IPL 2022 Megha Auction : ಐಪಿಲ್‌ ಮೆಗಾ ಹರಾಜಿಗೆ ಆಟಗಾರರ ಪಟ್ಟಿ ಸಿದ್ದ: ಆಟಗಾರರ ಮೂಲ ಬೆಲೆ ಎಷ್ಟು ಗೊತ್ತಾ

ಐಪಿಎಲ್ 2022 ರ ಮೆಗಾ ಹರಾಜು (IPL 2022 Megha Auction) ಪ್ರಕ್ರೀಯೆಗೆ ದಿನಗಣನೆ ಶುರುವಾಗಿದೆ. ಅದ್ರಲ್ಲೂ ಕ್ರಿಕೆಟ್‌ ಅಭಿಮಾನಿಗಳು ಯಾವ ಆಟಗಾರ, ಯಾವ ತಂಡ ಸೇರುತ್ತಾನೆ ಅನ್ನೋದನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ಅದ್ರಲ್ಲೂ ಈ ಬಾರಿ ಲಕ್ನೋ ಹಾಗೂ ಅಹಮದಾಬಾದ್‌ ಫ್ರಾಂಚೈಸಿ ಸೇರ್ಪಡೆಯಿಂದ ಒಟ್ಟು ಹತ್ತು ತಂಡಗಳು ಈ ಬಾರಿ ಐಪಿಎಲ್‌ನಲ್ಲಿ ಭಾಗಿಯಾಗಲಿವೆ. ಐಪಿಎಲ್‌ನ 15 ನೇ ಆವೃತ್ತಿಯ ಮೊದಲು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13 ರಂದು ನಡೆಯಲಿದ್ದು, ಎಲ್ಲಾ ಆಟಗಾರರು ಈಗಾಗಲೇ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. 1214 ಆಟಗಾರರು ಈ ಬಾರಿ ಮೆಗಾ ಹರಾಜಿನಲ್ಲಿ ಭಾಗಿಯಾಗಲಿದ್ದು, ಯಾವ ಆಟಗಾರರ ಮೂಲ ಬೆಲೆ ಎಷ್ಟು ಅನ್ನೋ ಡಿಟೇಲ್ಸ್‌ ಇಲ್ಲಿದೆ.

ಈ ಬಾರಿಯ ಮೆಗಾ ಹರಾಜಿನಲ್ಲಿ ಒಟ್ಟು 1214 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಖ್ಯಾತ ಆಟಗಾರರಾದ ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ, ಮೂಲ ಬೆಲೆ ರೂ 2 ಕೋಟಿ), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ, ರೂ 2 ಕೋಟಿ), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ, ರೂ 2 ಕೋಟಿ), ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ) ಐಪಿಎಲ್ 2022 ಕ್ಕೆ 2 ಕೋಟಿ ರೂ.), ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ, ರೂ 2 ಕೋಟಿ) ಮತ್ತು ಮಾರ್ಕ್ ವುಡ್ (ಇಂಗ್ಲೆಂಡ್, ರೂ 2 ಕೋಟಿ) ಮೂಲ ಬೆಲೆಯನ್ನು ನಿಗದಿ ಪಡಿಸಲಾಗಿದೆ.

ದಕ್ಷಿಣ ಆಫ್ರಿಕಾದ ವೇಗಿಗಳಾದ ಕಗಿಸೊ ರಬಾಡ (ರೂ. 2 ಕೋಟಿ) ಮತ್ತು ಲುಂಗಿ ಎನ್‌ಗಿಡಿ (ರೂ. 50 ಲಕ್ಷ) ಮತ್ತು ಮಾರ್ಕೊ ಜಾನ್ಸೆನ್ (ರೂ. 50 ಲಕ್ಷ) ಹರಾಜಿಗೆ ತಮ್ಮನ್ನು ತಾವು ದಾಖಲಿಸಿಕೊಂಡಿದ್ದಾರೆ. ಡ್ವೇನ್ ಬ್ರಾವೋ (2 ಕೋಟಿ ರೂ.), ಆದರೆ ಕ್ರಿಕೆಟ್‌ ದೈತ್ಯ ಕ್ರಿಸ್‌ ಗೇಲ್‌ ಈ ಬಾರಿಯ ಮೆಗಾ ಹರಾಜಿನಲ್ಲಿ ಭಾಗಿಯಾಗುತ್ತಿಲ್ಲ. ಆದರೆ ಅಹಮದಾಬಾದ್‌ ತಂಡ ಗೇಲ್‌ ಖರೀದಿ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹರಾಜಿನಲ್ಲಿ ಒಟ್ಟು 1,214 ಆಟಗಾರರು ಭಾಗಿಯಾಗಲಿದ್ದಾರೆ. ಈ ಪೈಕಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಹರಾಜು ಪ್ರಕ್ರೀಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನೇಪಾಳ, ಯುಎಇ, ಓಮನ್, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್‌ ಆಟಗಾರರು ಹರಾಜು ಪ್ರಕ್ರೀಯೆಯಲ್ಲಿ ಭಾಗಿಯಾಗಲಿದ್ದಾರೆ. ಪ್ರತಿ ಫ್ರಾಂಚೈಸಿಯು ತಮ್ಮ ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ. ಹೀಗಾಗಿ ಒಟ್ಟು 217 ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಾಗುತ್ತದೆ, ಅದರಲ್ಲಿ 70 ವಿದೇಶಿ ಆಟಗಾರರನ್ನು ಒಳಗೊಂಡಿದೆ.

ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೋ ರೂಟ್ ಮತ್ತು ಮಿಚೆಲ್ ಸ್ಟಾರ್ಕ್ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತೊರೆದಿದ್ದಾರೆ. ಈ ಬಾರಿ ಐಪಿಎಲ್‌ ಹರಾಜಿನಲ್ಲಿ ಭಾಗಿಯಾಗುವ ಭಾರತೀಯ ಆಟಗಾರರ ಸಂಖ್ಯೆ 896, ವಿದೇಶಿ ಆಟಗಾರರ ಸಂಖ್ಯೆ 318, ಕ್ಯಾಪ್ಡ್ ಆಟಗಾರರ ಸಂಖ್ಯೆ 270, ಅನ್‌ಕ್ಯಾಪ್ಡ್ ಆಟಗಾರರ ಸಂಖ್ಯೆ 903, ಅಸೋಸಿಯೇಟ್ ಆಟಗಾರರ ಸಂಖ್ಯೆ 41, ಕ್ಯಾಪ್ಡ್ ಭಾರತೀಯ ಆಟಗಾರರಲ್ಲದ ಆಟಗಾರರು 61, ಅಂತಾರಾಷ್ಟ್ರೀಯ ಆಟಗಾರರ ಸಂಖ್ಯೆ 209, ಹಿಂದಿನ ಐಪಿಎಲ್ ಸೀಸನ್ನ 143 ರ ಭಾಗವಾಗಿದ್ದ ಅನ್ ಕ್ಯಾಪ್ಡ್ ಇಂಡಿಯನ್ಸ್, ಹಿಂದಿನ IPL ಸೀಸನ್ 6 ರ ಭಾಗವಾಗಿದ್ದ ಅನ್‌ಕ್ಯಾಪ್ಡ್ ಇಂಟರ್‌ನ್ಯಾಶನಲ್, ಅನ್‌ಕ್ಯಾಪ್ಡ್ ಇಂಟರ್‌ನ್ಯಾಶನಲ್ ಆಟಗಾರರು 62 ಭಾಗಿಯಾಗಲಿದ್ದಾರೆ.

ಇದನ್ನೂ ಓದಿ : Lucknow IPL 2022 : ಲಕ್ನೋ ತಂಡಕ್ಕೆ ಕೆ.ಎಲ್.ರಾಹುಲ್‌ ನಾಯಕ, ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯ್ ಸೇರ್ಪಡೆ

ಇದನ್ನೂ ಓದಿ : ಹರಾಜಿನಲ್ಲಿ ವಿಟೇಂಜ್ ಕಾರು ಖರೀದಿಸಿದ ಎಂ.ಎಸ್.ದೋನಿ

(IPL 2022 Megha Auction : Player list out for IPL 2022, here is list of players with base price)

Comments are closed.