Payrm LIC Premium : ಎಲ್‌ಐಸಿ ವಿಮಾ ಪ್ರೀಮಿಯಂನ್ನು ಪೇಟಿಎಂ ಮೂಲಕ ಪಾವತಿಸಲು ಬಯಸುವಿರಾ? ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

ನವದೆಹಲಿ : ದೇಶದ ನಿವಾಸಿಗಳು ಹೆಚ್ಚಾಗಿ ಡಿಜಿಟಲೀಕರಣಕ್ಕೆ ಮಾರು ಹೋಗಿದ್ದಾರೆ. ಹಾಗಾಗಿ ತಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಹೆಚ್ಚಾಗಿ ಅದನ್ನೇ ಬಳಸುತ್ತಾರೆ. ಪೇಟಿಎಂ (Paytm), ಭಾರತೀಯ ಡಿಜಿಟಲ್ ಪಾವತಿ ಸೇವಾ ಕಂಪನಿಯು ಬಳಕೆದಾರರಿಗೆ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಮತ್ತು ಪ್ರಯಾಣ ಟಿಕೆಟ್‌ಗಳನ್ನು ಖರೀದಿಸಲು ಅನುಮತಿಸುತ್ತದೆ. ಇದರ ಜೊತೆಗೆ, ಬಳಕೆದಾರರು ತಮ್ಮ ಎಲ್‌ಐಸಿ (LIC) ಪ್ರೀಮಿಯಂಗಳನ್ನು (Payrm LIC Premium) ಪೇಟಿಎಂ (Paytm) ಮೂಲಕ ಪಾವತಿಸಬಹುದಾಗಿದೆ.

ಎಲ್‌ಐಸಿ (LIC) ಪಾಲಿಸಿ ಪ್ರೀಮಿಯಂ ಅನ್ನು ಪೇಟಿಎಂ (Paytm) ಅಪ್ಲಿಕೇಶನ್ (Android ಮತ್ತು Apple) ಅಥವಾ ಪೇಟಿಎಂ (Paytm) ವೆಬ್‌ಸೈಟ್ ಮೂಲಕ ಪೇಟಿಎಂ (Paytm) ನೊಂದಿಗೆ ಪಾವತಿಸಬಹುದಾಗಿದೆ. ಅದಕ್ಕಾಗಿ ನಿಮ್ಮ ಎಲ್ಐಸಿ ವಿಮಾ ಪ್ರೀಮಿಯಂ ಪಾಲಿಸಿ ಸಂಖ್ಯೆ ಮಾತ್ರ ಕಡ್ಡಾಯವಾಗಿ ನೀವು ಹೊಂದಿರಬೇಕಾಗುತ್ತದೆ.

ಪೇಟಿಎಂ (Paytm) ಅಪ್ಲಿಕೇಶನ್ ಮೂಲಕ ಎಲ್‌ಐಸಿ ( LIC) ಪ್ರೀಮಿಯಂ ಪಾವತಿಸಲು ಹಂತ-ಹಂತದ ಮಾರ್ಗದರ್ಶಿ :
ಗ್ರಾಹಕರು ಪೇಟಿಎಂ (Paytm) ಅಪ್ಲಿಕೇಶನ್ ಮೂಲಕ ಎಲ್‌ಐಸಿ (LIC) ವಿಮಾ ಪ್ರೀಮಿಯಂ ಅನ್ನು ಪಾವತಿಸಲು ನಾವು ನಿಮಗೆ ಹಂತ-ಹಂತದ ಮಾರ್ಗದರ್ಶಿಯನ್ನು ಕೆಳಗೆ ನೀಡಲಾಗಿದೆ. ಅದರಂತೆ ಗ್ರಾಹಕರು ಹಂತಗಳನ್ನು ಅನುಸರಿಸಬೇಕಾಗಿದೆ. ಗ್ರಾಹಕರು ತಮ್ಮ ವಿಮಾದಾರರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡದೆಯೇ ಇದನ್ನು ಮಾಡಬಹುದಾಗಿದೆ.
ಹಂತ 1 : ಗ್ರಾಹಕರು ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪೇಟಿಎಂ (Paytm) ಅಪ್ಲಿಕೇಶನ್ ತೆರೆಯಬೇಕು.
ಹಂತ 2 : “ರೀಚಾರ್ಜ್ ಮತ್ತು ಬಿಲ್ ಪಾವತಿಗಳು” ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಬೇಕು. ನಂತರ ಗ್ರಾಹಕರು ಸರಿಯಾಗಿ ವೀಕ್ಷಿಸಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಹಂತ 3 : ಹಣಕಾಸು ಸೇವೆಗಳ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು. ‘ಪೇ ಇನ್ಶುರೆನ್ಸ್ ಪ್ರೀಮಿಯಂ’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಹಂತ 4 : ಪಟ್ಟಿಯಿಂದ ವಿಮಾದಾರರನ್ನು (LIC ಆಫ್ ಇಂಡಿಯಾ) ಆಯ್ಕೆಮಾಡಬೇಕು.
ಹಂತ 5 : ನಿಮ್ಮ ಪಾಲಿಸಿ ಸಂಖ್ಯೆ ಮತ್ತು ಅಡ್ಡಹೆಸರನ್ನು ನಮೂದಿಸಬೇಕು (ಐಚ್ಛಿಕ). ಪಾಲಿಸಿ ಸಂಖ್ಯೆ, ಪಾಲಿಸಿದಾರರ ಹೆಸರು, ಪ್ರೀಮಿಯಂ ಬಾಕಿ ದಿನಾಂಕ, ಕಂತು ಬಾಕಿಯ ಸಂಖ್ಯೆ ಮತ್ತು ಪ್ರೀಮಿಯಂ ಮೊತ್ತದಂತಹ ಪಾಲಿಸಿ ವಿವರಗಳನ್ನು ಪರಿಶೀಲಿಸಬೇಕು
ಹಂತ 6 : ಪಾವತಿಗಾಗಿ ಮುಂದುವರೆಯಲು ಟ್ಯಾಪ್ ಮಾಡಿ ಮತ್ತು ಪಾವತಿ ವಿಧಾನವನ್ನು ಆಯ್ಕೆಮಾಡಬೇಕಾಗಿದೆ. (Paytm ಮೂಲಕ)
ಹಂತ 7 : ಗ್ರಾಹಕರು ಎಲ್‌ಐಸಿ (LIC) ವಿಮಾ ಪ್ರೀಮಿಯಂ ಪಾವತಿ ಮಾಡಬೇಕು. ಯಶಸ್ವಿ ಪಾವತಿಯಲ್ಲಿ, ಪೇಟಿಎಂ (Paytm) ನಿಮ್ಮ ಉಲ್ಲೇಖಕ್ಕಾಗಿ ನಿಮ್ಮ ನೋಂದಾಯಿತ ಇಮೇಲ್ ಮತ್ತು ಮೊಬೈಲ್ ಸಂಖ್ಯೆಗೆ ಸಂದೇಶವನ್ನು ಕಳುಹಿಸುತ್ತದೆ.

ಇದನ್ನೂ ಓದಿ : ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳನ್ನು ಮಾರಾಟ ಮಾಡುತ್ತಿದ್ದು ಈ 4 ಕಾರಣಕ್ಕೆ

ಇದನ್ನೂ ಓದಿ : SBI Credit Card Charge Hike : ಕ್ರೆಡಿಟ್‌ ಕಾರ್ಡ್‌ ಬಳಕೆದಾರರ ಗಮನಕ್ಕೆ : ಮಾರ್ಚ್ 17 ರಿಂದ ಶುಲ್ಕದಲ್ಲಿ ಬದಲಾವಣೆ

ಇದನ್ನೂ ಓದಿ : WPI Inflation : ಜನವರಿಯಲ್ಲಿ ಸಗಟು ಹಣದುಬ್ಬರ 24 ತಿಂಗಳಲ್ಲಿ ಕನಿಷ್ಠ ಶೇ.4.73ಕ್ಕೆ ಇಳಿಕೆ : ಹಣದುಬ್ಬರ ಇಳಿಕೆಗೆ ಮುಖ್ಯ ಕಾರಣವೇನು ?

Payrm LIC Premium : Want to pay LIC Insurance Premium through Paytm? Here is a step by step guide

Comments are closed.