Oppo Reno 6 Lite: ಒಪ್ಪೋ ರೇನೋ 6 ಲೈಟ್ ಕಾಸಿಗೆ ತಕ್ಕ ಕಜ್ಜಾಯ ನೀಡುವ ಸ್ಮಾರ್ಟ್‌ಫೋನಾ?

ಒಪ್ಪೋ ಕಂಪೆನಿ ತನ್ನ ಒಪ್ಪೋ ರೇನೋ 6ರ ಸರಣಿಗೆ ಇನ್ನೊಂದು ಹೊಸ ಫೋನನ್ನು ಬಿಡುಗಡೆ ಮಾಡಿದೆ. ಈ ಸರಣಿಗೆ ಒಪ್ಪೋ ರೇನೋ 6 ಲೈಟ್ ಲಾಂಚ್ (Oppo Reno 6 Lite) ಮಾಡಲಾಗಿದೆ. ಚೀನೀ ಕಂಪನಿಯು ತನ್ನ ಒಪ್ಪೋ ರೇನೋ 6 ಮತ್ತು ಒಪ್ಪೋ ರೇನೋ 6 ಪ್ರೊ ಅನ್ನು ಚೀನಾದಲ್ಲಿ ಮೇ 2021 ರಲ್ಲಿ (China) ಬಿಡುಗಡೆ ಮಾಡಿತ್ತು. ಒಪ್ಪೋ 6 ಲೈಟ್ ಅನ್ನು ಈಗ ಮೆಕ್ಸಿಕೋದಲ್ಲಿ (Mexico) ಬಿಡುಗಡೆ ಮಾಡಲಾಗಿದೆ. ಮತ್ತು ರೇನೋ 6 ಸ್ಮಾರ್ಟ್‌ಫೋನ್ ಸರಣಿಯಲ್ಲಿ ಕಂಡುಬರುವ ಅದೇ ರೇನೋ ಗ್ಲೋ ವಿನ್ಯಾಸವನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ. ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 ಎಸ್ ಒಸಿ ಮೂಲಕ 6ಜಿಬಿ ರಾಮ್ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ.

ಒಪ್ಪೋ ರೇನೋ 6 ಲೈಟ್ ಆಂಡ್ರಾಯ್ಡ್ 11 ಆಧಾರಿತ ಕಲರ್ ಒಎಸ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ ಈ ಫೋನ್ ಬೆಲೆಯನ್ನು ಸುಮಾರು ರೂ. 32,200 ಗೆ ಅಂದಾಜಿಸಲಾಗಿದೆ. ಮತ್ತು ಟೆಲಿಕಾಂ ಆಪರೇಟರ್‌ಗಳು ಮತ್ತು ರಿಟೈಲ್ ವೆಬ್‌ಸೈಟ್‌ಗಳ ಜೊತೆಗೆ ಅಮೆಜಾನ್ ಮೆಕ್ಸಿಕೊನಲ್ಲಿ ಖರೀದಿಸಲು ಮುಂದಾಗಿದೆ. ಹೊಸ ಒಪ್ಪೋ ರೇನೋ 6 ಲೈಟ್ ಕಪ್ಪು ಮತ್ತು ರೇನ್ಬೋ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಒಪ್ಪೋ ಕಂಪೆನಿಯು ಭಾರತ ಸೇರಿದಂತೆ ಇತರ ಪ್ರದೇಶಗಳಲ್ಲಿ ಒಪ್ಪೋ ರೇನೋ 6 ಲೈಟ್ಅನ್ನು ಪ್ರಾರಂಭಿಸುವ ಯೋಜನೆಗಳನ್ನು ಇನ್ನೂ ಪ್ರಕಟಿಸಿಲ್ಲ.

ಒಪ್ಪೋ ರೇನೋ 6 ಲೈಟ್ ಡ್ಯುಯಲ್-ಸಿಮ್ (ನ್ಯಾನೋ) ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 662 ಎಸ್ ಒಸಿ ನಿಂದ ಚಾಲಿತವಾಗಿದ್ದು, 6ಜಿಬಿ ಎಲ್ ಪಿಡಿಡಿಆರ್4ಎಕ್ಸ್( LPDDR4X RAM) ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ
ಇದು 6.43-ಇಂಚಿನ ಫುಲ್ ಎಚ್ಡಿ+ (1,080×2,040 ಪಿಕ್ಸೆಲ್‌ಗಳು) ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 800 ನಿಟ್‌ಗಳ ಗರಿಷ್ಠ ಹೊಳಪನ್ನು ನೀಡುತ್ತದೆ .
ಒಪ್ಪೋ ರೇನೋ 6 ಲೈಟ್ ಟ್ರಿಪಲ್ ಕ್ಯಾಮೆರಾ ಸೆಟಪ್ ಜೊತೆಗೆ 48-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ f/1.7 ಅಪರ್ಚರ್ ಲೆನ್ಸ್ ಮತ್ತು 79-ಡಿಗ್ರಿ ಫೀಲ್ಡ್-ಆಫ್-ವ್ಯೂ, ಎರಡು 2-ಮೆಗಾಪಿಕ್ಸೆಲ್ ಲೆನ್ಸ್, ಪೋಟ್ರೇಟ್ ಶಾಟ್‌ಗಳು ಮತ್ತು ಮ್ಯಾಕ್ರೋ ಫೋಟೋಗ್ರಫಿ, ಪ್ರತಿಯೊಂದೂ f/ 2.4 ಅಪರ್ಚರ್ ಲೆನ್ಸ್ ಮತ್ತು 89-ಡಿಗ್ರಿ ಫೀಲ್ಡ್-ಆಫ್-ವ್ಯ ಹೊಂದಿದೆ.
ಮುಂಭಾಗದಲ್ಲಿ, 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು f/2.4 ಅಪರ್ಚರ್ ಲೆನ್ಸ್ ಮತ್ತು 78-ಡಿಗ್ರಿ ಫೀಲ್ಡ್-ಆಫ್-ವ್ಯೂ ಹೊಂದಿದೆ. ಒಪ್ಪೋ ಪ್ರಕಾರ, ಪ್ರೈಮರಿ ಕ್ಯಾಮೆರಾ ಮತ್ತು ಸೆಲ್ಫಿ ಕ್ಯಾಮೆರಾ ಎರಡೂ 1080ಪಿ ನಲ್ಲಿ 30 ಎಫ್.ಪಿ.ಎಸ್ ನಲ್ಲಿ ರೆಕಾರ್ಡಿಂಗ್ ವೀಡಿಯೊವನ್ನು ಬೆಂಬಲಿಸುತ್ತವೆ.

ಇದು ಯುಎಸ್ ಬಿ ಟೈಪ್-ಸಿ ಮೂಲಕ 33ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಸ್ಮಾರ್ಟ್‌ಫೋನ್ 5,000ಎಂಎಎಚ್ ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಈ ಫೋನು ಸುಮಾರು 175 ಗ್ರಾಂ ಭಾರವಿದೆ.

ಇದನ್ನೂ ಓದಿ: 5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

(Oppo Reno 6 Lite With Snapdragon 662 48 Megapixel Triple Cameras Launched read Price Specifications)

Comments are closed.