ಸೋಮವಾರ, ಏಪ್ರಿಲ್ 28, 2025
HomeCrimeDrinking contaminated water-dead: ಕಲುಷಿತ ನೀರು ಸೇವಿಸಿ ಇಬ್ಬರು ಸಾವು: 40 ಕ್ಕೂ ಹೆಚ್ಚು ಮಂದಿ...

Drinking contaminated water-dead: ಕಲುಷಿತ ನೀರು ಸೇವಿಸಿ ಇಬ್ಬರು ಸಾವು: 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

- Advertisement -

ಯಾದಗಿರಿ: (Drinking contaminated water-dead) ಕಲುಷಿತ ನೀರು ಕುಡಿದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಯಾದಗಿರಿಯ ಗುರು ಮಠಕಲ್‌ ತಾಲೂಕಿನ ಅನಂತಪುರದಲ್ಲಿ ವರದಿಯಾಗಿದೆ. ಇದೀಗ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿತ್ರಮ್ಮ (35 ವರ್ಷ) ಹಾಗೂ ವೃದ್ದೆ ಸಾಯಮ್ಮ(70 ವರ್ಷ) ಮೃತ ಮಹಿಳೆಯರು.

ಗ್ರಾಮಕ್ಕೆ ನೀರು ಪೂರೈಸುವ ಪೈಪ್‌ ನಲ್ಲಿ ಚರಂಡಿ ನೀರು ಸೇರ್ಪಡೆಯಾಗಿದ್ದು, ಇದನ್ನು ಕುಡಿದ ಜನರಲ್ಲಿ ವಾಂತಿ, ಭೇಧಿ ಕಾಣಿಸಿಕೊಂಡಿದೆ. ಇಬ್ಬರು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದರೆ 40 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಸ್ವಸ್ಥಗೊಂಡವರನ್ನು ಯಾದಗಿರಿಯ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

“ಇಬ್ಬರು ಮಹಿಳೆಯರು ಮೃತಪಟ್ಟಿರುವುದು ಮತ್ತು ಜನರು ಅಸ್ವಸ್ಥಗೊಂಡಿರುವುದಕ್ಕೆ ಕಲುಷಿತ ನೀರು ಕುಡಿದದ್ದೇ ಕಾರಣ ಎಂಬ ಶಂಕೆಯಿದೆ. ಅಗತ್ಯವಿರುವವರಿಗೆ ಚಿಕಿತ್ಸೆ ನೀಡಲು ಮೂರು ವೈದ್ಯರನ್ನು ಒಳಗೊಂಡ 15 ಸದಸ್ಯರ ವೈದ್ಯಕೀಯ ತಂಡವನ್ನು ಅನುಪುರಕ್ಕೆ ಕಳುಹಿಸಲಾಗಿದೆ.” ಎಂದು ಯಾದಗಿರಿ ಜಿಲ್ಲೆಯ ಆರೋಗ್ಯಾಧಿಕಾರಿ ಡಾ. ಗುರುರಾಜ ಕಿರೇಗೌಡ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಠಾಣೆಗೆ ಯಾವುದೇ ದೂರು ಬಂದಿಲ್ಲ ಎಂದು ಗುರು ಮಠಕಲ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Karnataka budget-‌2023: ಸಿಎಂ ಬೊಮ್ಮಾಯಿ ಹೊಸ ಕೃಷಿ ನೀತಿ ಘೋಷಣೆ ಸಾಧ್ಯತೆ

ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪತನ: 2 ಸಿಬ್ಬಂದಿ ಸಾವು

ಟೆನ್ನೆಸ್ಸೀ ನ್ಯಾಷನಲ್ ಗಾರ್ಡ್‌ನ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಅಲಬಾಮಾದಲ್ಲಿ ಅಪಘಾತಕ್ಕೀಡಾಗಿದ್ದು, ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಟೆನ್ನೆಸ್ಸೀ ನ್ಯಾಷನಲ್ ಗಾರ್ಡ್ ತಿಳಿಸಿದೆ.ರಾಸ್ ಪ್ರಕಾರ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಾರಾಟ-ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು, ಕೂಡಲೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ.ಘಟನೆಯಲ್ಲಿ ಟೆನ್ನೆಸ್ಸೀ ನ್ಯಾಷನಲ್ ಗಾರ್ಡ್‌ನ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : Drug sales case: ಮಣಿಪಾಲ: ಮಾದಕ ವಸ್ತು ಮಾರಾಟ: ಇಬ್ಬರು ವಿದ್ಯಾರ್ಥಿಗಳ ಅಮಾನತು

ಇದನ್ನೂ ಓದಿ : Black Hawk Helicopter Crash: ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪತನ: 2 ಸಿಬ್ಬಂದಿ ಸಾವು

Drinking contaminated water-dead: Two dead after drinking contaminated water: More than 40 sick

RELATED ARTICLES

Most Popular