Jacqueline Fernandez : ಭಾರತದಿಂದ ಪಲಾಯನ ಮಾಡಲು ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಯತ್ನ : ಜಾರಿ ನಿರ್ದೇಶನಾಲಯ ಗಂಭೀರ ಆರೋಪ

ದೆಹಲಿ : Jacqueline Fernandez : ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್​ ಚಂದ್ರಶೇಖರ್​ ಪ್ರಕರಣಕ್ಕೆ ಸಂಬಂಧಿಸಿದ 200 ಕೋಟಿ ರೂಪಾಯಿ ಮೌಲ್ಯದ ಸುಲಿಗೆ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಭಾರತದಿಂದ ಎಸ್ಕೇಪ್​ ಆಗಲು ಯತ್ನಿಸಿದ್ದಾರೆ ಎಂಬ ಶಾಕಿಂಗ್​ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.

ದೆಹಲಿ ಹೈಕೋರ್ಟ್ ಪ್ರಸ್ತುತ ನಟಿ ಜಾಕ್ವೆಲಿನ್​ ಫರ್ನಾಂಡಿಸ್​​ರ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದೆ. ನಟಿ ಜಾಕ್ವೆಲಿನ್​ ಪರ ವಕೀಲರು ನೀಡಿರುವ ಮಾಹಿತಿಯ ಪ್ರಕಾರ ಆಕೆಯು ಇಡಿಯಿಂದ ಯಾವುದೆ ದಾಖಲೆಗಳನ್ನು ಪಡೆದಿಲ್ಲ. ಈ ಪ್ರಕರಣ ಸಂಬಂಧ ಮುಂದಿನ ವಿಚಾರಣೆಯು ನವೆಂಬರ್​ 10ರಂದು ನಡೆಯಲಿದೆ. ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ಸಾಮಾನ್ಯ ಜಾಮೀನು ಅರ್ಜಿಯನ್ನು ವಿರೋಧಿಸಿ ನ್ಯಾಯಾಲಯಕ್ಕೆ ಶನಿವಾರ ನೀಡಿದ ಉತ್ತರದಲ್ಲಿ ಜಾರಿ ನಿರ್ದೇಶನಾಲಯವು, ಜಾಕ್ವೆಲಿನ್​ ಫರ್ನಾಂಡಿಸ್​ ತನ್ನ ಮೊಬೈಲ್​ ಫೋನ್​ನಿಂದ ಡೇಟಾಗಳನ್ನು ಅಳಿಸುವ ಮೂಲಕ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿದೆ.

ಜಾಕ್ವೆಲಿನ್​ ಫರ್ನಾಂಡಿಸ್​ ತನಿಖಾಧಿಕಾರಿಗಳಿ ಸಹಕಾರ ನೀಡುತ್ತಿಲ್ಲ ಎಂಬುದು ಇಡಿ ಆರೋಪವಾಗಿದೆ. ನಟಿ ಭಾರತವನ್ನು ತೊರೆಯಲು ಯತ್ನಿಸಿದ್ದರು. ಆದರೆ ಜಾಕ್ವೆಲಿನ್​ ವಿರುದ್ಧ ಲುಕ್​ಔಟ್​ ನೋಟಿಸ್​ನಲ್ಲಿ ಈಕೆಯ ಹೆಸರು ಇದ್ದರಿಂದ ಈಕೆಗೆ ಅದು ಸಾಧ್ಯವಾಗಲಿಲ್ಲ ಎಂದು ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್​ಗೆ ತಿಳಿಸಿದೆ. ಪ್ರಕರಣದ ಇತರ ಆರೋಪಿಗಳೊಂದಿಗೆ ಮುಖಾಮುಖಿ ಮಾಡಿದಾಗ ಹಾಗೂ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿದಾದ ಫರ್ನಾಂಡಿಸ್​ ಇದಕ್ಕೆ ಸಹಕರಿಸಲು ನಿರಾಕರಿಸಿದ್ದಾರೆ ಎಂದು ಇಡಿ ಗಂಭೀರ ಆರೋಪ ಮಾಡಿದೆ.

ದೆಹಲಿಯಲ್ಲಿ ಜೈಲುಪಾಲಾಗಿರುವ ವಂಚಕ ಸುಕೇಶ್​ ಚಂದ್ರಶೇಖರ್​, ಫೋರ್ಟಿಸ್​ ಹೆಲ್ತ್​ಕೇರ್​ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್​ ಸಿಂಗ್​​ರ ಪತ್ನಿ ಅದಿತಿ ಸಿಂಗ್​ ಸೇರಿದಂತೆ ಅನೇಕರಿಗೆ ವಂಚಿಸಿದ್ದ. ಸುಕೇಶ್​ ಚಂದ್ರಶೇಖರ್​ನಿಂದ ಜಾಕ್ವೆಲಿನ್​ ಫರ್ನಾಂಡಿಸ್​ ಹಾಗೂ ಮತ್ತೋರ್ವ ಬಾಲಿವುಡ್​ ನಟಿ ನೋರಾ ಫತೇಹಿ ಐಷಾರಾಮಿ ಕಾರುಗಳು ಸೇರಿದಂತೆಬ ಇತರೆ ದುಬಾರಿ ಉಡುಗೊರೆಗಳನ್ನು ಪಡೆದಿದ್ದರು ಎಂದು ಇಡಿ ಹೇಳಿದೆ.

ಇದನ್ನು ಓದಿ : Rayan Raj Sarja : ಚಿರು ಸರ್ಜಾ – ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ಬರ್ತಡೇ ಸಂಭ್ರಮ

ಇದನ್ನೂ ಓದಿ : Couples At OYO Rooms : ಓಯೋ ರೂಮಿನಲ್ಲಿ ದಂಪತಿಯ ಖಾಸಗಿ ಕ್ಷಣದ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್​ಮೇಲ್​ : ನಾಲ್ವರ ಬಂಧನ

Jacqueline Fernandez Tried To Flee India, Destroy Evidence: Agency

Comments are closed.