ನವದೆಹಲಿ: Cyber Crime: ಭದ್ರತಾ ಸೇವಾ ಸಂಸ್ಥೆಯೊಂದರ ನಿರ್ದೇಶಕರ ಬ್ಯಾಂಕ್ ಅಕೌಂಟ್ ನಿಂದ ಏಕಾಏಕಿ 50 ಲಕ್ಷ ರೂ. ಎಗರಿಸಲಾಗಿದೆ. ಸೈಬರ್ ಕಳ್ಳರ ಕರಾಮತ್ತಿಗೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಓಟಿಪಿ ಕೇಳದೆಯೇ ಮೊಬೈಲ್ ನಂಬರ್ ಗೆ ಪದೇ ಪದೇ ಮಿಸ್ಡ್ ಕಾಲ್ ನೀಡಿಯೇ ಅಕೌಂಟ್ ನಿಂದ ಲಕ್ಷ ಲಕ್ಷ ಪೀಕಿದ್ದಾರೆ. ಈ ಕ್ರೈಂ ನ ಮಾಸ್ಟರ್ ಮೈಂಡ್ ಯಾರು ಅನ್ನೋ ತನಿಖೆ ನಡೆಯುತ್ತಿದೆ.
ಜಾರ್ಖಂಡ್ ನ ಬುಡಕಟ್ಟು ಜಿಲ್ಲೆ ಜಮ್ತಾರಾ. ಇಲ್ಲಿನ ಬುಡಕಟ್ಟು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲೇಬೇಕೆಂಬ ಛಲದಿಂದ ಸಮಾಜ ಸುಧಾಕರ ಈಶ್ವರಚಂದ್ರ ವಿದ್ಯಾಸಾಗರ್ 18 ವರ್ಷಗಳ ತನ್ನ ಜೀವನವನ್ನು ಮುಡಿಪಿಟ್ಟರು. ಅಂಥ ಒಂದು ಪ್ರದೇಶ ಇದೀಗ ಸೈಬರ್ ಕ್ರೈಂ ಕುಖ್ಯಾತ ಕೇಂದ್ರವೆಂದೇ ಹೆಸರು ಪಡೆಯುತ್ತಿದೆ. ಭದ್ರತಾ ಸಂಸ್ಥೆಯೊಂದರ ನಿರ್ದೇಶಕರ ಬ್ಯಾಂಕ್ ಅಕೌಂಟ್ ನಿಂದ ಏಕಾಏಕಿ 50 ಲಕ್ಷ ರೂ. ಎಗರಿಸಲಾಗಿದ್ದು, ಖದೀಮರು ಇದೇ ಪ್ರದೇಶದಲ್ಲಿ ಚಾಲಾಕಿತನ ತೋರಿದ್ದಾರೆ ಎನ್ನಲಾಗುತ್ತಿದೆ. ಈ ಕ್ರೈಂ ಹಿಂದಿನ ಮಾಸ್ಟರ್ ಮೈಂಡ್ ಗಳು ಜಮ್ತಾರಾ ಪ್ರದೇಶದಲ್ಲಿ ನೆಲೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: Credit Card Payment Update : ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ರಿಲೀಫ್ : ಬಾಕಿ ಹಣ ಪಾವತಿಸಲು RBI ಹೊಸ ರೂಲ್ಸ್
Cyber Crime : 50 ಲಕ್ಷ ರೂ. ಹಣ ಎಗರಿಸಿದ್ದು ಹೇಗೆ..?
- ಕಳೆದ ಅಕ್ಟೋಬರ್ 10ರಂದು ನಡೆದ ಪ್ರಕರಣ ಇದಾಗಿದೆ.
- ಭದ್ರತಾ ಸೇವೆಯ ಸಂಸ್ಥೆಗಳ ನಿರ್ದೇಶಕರು ರಾತ್ರಿ 7ರಿಂದ 8.44ರ ನಡುವೆ ಮೇಲಿನಿಂದ ಮೇಲೆ ಮಿಸ್ಟ್ ಕಾಲ್ ಗಳನ್ನು ಸ್ವೀಕರಿಸಿದ್ದಾರೆ.
- ಪದೇ ಪದೇ ಮಿಸ್ಡ್ ಕಾಲ್ ಬರುತ್ತಿದ್ದು, ಕೆಲ ಕರೆಗಳನ್ನಷ್ಟೆ ಸ್ವೀಕರಿಸಿದ್ದರು. ಮತ್ತೆ ಕೆಲವು ಕರೆಗಳನ್ನು ನಿರ್ಲಕ್ಷಿಸಿದ್ದರು.
- ಇದಾದ ಬಳಿಕ ಮೊಬೈಲ್ ನಲ್ಲಿ ಮೆಸೇಜ್ ಪರಿಶೀಲಿಸಿದ ಅಧಿಕಾರಿಗೆ 50 ಲಕ್ಷ ರೂ. ಮೌಲ್ಯದ ಆರ್‍ಟಿಜಿಎಸ್ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ.
- ಅಲ್ಲದೇ ಹಣ ವಹಿವಾಟಿಗೆ ಸಂಬಂಧಪಟ್ಟ ಹಲವಾರು ಮೆಸೇಜ್ ಗಳು ಬ್ಯಾಂಕ್ ನಿಂದ ಬಂದಿರುವುದು ತಿಳಿದುಬಂದಿದೆ.
- 50 ಲಕ್ಷಕ್ಕೂ ಅಧಿಕ ಮೌಲ್ಯದ ಹಲವಾರು ಆರ್‍ಟಿಜಿಎಸ್ ವಹಿವಾಟುಗಳನ್ನು ವಂಚಕರು ವ್ಯಕ್ತಿಗೆ ಸಂಬಂಧಿಸಿದ ಕಂಪೆನಿಯ ಚಾಲ್ತಿ ಖಾತೆಯಿಂದ ನಡೆಸಿದ್ದಾರೆ.
ಸೈಬರ್ ಕ್ರೈಂ ಬಗ್ಗೆ ಪೊಲೀಸರ ಅನುಮಾನಗಳೇನು..?
ಇನ್ನು ಈ ವಂಚನೆಯಲ್ಲಿ ವಂಚಕರು ಸಿಮ್ ಸ್ವಾಪ್ ನಡೆಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಖದೀಮರು ಆರ್‍ಟಿಜಿಎಸ್ ವರ್ಗಾವಣೆ ನಡೆಸಿರಬಹುದು ಹಾಗೂ ಫೋನ್ ಮೂಲಕ ಓಟಿಪಿ ಸಕ್ರಿಯಗೊಳಿಸಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಸಮನಾಂತರ ಕರೆ ಐವಿಆರ್ ಮೂಲಕ ಒಟಿಪಿ ನಮೂದಿಸಿರಬಹುದು ಎಂಬ ಅನುಮಾನಗಳು ಮೂಡಿವೆ.
ಇದನ್ನೂ ಓದಿ: Cyclone alert: ಮಾಂಡೌಸ್ ಸೈಕ್ಲೋನ್ ಬೆನ್ನಲ್ಲೇ ನಾಳೆಯಿಂದ ಅಪ್ಪಳಿಸಲಿದೆಯಂತೆ ಮತ್ತೊಂದು ಚಂಡಮಾರುತ..!
ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು..?
- ಸಿಮ್ ಕಾರ್ಡ್ ಗೆ ಸಂಬಂಧಪಟ್ಟ ಗುರುತಿನ ಚೀಟಿಗಳನ್ನು ಹಂಚಿಕೊಳ್ಳಬಾರದು.
- ಮೊಬೈಲ್ ನೆಟ್ ವರ್ಕ್ ಬಗ್ಗೆ ಜಾಗರೂಕರಾಗಿರಬೇಕು.
- ತುಂಬಾ ಸಮಯದಿಂದ ಬಳಕೆಯಲ್ಲಿಲ್ಲದ ಮೊಬೈಲ್ ಸಂಖ್ಯೆಗೆ ನಕಲಿ ಸಿಮ್ ನೀಡಲಾಗಿದೆಯೇ ಅನ್ನೋದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
Cyber Crime: No OTP Asked Just Missed Calls Man Loses 50 Lakhs rupees