ನವದೆಹಲಿ: (Dehli Fire incident) ದೆಹಲಿಯ ಬಹುಮಹಡಿ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 21 ಕಾರುಗಳು ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿವೆ. ಸೋಮವಾರ ಬೆಳಿಗ್ಗೆ ದೆಹಲಿಯ ಸುಭಾಷ್ ನಗರದಲ್ಲಿ ಅವಘಡ ಸಂಭವಿಸಿದೆ. ಆದರೆ ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಪಾರ್ಕಿಂಗ್ ಸ್ಥಳದಲ್ಲಿ ವ್ಯಕ್ತಿಯೋರ್ವ ಅನುಮಾನಸ್ಪದವಾಗಿ ಓಡಾಡುತ್ತಿರುವುದು ತಿಳಿದು ಬಂದಿದೆ.
ಬೆಂಕಿ ಅವಘಡ (Dehli Fire incident) ಸಂಭವಿಸಿದ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. “ಘಟನೆಯ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇದರ ಕುರಿತಾಗಿ ತನಿಖೆ ಮಾಡಲು ಬಹು ತಂಡಗಳನ್ನು ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮುಂಜಾನೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 6:10ರ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಹಿರಿಯ ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೂರು ಹಂತದ ಕಾರ್ ಪಾರ್ಕಿಂಗ್‌ನ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ 14 ಕಾರುಗಳ ನೋಂದಣಿ ವಿವರಗಳನ್ನು ಪತ್ತೆಹಚ್ಚಲಾಗಿದೆ ಹಾಗೂ ಉಳಿದ ಏಳು ಕಾರುಗಳು ನೋಂದಣಿ ಇಲ್ಲದೆ ಪಾರ್ಕಿಂಗ್ ನಲ್ಲಿ ನಿಂತಿವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಕ್ಷ ಆಗ್ರಹಿಸಿದೆ. ಬಹುಮಹಡಿ ಕಾರ್ ಪಾರ್ಕಿಂಗ್‌ಗೆ ಭೇಟಿ ನೀಡಿದ ದೆಹಲಿ ಬಿಜೆಪಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ, ಇದು ಗಂಭೀರ ವಿಷಯವಾಗಿದೆ ಮತ್ತು ಘಟನೆಯ ಬಗ್ಗೆ ಎಂಸಿಡಿ ಮುಖ್ಯಸ್ಥರೊಂದಿಗೆ ಮಾತನಾಡುವುದಾಗಿ ಹೇಳಿದರು.
ಇದನ್ನೂ ಓದಿ : Tunisha suicide case: ತುನಿಶಾ ಶರ್ಮಾರನ್ನು ಅತಿಯಾಗಿ ಕಾಡುತ್ತಿತ್ತು ‘ಆ’ ಒಂದು ನೋವು; ಆತ್ಮಹತ್ಯೆಗೆ ಅದೇ ಕಾರಣ ಎಂದ ಪೊಲೀಸರು..!
(Delhi Fire incident) A fire broke out in a multi-storied parking lot in Delhi and 21 cars caught fire and got burnt. An accident took place in Delhi’s Subhash Nagar on Monday morning.