China guest house Kabul :ಕಾಬೂಲ್‌ನಲ್ಲಿ ಚೀನಾ ಮೂಲದ ಹೋಟೆಲ್‌ನಲ್ಲಿ ಸ್ಪೋಟ ನಡೆಸಿದ ಉಗ್ರರು

ಕಾಬೂಲ್‌ : ಸೋಮವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ (China guest house Kabul) ಚೀನಾ ವ್ಯಾಪಾರ ಸಂದರ್ಶಕರಿಂದ ಜನಪ್ರಿಯವಾಗಿರುವ ಅತಿಥಿ ಗೃಹದ ಬಳಿ ಸ್ಫೋಟದ ನಂತರ ಗುಂಡಿನ ಸದ್ದು ಕೇಳಿಬಂದಿದೆ. ಕಾಬೂಲ್‌ನ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾದ ಕಾಬೂಲ್‌ನ ಶಹರ್-ಎ-ನಾವ್ ಪ್ರದೇಶದಿಂದ ಈ ಘಟನೆ ವರದಿಯಾಗಿದೆ.

ಮೊದಲಿಗೆ ಅತಿಥಿ ಗೃಹದಲ್ಲಿ ತುಂಬಾ ಜೋರಾಗಿ ಸ್ಫೋಟವಾಗಿತ್ತು. ನಂತರ ಸಾಕಷ್ಟು ಗುಂಡಿನ ಚಕಮಕಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಬಾಂಬ್ ಸ್ಫೋಟಗಳು ಮತ್ತು ದಾಳಿಗಳು ನಡೆದಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಈ ಚೀನಾ ಮೂಲದವರ ಹೊಟೇಲ್‌ ಮೇಲೆ ಉಗ್ರರಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ. ಇದೀಗ ಇಡೀ ಹೋಟೆಲ್‌ ಸುತ್ತ ಆಫ್ಘನ್‌ ಸೇನಾ ಯೋಧರು ಉಗ್ರರ ಸೆರೆಯಾಗಿ ಹೊಂಚು ಹಾಕಿದ್ದಾರೆ. ಚೀನಾ ಪ್ರಜೆಗಳನ್ನು ಒತ್ತೆಯಾಳಾಗಿ ಇಟ್ಟಿಕೊಂಡಿರುವ ಮಾಹಿತಿ ಕೂಡ ಬಂದಿರುತ್ತದೆ.

ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಗಮನಾರ್ಹ ಸಂಖ್ಯೆಯ ಚೀನೀ ವ್ಯಾಪಾರಸ್ಥರು ಅಫ್ಘಾನಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವರದಿ ಆಗಿದೆ. ಬೀಜಿಂಗ್ ಅಧಿಕೃತವಾಗಿ ಆಡಳಿತವನ್ನು ಗುರುತಿಸದಿದ್ದರೂ ಸಹ ಕಾಬೂಲ್‌ನಲ್ಲಿ ಪೂರ್ಣ ರಾಯಭಾರ ಕಚೇರಿಯನ್ನು ನಿರ್ವಹಿಸುತ್ತದೆ. ಕಳೆದ ವಾರ, ಅಫ್ಘಾನಿಸ್ತಾನದ ಮಜರ್-ಇ-ಶರೀಫ್‌ನಲ್ಲಿ ರಸ್ತೆಬದಿಯ ಸ್ಫೋಟದಲ್ಲಿ ಏಳು ಜನರು ಸಾವನ್ನಪ್ಪಿದ್ದರು. ಮೃತಪಟ್ಟವರಲ್ಲಿ ಬಸ್ಸಿನಲ್ಲಿದ್ದ ಪೆಟ್ರೋಲಿಯಂ ಕಂಪನಿಯ ಉದ್ಯೋಗಿಗಳು ಸೇರಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : MP Police Big Operation: ಮಧ್ಯಪ್ರದೇಶ ಪೊಲೀಸರ ವೀಕೆಂಡ್ ಭರ್ಜರಿ ಬೇಟೆ; 9 ಸಾವಿರಕ್ಕೂ ಹೆಚ್ಚು ಕ್ರಿಮಿನಲ್ಸ್ ಗಳು ಜೈಲುಪಾಲು..!

ಇದನ್ನೂ ಓದಿ : Punjab Police Station : ಪಂಜಾಬ್‌ ಪೊಲೀಸ್‌ ಠಾಣೆ ಮೇಲೆ ದಾಳಿ ಪ್ರಕರಣ : ರಾಕೆಟ್‌ ಲಾಂಚರ್‌ ವಶಪಡಿಸಿಕೊಂಡ ಎನ್‌ಐಎ

ಇದನ್ನೂ ಓದಿ : Cyber Crime: ಸೈಬರ್ ಕಳ್ಳರ ಕರಾಮತ್ತು: ಜಸ್ಟ್ ಮಿಸ್ಡ್ ಕಾಲ್ ಮೂಲಕವೇ 50 ಲಕ್ಷ ರೂ. ಎಗರಿಸಿದ್ದು ಹೇಗೆ ಗೊತ್ತಾ?

ಸುಮಾರು ಎರಡು ವಾರಗಳ ಹಿಂದೆ, ಉತ್ತರ ಅಫ್ಘಾನಿಸ್ತಾನದ ಧಾರ್ಮಿಕ ಶಾಲೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಕನಿಷ್ಠ 17 ಜನರು ಸಾವನ್ನಪ್ಪಿದರು ಮತ್ತು 26 ಜನರು ಗಾಯಗೊಂಡಿದ್ದರು. ಸಮಂಗನ್ ಪ್ರಾಂತ್ಯದ ಅಯ್ಬಕ್ ನಗರದಲ್ಲಿ ಜನರು ಪ್ರಾರ್ಥನೆ ಮುಗಿಸಿ ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಒಂಬತ್ತರಿಂದ 15 ವರ್ಷ ವಯಸ್ಸಿನ ಮಕ್ಕಳು ಎಂದು ವರದಿ ಆಗಿದೆ. ಈ ಸರಣಿ ಸ್ಫೋಟದಿಂದ ಅಫ್ಘಾನಿಸ್ತಾನದಲ್ಲಿ ವಾಸಿಸುವ ಹೊರರಾಷ್ಟ್ರದ ಜನರಿಗೆ ಆತಂಕ ಉಂಟಾಗಿದೆ.

China guest house Kabul: Terrorists blew up a Chinese-based hotel in Kabul

Comments are closed.