ಕ್ರಿಸ್‌ಮಸ್‌ ದಿನ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್‌ ಕಂಡ 5 ಸಿನಿಮಾಗಳು ಯಾವುವು ಗೊತ್ತಾ ?

ಈ ವರ್ಷ ಬಿಡುಗಡೆಯಾದ ಹಲವಾರು ಸಿನಿಮಾಗಳು ಸಾಕಷ್ಟು ಗಳಿಕೆ ಕಂಡಿದೆ. ಭಾರತದ ಸುಮಾರು 30 ಸಿನಿಮಾಗಳು ಈ ವರ್ಷ ನೂರು ಕೋಟಿ ಕ್ಲಬ್‌ ಸೇರಿದ್ದು, ಹೆಚ್ಚಾಗಿ ಸೌತ್‌ ಇಂಡಸ್ಟ್ರಿ ಸಿನಿಮಾಗಳು ಅಬ್ಬರಿಸಿ ಬಾಲಿವುಡ್‌ ಎದುರು ಗೆದ್ದು (Christmas Day) ಬೀಗಿವೆ. ಸೌತ್‌ ಇಂಡಿಯಾ ಸಿನಿಮಾಗಳಾದ ಕೆಜಿಎಫ್‌ ಚಾಪ್ಟರ್‌ 2 ಹಾಗೂ ಆರ್‌ಆರ್‌ಆರ್‌ ಈ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಸಾವಿರ ಕೋಟಿಗಿಂತ ಅಧಿಕ ಹಣ ಗಳಿಸಿದ ಇಂಡಿಯನ್‌ ಸಿನಿಮಾ ಎನಿಸಿಕೊಂಡಿದೆ.

ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ 2022ರ ಅಂತಿಮ ತಿಂಗಳ ನಾಲ್ಕನೇ ಶುಕ್ರವಾರ ಬಿಡುಗಡೆಗೊಂಡ ಸಿನಿಮಾಗಳು ಸಹ ಒಳ್ಳೆಯ ಗಳಿಕೆಯನ್ನು ಮಾಡುತ್ತಿವೆ. ಡಿಸೆಂಬರ್ 23ರ ಶುಕ್ರವಾರದಂದು ಶಿವ ರಾಜ್‌ಕುಮಾರ್ ನಟನೆಯ ವೇದ ಸಿನಿಮಾ ಬಿಡುಗಡೆಗೊಂಡರೆ, ತೆಲುಗಿನಲ್ಲಿ ರವಿತೇಜಾ ನಟನೆಯ ಧಮಾಕಾ ಬಿಡುಗಡೆಗೊಂಡಿದೆ. ಇನ್ನು ತಮಿಳಿನಲ್ಲಿ ನಯನತಾರಾ ನಟನೆಯ ಹಾರರ್ ಥ್ರಿಲ್ಲರ್ ಕನೆಕ್ಟ್ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ನಟನೆಯ ಕಾಪ್ಪ ಸಿನಿಮಾಗಳು ಬಿಡುಗಡೆಗೊಂಡಿವೆ.

ಬಾಲಿವುಡ್‌ನಲ್ಲಿ ಸರ್ಕಸ್ ಎಂಬ ಸಿನಿಮಾವೂ ಸಹ ತೆರೆಗೆ ಬಂದಿದೆ. ಹೀಗೆ ಇಷ್ಟು ದೊಡ್ಡ ಸಿನಿಮಾಗಳು ಡಿಸೆಂಬರ್ 23ರ ಶುಕ್ರವಾರ ಬಿಡುಗಡೆಯಾದರೂ ಸಹ ಇದಕ್ಕೂ ಹಿಂದಿನ ವಾರದಲ್ಲಿ ತೆರೆಕಂಡಿದ್ದ ‘ಅವತಾರ್ ದ ವೇ ಆಫ್ ವಾಟರ್’ ಸಿನಿಮಾದ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಕ್ರಿಸ್‌ಮಸ್ ದಿನದ ಗಳಿಕೆಯಲ್ಲಿ, ಮೇಲ್ಕಂಡ ಸಿನಿಮಾಗಳು ಈ ವಾರ ಬಿಡುಗಡೆಯಾಗಿದ್ದರೂ ಸಹ ಕ್ರಿಸ್‌ಮಸ್ ದಿನದಂದು ( ಡಿಸೆಂಬರ್ 25 ) ಭಾರತದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಅವತಾರ್ ದ ವೇ ಆಫ್ ವಾಟರ್ ತನ್ನದಾಗಿಸಿಕೊಂಡಿದೆ.

ಹೌದು, ಕ್ರಿಸ್‌ಮಸ್ ಹಾಗೂ ಭಾನುವಾರದ ಬಿಡುವಿನಲ್ಲಿದ್ದ ಸಿನಿ ರಸಿಕರು ಡಿಸೆಂಬರ್ 25ರಂದು ಸಿನಿಮಾಮಂದಿರಗಳತ್ತ ಹೆಜ್ಜೆ ಹಾಕಿದ್ದು, ಹೆಚ್ಚು ಹಣವನ್ನು ಅವತಾರ್ ತೆಕ್ಕೆಗೆ ಹಾಕಿದ್ದಾರೆ. ಈ ದಿನದಂದು ಅವತಾರ್ ದ ವೇ ಆಫ್ ವಾಟರ್ ಸಿನಿಮಾ ಭಾರತದಲ್ಲಿ 36.25 ಕೋಟಿ ರೂಪಾಯಿ ಕಲೆಕ್ಷನ್ ಅನ್ನು ಮಾಡಿದೆ. ವೇದ ಐದನೇ ಸ್ಥಾನದಲ್ಲಿ ಇನ್ನು ಕ್ರಿಸ್‌ಮಸ್ ವಿಶೇಷ ದಿನದಂದು ಭಾರತದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಶಿವರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬಿನೇಶನ್‌ನ ವೇದ ಸಿನಿಮಾ ಐದನೇ ಸ್ಥಾನದಲ್ಲಿದೆ. ವೇದ ಸಿನಿಮಾ ತನ್ನ ಮೂರನೇ ದಿನ 1.90 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇನ್ನು ವೇದ ಸಿನಿಮಾದ ಕತೆಗೆ ಕನ್ನಡ ಸಿನಿ ರಸಿಕರು ಫುಲ್ ಮಾರ್ಕ್ಸ್ ನೀಡಿದ್ದು, ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಈ ಸಿನಿಮಾ ಮೊದಲ ಹಾಗೂ ಎರಡನೇ ದಿನಗಳಿಗಿಂತ ಮೂರನೇ ದಿನ ಹೆಚ್ಚು ಕಲೆಕ್ಷನ್‌ನ್ನು ಗಳಿಸಿದೆ.

ಇದನ್ನೂ ಓದಿ : Kranti Song Release Case : ಕ್ರಾಂತಿ ಹಾಡು ರಿಲೀಸ್‌ ವೇಳೆ ದರ್ಶನ್‌ ಚಪ್ಪಲಿ ಎಸೆತ ಪ್ರಕರಣ : ಮೂವರ ಬಂಧನ

ಇದನ್ನೂ ಓದಿ : Tunisha suicide case: ತುನಿಶಾ ಶರ್ಮಾರನ್ನು ಅತಿಯಾಗಿ ಕಾಡುತ್ತಿತ್ತು ‘ಆ’ ಒಂದು ನೋವು; ಆತ್ಮಹತ್ಯೆಗೆ ಅದೇ ಕಾರಣ ಎಂದ ಪೊಲೀಸರು..!

ಇದನ್ನೂ ಓದಿ : Actresses Diet Information:ಪಿಟ್‌ ಆಗಿರಲು ನಟಿಯರು ಯಾವೆಲ್ಲಾ ಆಹಾರ ಸೇವನೆ ಮಾಡುತ್ತಾರೆ ಗೊತ್ತಾ?

ಕ್ರಿಸ್‌ಮಸ್ ಅತಿಹೆಚ್ಚು ಗಳಿಸಿದ ಟಾಪ್ 5 ಸಿನಿಮಾಗಳ ವಿವರ :
ಕ್ರಿಸ್‌ಮಸ್ 2022ರಂದು ಭಾರತದಲ್ಲಿ ಅತಿಹೆಚ್ಚುಕಲೆಕ್ಷನ್ ಮಾಡಿದ ಚಿತ್ರಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ.

  1. ಅವತಾರ್ ದ ವೇ ಆಫ್ ವಾಟರ್: 36.25 ಕೋಟಿ ಗ್ರಾಸ್ ಕಲೆಕ್ಷನ್
  2. ಸರ್ಕಸ್ : 8.93 ಕೋಟಿ ಗ್ರಾಸ್ ಕಲೆಕ್ಷನ್
  3. ಧಮಾಕಾ : 6.89 ಕೋಟಿ ಗ್ರಾಸ್ ಕಲೆಕ್ಷನ್
  4. ದೃಶ್ಯಂ : 2.03 ಕೋಟಿ ಗ್ರಾಸ್ ಕಲೆಕ್ಷನ್
  5. ವೇದ : 1.90 ಕೋಟಿ ಗ್ರಾಸ್ ಕಲೆಕ್ಷನ್

Do you know which are the 5 movies that saw the highest collection in India on Christmas day?

Comments are closed.