ಮಂಗಳವಾರ, ಏಪ್ರಿಲ್ 29, 2025
HomeCoastal NewsCrime News : ತೆಕ್ಕಟ್ಟೆ : ಸ್ಕೂಟಿ ಸ್ಕಿಡ್‌ ಆಗಿ ಉದ್ಯಮಿ ಸಾವು ಪ್ರಕರಣ :...

Crime News : ತೆಕ್ಕಟ್ಟೆ : ಸ್ಕೂಟಿ ಸ್ಕಿಡ್‌ ಆಗಿ ಉದ್ಯಮಿ ಸಾವು ಪ್ರಕರಣ : ಮೃತರ ಮನೆಗೆ ಶಾಸಕ ಕಿರಣ್‌ ಕೊಡ್ಗಿ ಭೇಟಿ

- Advertisement -

ಕುಂದಾಪುರ : Crime News : ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಸ್ಕೂಟಿ ಸ್ಕಿಡ್‌ ಆಗಿ ಉದ್ಯಮಿ ದಿವಾಕರ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಮಲ್ಯಾಡಿ ಸಮೀಪದಲ್ಲಿ ಮೃತಪಟ್ಟಿದ್ದರು. ಮೃತರ ಮನೆಗೆ ಇದೀಗ ಕುಂದಾಪುರ ಶಾಸಕ ಕಿರಣ್‌ ಕೊಡ್ಗಿ ಅವರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಅಲ್ಲದೇ ವೈಯಕ್ತಿಕ ಧನಸಹಾಯ ನೀಡಿದ್ದಾರೆ.

ಕೆದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಾನಾಡಿ ಸಂಪತ್ ಕುಮಾರ್ ಶೆಟ್ಟಿ. ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಶೆಟ್ಟಿ ಉಳ್ತೂರು, ಸ್ಥಳೀಯರಾದ ಪ್ರಭಾಕರ್ ಶೆಟ್ಟಿ ಮಲ್ಯಾಡಿ, ಗಣೇಶ್ ಶೆಟ್ಟಿ, ಸುಧೀರ್ ಶೆಟ್ಟಿ, ಪ್ರತಾಪ್ ಶೆಟ್ಟಿ ಉಳ್ತೂರು ಹಾಗೂ ಅಂಬರೀಶ್ ಉಪಸ್ಥಿತರಿದ್ದರು.

ಇದನ್ನೂ ಓದಿ : Udupi Crime : ಅಕ್ರಮ ಅಸ್ತಿ ಪ್ರಕರಣ: ಉಡುಪಿ ಸರಕಾರಿ ಅಧಿಕಾರಿಗೆ 1ವರ್ಷ ಶಿಕ್ಷೆ ಹಾಗೂ ರೂ 1ಲಕ್ಷ ದಂಡ

ಇದನ್ನೂ ಓದಿ : Vinay Kumar Sorake : ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ರವರಿಗೆ ಮಾತೃ ವಿಯೋಗ

ಜುಲೈ 4 ರಂದು ರಾತ್ರಿ ಕೆಲಸ ಮುಗಿಸಿಕೊಂಡು ದಿವಾಕರ ಶೆಟ್ಟಿ ಅವರು ಮನೆಗೆ ತೆರಳುತ್ತಿದ್ದರು. ಭಾರೀ ಮಳೆಯಿಂದಾಗಿ ಸ್ಕೂಟಿ ಸ್ಕಿಡ್‌ ಆಗಿ, ತಡೆಗೋಡೆಯಿಲ್ಲದ ಕೆರೆಗೆ ಬಿದ್ದಿದೆ. ಇದರಿಂದಾಗಿ ದಿವಾಕರ ಶೆಟ್ಟಿ ಅವರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದರು. ತಡರಾತ್ರಿಯಾದರೂ ಪತಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು, ಸ್ಥಳೀಯರು ಹುಡುಕಾಟ ನಡೆಸಿದ್ದರು. ಆದರೆ ಮಲ್ಯಾಡಿ ಸಮೀಪದ ಕೆರೆಯಲ್ಲಿ ಸ್ಕೂಟಿ ಪತ್ತೆಯಾಗಿತ್ತು. ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞ ಈಶ್ವರ ಮಲ್ಪೆ ಅವರ ಸಹಕಾರದೊಂದಿಗೆ ಸ್ಕೂಟರ್‌ ಮೇಲಕ್ಕೆತ್ತಿದ್ದಾರೆ. ನಂತರದ ಕೆರೆಯಲ್ಲಿ ಬೆಳಗಿನ ಜಾವ ದಿವಾಕರ ಶೆಟ್ಟಿ ಅವರ ಶವ ಪತ್ತೆಯಾಗಿತ್ತು.

Crime News: Thekkatte: Case of businessman’s death due to scooty skid: MLA Kiran Kodgi visits deceased’s house

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular