ಮಂಗಳವಾರ, ಏಪ್ರಿಲ್ 29, 2025
HomeCrimeDrunk man : ಕುಡಿದ ಅಮಲಿನಲ್ಲಿ ಮನುಷ್ಯನ ತಲೆಯನ್ನೇ ಕಡಿದ ಭೂಪ ಅರೆಸ್ಟ್​

Drunk man : ಕುಡಿದ ಅಮಲಿನಲ್ಲಿ ಮನುಷ್ಯನ ತಲೆಯನ್ನೇ ಕಡಿದ ಭೂಪ ಅರೆಸ್ಟ್​

- Advertisement -

Drunk man : ಮೂಢನಂಬಿಕೆಗಳ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದೇ ಒಂದು ದೊಡ್ಡ ಅಪರಾಧ . ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿಯು ಪ್ರಾಣಿ ಬಲಿ ನೀಡುವ ವೇಳೆಯಲ್ಲಿ ನರಬಲಿಯನ್ನೇ ನೀಡಿದ್ದಾನೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ವಳಸಪಲ್ಲಿ ಎಂಬಲ್ಲಿ ಇಂತಹದ್ದೊಂದು ಶಾಕಿಂಗ್​ ಘಟನೆ ವರದಿಯಾಗಿದೆ.


ಸಂಕ್ರಾಂತಿ ಸಂಭ್ರಮದಲ್ಲಿ ಇಂತಹದ್ದೊಂದಯ ಅವಘಡ ನಡೆದು ಹೋಗಿದೆ. ಭಾನುವಾರದಂದು ಚಲಪತಿ ಎಂಬಾತ ಕುರಿಯ ತಲೆಯನ್ನು ಕಡಿಯಬೇಕಾಗಿತ್ತು. ಆದರೆ ಕುಡಿದ ಅಮಲಿನಲ್ಲಿದ್ದ ಚಲಪತಿ ಕುರಿಯ ತಲೆಯನ್ನು ಕಡಿಯುವ ಬದಲು ಕತ್ತಿಯಿಂದ ಕುರಿಯನ್ನು ಹಿಡಿದಿಕೊಂಡಿದ್ದವನ ತಲೆಯನ್ನೇ ಕಡಿದಿದ್ದಾನೆ.


ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದಿದೆ. ಕುತ್ತಿಗೆಗೆ ಕತ್ತಿ ಏಟು ಬಿದ್ದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಸುರೇಶ್​ನನ್ನು ಕೂಡಲೇ ಮಂಡನ್​ಪಲ್ಲೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಚಲಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರಿಗಳು ಹಣೆಗೆ ತಿಲಕವಿಡೋದಿಲ್ಲ’ : ಯಡವಟ್ಟಿನ ಹೇಳಿಕೆ ನೀಡಿದ ಸಚಿವೆ

ರಾಜಸ್ಥಾನದ ಅಲ್ವಾರ್​​ನಲ್ಲಿ ವಿಶೇಷ ಚೇತನ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರವನ್ನು ಖಂಡಿಸುವ ಭರದಲ್ಲಿ ರಾಜಸ್ಥಾನದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಮತಾ ಭೂಪೇಶ್​ ಯಡವಟ್ಟಿನ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ. ಅತ್ಯಾಚಾರದಂತಹ ಕೃತ್ಯಗಳನ್ನು ತಡೆಯಲು ಸರ್ಕಾರದಿಂದ ಸಾಧ್ಯವಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.

ಅತ್ಯಾಚಾರದಂತಹ ದುಷ್ಕೃತ್ಯಗಳನ್ನು ತಡೆಯಲು ಕೇವಲ ಸರ್ಕಾರದಿಂದ ಮಾತ್ರ ತಡೆಯಲು ಸಾಧ್ಯವಿಲ್ಲ . ಸಾಮೂಹಿಕ ಸಂಕಲ್ಪದಿಂದ ಮಾತ್ರ ಇಂತಹ ದುಷ್ಪರಿಣಾಮಗಳು ಕೊನೆಯಾಗಲು ಸಾಧ್ಯ ಎಂದು ಹೇಳಿದರು. ಅತ್ಯಾಚಾರಿಗಳು ಎಲ್ಲೋ ಹೊರಗಿನಿಂದ ಬರುವುದಿಲ್ಲ. ಇಂತಹ ದುಷ್ಕರ್ಮಿಗಳು ನಾವು ಕಂಡು ಹಿಡಿಯಲು ಸುಲಭವಾಗಲಿ ಹಣೆಗೆ ತಿಲಕ ಇಟ್ಟು ಓಡಾಡೋದಿಲ್ಲ ಎಂದು ಹೇಳಿದ್ದಾರೆ.

ನಾವು ಮಕ್ಕಳಿಗಾಗಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಸಮಾಜದಲ್ಲಿ ರಕ್ಷಣಾತ್ಮಕ ವಾತಾವರಣವನ್ನು ನಿರ್ಮಿಸಬೇಕಿದೆ. ನಾವು ಮಕ್ಕಳಿಗೆ ಕೌಟುಂಬಿಕ ವಾತಾವರಣವನ್ನು ಕಟ್ಟಿ ಕೊಡಬೇಕು. ಹೀಗಾಗಿ ನಾವೆಲ್ಲರೂ ಒಂದಾಗಿ ಸಮಾಜದಲ್ಲಿ ಇಂತಹ ಪಿಡುಗಳುಗಳನ್ನು ಹೋಗಾಲಿಡಿಸುವ ಮೂಲಕ ಒಳ್ಳೆಯ ವಾತಾವರಣವನ್ನು ನಿರ್ಮಿಸಬೇಕು ಎಂದು ಅವರು ಹೇಳಿದರು.

ಜನವರಿ 12ರಂದು ಅಲ್ವಾರ್​ನ ತಿಜಾರಾ ಮೇಲ್ವೇತುವೆ ಬಳಿಯಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ವಿಶೇಷ ಸಾಮರ್ಥ್ಯವುಳ್ಳ ಅಪ್ರಾಪ್ತ ಬಾಲಕಿಯೊಬ್ಬಳು ಪತ್ತೆಯಾಗಿದ್ದಾಳೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್​ ಮಾಹಿತಿ ನೀಡಿದ್ದಾರೆ.

“ರಾಜಸ್ಥಾನದ ಅಲ್ವಾರ್‌ನಲ್ಲಿರುವ ತಿಜಾರಾ ಮೇಲ್ಸೇತುವೆಯಲ್ಲಿ ವಿಶೇಷ ಸಾಮರ್ಥ್ಯವುಳ್ಳ ಅಪ್ರಾಪ್ತ ಬಾಲಕಿಯೊಬ್ಬಳು ಅತ್ಯಾಚಾರಕ್ಕೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಖಾಸಗಿ ಅಂಗಾಂಗಳಿಂದ ಸಾಕಷ್ಟು ರಕ್ತಸ್ರಾವವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಎಸ್ಪಿ ತೇಜಸ್ವಿನಿ ಮಾಹಿತಿ ನೀಡಿದ್ದಾರೆ.

Drunk man slaughters human instead of goat during animal sacrifice in Andhra Pradesh

ಇದನ್ನು ಓದಿ : Dolo 650 : ಹುಬ್ಬೇರಿಸುತ್ತೆ ಕಳೆದ 2 ವರ್ಷಗಳಲ್ಲಿ ದೇಶದಲ್ಲಿ ಮಾರಾಟವಾದ ಡೋಲೋ 650 ಮಾತ್ರೆಗಳ ಸಂಖ್ಯೆ

ಇದನ್ನೂ ಓದಿ : Sulli Deals App Creator : ದೆಹಲಿ ಪೊಲೀಸರಿಂದ ಸುಲ್ಲಿ ಡೀಲ್ಸ್ ಆ್ಯಪ್ ಕ್ರಿಯೇಟರ್‌ ಬಂಧನ

RELATED ARTICLES

Most Popular