ಉತ್ತರ ಪ್ರದೇಶ : Couples At OYO Rooms : ಓಯೋ ರೂಮ್ಗಳು ಅಂದರೆ ಅಲ್ಲಿ ಖಾಸಗಿತನಕ್ಕೆ ಧಕ್ಕೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ. ಈ ಮಾತಿಗೆ ಪುಷ್ಠಿ ಎಂಬಂತೆ ಓಯೋ ಆ್ಯಪ್ ಮೂಲಕ ಬುಕ್ ಮಾಡಲಾದ ಹೋಟೆಲ್ಗಳ ಕೊಠಡಿಗಳಲ್ಲಿ ರಹಸ್ಯ ಕ್ಯಾಮರಾಗಳನ್ನು ಇರಿಸುವ ಮೂಲಕ ದಂಪತಿಯ ಆತ್ಮೀಯ ಕ್ಷಣಗಳನ್ನು ರೆಕಾರ್ಡ್ ಮಾಡುತ್ತಿದ್ದ ಆರೋಪದ ಮೇಲಡ ಉತ್ತರ ಪ್ರದೇಶದ ನೋಯ್ಡಾದಲ್ಲಿ ಪೊಲೀಸರು ನಾಲ್ವರು ಖದೀಮರನ್ನು ಬಂಧಿಸಿದ್ದಾರೆ .
ಓಯೋ ರೂಮ್ನಲ್ಲಿ ಖಾಸಗಿ ಕ್ಷಣಗಳನ್ನು ಕಳೆದಿದ್ದ ದಂಪತಿಯ ವಿಡಿಯೋ ರೆಕಾರ್ಡ್ ಮಾಡಿದ್ದ ನಾಲ್ವರು ಖದೀಮರ ಗುಂಪು ಬಳಿಕ ದಂಪತಿಗೆ ಹಣ ನೀಡದಿದ್ದರೆ ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತೇವೆಂದು ಬೆದರಿಕೆ ಹಾಕುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದಲ್ಲಿ ಹೋಟೆಲ್ನ ಸಿಬ್ಬಂದಿಯ ಪಾತ್ರವಿಲ್ಲ ಎಂಬುದು ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಪೊಲೀಸರಿಗೆ ತಿಳಿದು ಬಂದಿದೆ.
ಆರೋಪಿಗಳ ಗುಂಪಿನ ಸದಸ್ಯರು ಓಯೋ ಹೋಟೆಲ್ಗಳಲ್ಲಿ ರೂಮ್ಗಳನ್ನು ಬುಕ್ ಮಾಡಿ ಅಲ್ಲಿ ರಹಸ್ಯ ಕ್ಯಾಮರಾಗಳನ್ನು ಅಂಟಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲವು ದಿನಗಳ ಬಳಿಕ ಮತ್ತೆ ಆ ಕೊಠಡಿಗೆ ಬಂದು ರಹಸ್ಯ ಕ್ಯಾಮರವನ್ನು ತೆಗೆದುಕೊಂಡು ಮನೆಗೆ ತೆರಳಿದ ಈ ದುಷ್ಕರ್ಮಿಗಳಿಗೆ ಆ ರೂಮಿನಲ್ಲಿ ತಂಗಿದ್ದ ದಂಪತಿಯ ಖಾಸಗಿ ಕ್ಷಣದ ವಿಡಿಯೋ ಲಭ್ಯವಾಗಿತ್ತು.
ಈ ಸಂಬಂಧ ಪೊಲೀಸರು ವಿಷ್ಣು ಸಿಂಗ್, ಅಬ್ದುಲ್ ವಹಾವ್, ಪಂಕಜ್ ಕುಮಾರ್ ಹಾಗೂ ಅನುರಾಗ್ ಕುಮಾರ್ ಸಿಂಗ್ ಎಂಬವರನ್ನು ಬಂಧಿಸಿದ್ದಾರೆ. ಈ ನಾಲ್ವರು ಮೂರು ವಿಭಿನ್ನ ಗ್ಯಾಂಗ್ನ ಸದಸ್ಯರು ಎನ್ನಲಾಗಿದೆ. ಅನಧಿಕೃತ ಕಾಲ್ ಸೆಂಟರ್ಗಳು, ಅಕ್ರಮ ಚಟುವಟಿಕೆಗಳಿಗೆ ನಕಲಿ ಸಿಮ್ ಕಾರ್ಡ್ಗಳನ್ನು ಒದಗಿಸುವುದು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಈ ಗುಂಪು ತೊಡಗಿಸಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 11 ಲ್ಯಾಪ್ಟಾಪ್ಗಳು, 21 ಮೊಬೈಲ್ಗಳು ಹಾಗೂ 22 ಎಟಿಎಂ ಕಾರ್ಡ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಖದೀಮರ ಗ್ಯಾಂಗ್ ದೇಶಾದ್ಯಂತ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿತ್ತು ಎನ್ನಲಾಗಿದೆ. ಈ ಗ್ಯಾಂಗ್ನಲ್ಲಿ ಓರ್ವ ತಲೆಮರೆಸಿಕೊಂಡಿದ್ದು ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ .
ಇದನ್ನು ಓದಿ : Arshdeep Singh: ಪಾಕ್ ಬ್ಯಾಟಿಂಗ್ ಬೆನ್ನೆಲುಬು ಮುರಿದ ಅರ್ಷದೀಪ್, ಅಂದು ಖಲಿಸ್ತಾನಿ ಅಂದವರೇ ಇಂದು ಬಹುಪರಾಕ್ ಹಾಕಿದ್ರು
ಇದನ್ನೂ ಓದಿ : Rayan Raj Sarja : ಚಿರು ಸರ್ಜಾ – ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ಬರ್ತಡೇ ಸಂಭ್ರಮ
Couples At OYO Rooms Secretly Filmed, 4 Arrested In Noida