DRDO’s Aircraft crashes : ಚಾಲಕ ರಹಿತ ವಿಮಾನ ರೈತರ ಹೊಲದಲ್ಲಿ ಪತನ : ತಪ್ಪಿದ ಬಾರೀ ದುರಂತ

ಚಿತ್ರದುರ್ಗ : ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (DRDO) ಅಭಿವೃದ್ಧಿಪಡಿಸಿದ ಚಾಲಕರಹಿತ (DRDO’s Aircraft crashes) ವೈಮಾನಿಕ ವಾಹನ (ಯುಎವಿ) ಭಾನುವಾರ ಚಿತ್ರದುರ್ಗ ಜಿಲ್ಲೆಯ ಹಳ್ಳಿಯ ಕೃಷಿ ಜಮೀನಿನಲ್ಲಿ ಅಪಘಾತಕ್ಕೀಡಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಡ್ಡಿಕೆರೆ ಗ್ರಾಮದ ರೈತನ ಕೃಷಿ ಜಮೀನಿನಲ್ಲಿ ಪ್ರಯೋಗಾರ್ಥ ಹಾರಾಟದ ವೇಳೆ ವಿಮಾನ ಪತನವಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಗೆ ಸೇರಿದ ಮಾನವರಹಿತ ವೈಮಾನಿಕ ವಾಹನ (ಯುಎವಿ)TAPAS 07 A-14 ಎಂದು ಗುರುತಿಸಲಾಗಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಲ್ಲಿರುವ ಡಿಎಆರ್‌ಡಿಒ ವಾಯುನೆಲೆಯಿಂದ ಕಣ್ಗಾವಲು ಡ್ರೋನ್‌, ತಪಸ್‌ ಹಾರಾಟ ನಡೆಸಿತ್ತು. ಆದರೆ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ. ವಿಮಾನ ಪತನವಾಗುತ್ತಿದ್ದಂತೆಯೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮೀನಿಗೆ ಆಗಮಿಸಿದ್ದರು. ನಂತರ ಸ್ಥಳೀಯರಿಗೆ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಇದನ್ನೂ ಓದಿ : Bomb attack : ಬಾಂಬ್ ದಾಳಿ: 11 ಮಂದಿ ಕಾರ್ಮಿಕರು ಸಾವು

ಪತನದ ತೀವ್ರತೆ ವಿಮಾನ ಸಂಪೂರ್ಣವಾಗಿ ತುಂಡಾಗಿದ್ದು, ಉಪಕರಣಗಳು ಚದುರಿ ಬಿದ್ದಿವೆ. ವಿಮಾನ ಪತನದ ವೇಳೆಯಲ್ಲಿ ಗ್ರಾಮಸ್ಥರು ಪೈಲೆಟ್‌ಗಾಗಿ ಹುಡುಕಾಟ ನಡೆಸಿದ್ದರು. ಆದರೆ ಅಧಿಕಾರಿಗಳು ಮಾಹಿತಿ ನೀಡಿದ ಬಳಿಕ ಇದೊಂದು ಪೈಲೆಟ್‌ ರಹಿತ ಡ್ರೋನ್‌ ಅನ್ನೋದು ತಿಳಿದು ಬಂದಿದೆ. ಸದ್ಯ ತಪಸ್‌ ಪತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

DRDO’s Aircraft crashes: Unmanned aircraft crashes in farmer’s field: A near miss

Comments are closed.