ಹೋಟೆಲ್‌ನಲ್ಲಿ ಆಹಾರ ಸೇವನೆ : 68 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಎರ್ನಾಕುಲಂ : ಹೋಟೆಲ್ ವೊಂದರಲ್ಲಿ ಆಹಾರ ಸೇವಿಸಿ (Eating at the hotel) 68 ಮಂದಿ ಅಸ್ವಸ್ಥಗೊಂಡಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಉತ್ತರ ಪರವೂರ್‌ನಲ್ಲಿರುವ ಮಜ್ಲಿಸ್ ಹೋಟೆಲ್‌ನಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ಆಹಾರದಲ್ಲಿ ವಿಷದ ಅಂಶ ಪತ್ತೆಯಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಕಲುಷಿತ ಆಹಾರ ಮಾರಾಟ ಮಾಡುವ ರೆಸ್ಟೋರೆಂಟ್ ಗಳ ವಿರುದ್ದ ರಾಜ್ಯ ಸರಕಾರ ಅಭಿಯಾನ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಒಟ್ಟು ಇಬ್ಬರು ಮಕ್ಕಳು ಸೇರಿದಂತೆ 68 ಜನರು ಅಸ್ವಸ್ಥಗೊಂಡಿದ್ದಾರೆ. 68 ಮಂದಿಯ ಪೈಕಿ 28 ಮಂದಿಯನ್ನು ತಾಲೂಕು ಆಸ್ಪತ್ರೆಗೆ, 20 ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಹೋಟೆಲ್ ನಲ್ಲಿ ಗ್ರಾಹಕರು ಕುಜಿಂತಿ, ಅಲ್ಪಾಹಂ, ಶವಾಯಿ ಸೇವನೆ ಮಾಡಿದ ನಂತರದಲ್ಲಿ ಬಹುತೇಕರಿಗೆ ವಾಂತಿ, ಬೇಧಿಯ ಜೊತೆಗೆ ದೇಹದಲ್ಲಿ ನೋವು ಕಾಣಿಸಿಕೊಂಡಿತ್ತು. ಘಟನೆಯ ಬೆನ್ನಲ್ಲೇ ರೆಸ್ಟೋರೆಂಟ್‌ನ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಸದ್ಯ ಆಹಾರ ಸುರಕ್ಷತಾ ಆಯುಕ್ತರು ನೀಡಿದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ಕೇರಳ ರಾಜ್ಯದ ವಿವಿಧೆಡೆ ವಿಷಾಹಾರ ಸೇವಿಸಿದ ಘಟನೆಗಳು ವರದಿಯಾಗುತ್ತಿವೆ.ಈ ಘಟನೆಗಳ ನಂತರ ಆಹಾರ ಸುರಕ್ಷತಾ ಇಲಾಖೆಯು ಕೇರಳದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ತಪಾಸಣೆ ನಡೆಸುತ್ತಿದೆ. ಈ ನಡುವೆ ರಾಜ್ಯಾದ್ಯಂತ 189 ರೆಸ್ಟೊರೆಂಟ್ ಗಳಲ್ಲಿ ಆಹಾರ ಸುರಕ್ಷತಾ ಇಲಾಖೆ ತಪಾಸಣೆ ನಡೆಸಿದ್ದು, ಶುಚಿತ್ವದ ಕೊರತೆ ಹಿನ್ನೆಲೆಯಲ್ಲಿ ಇಬ್ಬರ ಪರವಾನಗಿ ರದ್ದುಪಡಿಸಿ 37 ರೆಸ್ಟೋರೆಂಟ್ ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ರಾಜ್ಯದಲ್ಲಿ ಹಲವಾರು ವಿಷಪೂರಿತ ಆಹಾರ ಘಟನೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಕೇರಳ ಸರಕಾರ ಅಡುಗೆ ಸೇವೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, ಹೊಸ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಅಡುಗೆ ಸೇವೆಗಳಿಗೆ ಪರವಾನಗಿ ಕಡ್ಡಾಯಗೊಳಿಸಲಾಗಿದ್ದು, ಉದ್ಯೋಗಿಗಳಿಗೆ ಆರೋಗ್ಯ ಕಾರ್ಡ್ ಕಡ್ಡಾಯವಾಗಿದೆ.

ಇದನ್ನೂ ಓದಿ : Man Dead in Gym: ಜಿಮ್‌ ನಲ್ಲಿ ಕಸರತ್ತು ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು

ಇದನ್ನೂ ಓದಿ : Student hanging in hostel: ಹಾಸ್ಟೆಲ್‌ ಕೊಠಡಿಯಲ್ಲಿ ಕೈ ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ

ಇದನ್ನೂ ಓದಿ : Inhuman incident in Bangalore: ಬೆಂಗಳೂರಿನಲ್ಲಿ ಅಮಾನವೀಯ ಘಟನೆ : ವ್ಯಕ್ತಿಯನ್ನು ರಸ್ತೆಯಲ್ಲಿ ಎಳೆದೊಯ್ದ ಬೈಕ್ ಸವಾರ

ಇದಕ್ಕೂ ಮೊದಲು ಜನವರಿ 4 ರಂದು, ಕೇರಳ ಸರಕಾರದ ಆಹಾರ ಸುರಕ್ಷತಾ ಇಲಾಖೆಯು ರಾಜ್ಯದಾದ್ಯಂತ 429 ಸಂಸ್ಥೆಗಳಲ್ಲಿ ತಪಾಸಣೆ ನಡೆಸಿತು. ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆಹಾರ ವಿಷಕಾರಿ ಘಟನೆಯಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ನಂತರ 43 ಹೋಟೆಲ್‌ಗಳನ್ನು ಆಹಾರ ಸುರಕ್ಷತಾ ಇಲಾಖೆ ಮುಚ್ಚಿತ್ತು. ಇತ್ತೀಚೆಗಷ್ಟೇ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ದಾದಿಯೊಬ್ಬರು ಅಲ್ಲಿನ ಉಪಾಹಾರ ಗೃಹದಿಂದ ಖಾದ್ಯವನ್ನು ಸೇವಿಸಿ ಸಾವನ್ನಪ್ಪಿದ್ದಾರೆ.

Eating at the hotel: 68 people are sick, admitted to the hospital

Comments are closed.