Delhi crime : 52 ವರ್ಷದ ಮಹಿಳೆಯು ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆಯು ದಕ್ಷಿಣ ದೆಹಲಿಯ ಸಾಕೇತ್ನಲ್ಲಿ ನಡೆದಿದೆ. ಪತ್ನಿಯನ್ನು ಕೊಲೆಗೈಯಲಾಗಿದ್ದು ಆಕೆಯ ಪತಿಗೆ ಗಂಭೀರ ಗಾಯಗಳಾಗಿವೆ ಎಂದು ಸಾಕೇತ್ನ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದಂಪತಿಯ ಸೋದರಳಿಯ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ವೇಳೆಯಲ್ಲಿ ಸೋದರಳಿಯ ನನಗೆ ನನ್ನ ಅತ್ತೆಯು ಕರೆ ಮಾಡಿ ಆದಷ್ಟು ನಮ್ಮ ಮನೆಗೆ ಆಗಮಿಸುವಂತೆ ಹೇಳಿದ್ದರು. ಕೂಡಲೇ ಸೋದರಳಿಯ ಅವರ ಮನೆಗೆ ತೆರಳಿದ ವೇಳೆ ಮಾವ ಮನೆ ಬಾಗಿಲನ್ನು ತೆರೆದರು. ಆಗ ಅವರ ಬಟ್ಟೆಯಲ್ಲಾ ರಕ್ತಸಿಕ್ತವಾಗಿತ್ತು. ಹಾಗೂ ಅವರ ಕುತ್ತಿಗೆಯ ಮೇಲೆ ಆಳವಾದ ಗಾಯವಾಗಿತ್ತು.
57 ವರ್ಷದ ಮೃತ ಮಹಿಳೆಯ ಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಯಾವುದೇ ಹೇಳಿಕೆಗಳನ್ನು ನೀಡಲು ಶಕ್ತರಿಲ್ಲದ ಕಾರಣ ಇಲ್ಲಿಯವರೆಗೆ ಅವರನ್ನು ವಿಚಾರಣೆಗೊಳಪಡಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಂಪತಿ ವಾಸವಿದ್ದ ಮನೆಗೆ ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಭೇಟಿ ನೀಡಿದ್ದಾರೆ. ಈ ವೇಳೆಯ ದಂಪತಿ ವಾಸವಿದ್ದ ಮನೆಯ ಮಲಗುವ ಕೋಣೆಯ ಪಕ್ಕದಲ್ಲಿರುವ ಡ್ರಾಯಿಂಗ್ ರೂಮ್ನಲ್ಲಿ ರಕ್ತದ ಕಲೆಯನ್ನು ಹೊಂದಿದ್ದ ಚಾಕು ಪತ್ತೆಯಾಗಿದೆ. ಅಪರಾಧ ನಡೆದ ಸ್ಥಳದಿಂದ ಸಂಬಂಧ ಪಟ್ಟ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Delhi crime: Woman found murdered in Saket, husband hurt
ಇದನ್ನು ಓದಿ : water price hike : ಬೆಂಗಳೂರಲ್ಲಿ ನೀರಿನ ದರ ಏರಿಕೆ ಶಾಕ್ : ಸರಕಾರಕ್ಕೆ ದರ ಏರಿಕೆ ಪ್ರಸ್ತಾಪ ಸಲ್ಲಿಸಿದ ಜಲಮಂಡಳಿ
ಇದನ್ನೂ ಓದಿ : police corona positive : ಕೊರೋನಾ ಮೂರನೇ ಅಲೆಗೆ ನಲುಗಿದ ಖಾಕಿ ಪಡೆ : ಸಿಲಿಕಾನ್ ಸಿಟಿಯಲ್ಲಿ 1234 ಪೊಲೀಸರಿಗೆ ಸೋಂಕು