂಜೆಗೆ ಅವಕಾಶವಿರೋದರಿಂದ ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಲಕ್ಷಾಂತರ ಭಕ್ತರು ಈ ಅವಧಿಯಲ್ಲಿ ದೇವಿ ದರ್ಶನಕ್ಕೆ ಆಗಮಿಸೋದು ವಾಡಿಕೆ. ಆದರೆ ಈ ವರ್ಷ ಜಾಸ್ತಿ ಜನರು ಸೇರಿದಲ್ಲಿ ಸೋಂಕು ಹೆಚ್ಚುವ ಸಾಧ್ಯತೆ ಇರೋದರಿಂದ ಭಕ್ತರ ನೇರಪ್ರವೇಶಕ್ಕೆ ತಡೆ ಹಾಕಲಾಗಿದ್ದು, ಸ್ಕ್ರೀನ್ ಮೇಲೆ ದೇವಿ ದರ್ಶನ ಪಡೆದು ತೃಪ್ತರಾಗುವ ಸ್ಥಿತಿ ಎದುರಾಗಿದೆ.

Leave A Reply

Your email address will not be published.