ಬೆಂಗಳೂರು :Education Loan Fraud : ಶೈಕ್ಷಣಿಕ ಸಾಲದ ಹೆಸರಲ್ಲಿ ಸುಮಾರು 2,000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬರೋಬ್ಬ 18 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲಕದ ಗೀಕ್‌ಲೂರ್ನ್ ಸಂಸ್ಥೆಯ ( Geeklurn) ಸಿಇಓ ಶ್ರೀನಿವಾಸ್ ಅವರನ್ನು ಬಂಧಿಸಿಸಲಾಗಿದೆ. ವಿದ್ಯಾರ್ಥಿಯೋರ್ವ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿರುವ ಬೆಂಗಳೂರು ಪೊಲೀಸರು ಸಂಸ್ಥೆಯ ಹಣಕಾಸು ಅಧಿಕಾರಿ ಮತ್ತು ಆಪರೇಷನ್ ಹೆಡ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಗೀಕ್‌ಲೂರ್ನ್ ಸಂಸ್ಥೆಯು ವಿದ್ಯಾರ್ಥಿಗಳು ಉದ್ಯೋಗ ದೊರೆಯುವವರೆಗೂ ಕೂಡ ಇಎಂಐ ಪಾವತಿಯನ್ನು ಮಾಡುವುದಾಗಿ ಹೇಳಿ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಮೂರನೇ ತಿಂಗಳ ನಂತರದಲ್ಲಿ ಕಂಪೆನಿಯು ವಿದ್ಯಾರ್ಥಿಗಳ ಖಾತೆಗೆ ಇಎಂಐಗಳನ್ನು ಜಮೆ ಮಾಡುವುದನ್ನು ನಿಲ್ಲಿಸಿತ್ತು. ಅಲ್ಲದೇ ಒಪ್ಪಂದವನ್ನು ರದ್ದುಗೊಳಿಸಿತ್ತು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಉದ್ಯೋಗಿಯಾದ ಕಾರಣ ವಿದ್ಯಾರ್ಥಿಗಳು ಸಮಸ್ಯೆಯನ್ನು ಅನುಭವಿಸಿದ್ದರು. ಪ್ರತೀ ವಿದ್ಯಾರ್ಥಿಗಳಿಗೆ ಕೂಡ 2 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಡಿಸೆಂಬರ್ 2022 ರಲ್ಲಿ ಸಂಸ್ಥೆಯ 24 ತಿಂಗಳ ಡೇಟಾ ಕೋರ್ಸ್‌ಗೆ ದಾಖಲಾದ 26 ವರ್ಷದ ವಿದ್ಯಾರ್ಥಿಯೋರ್ವ ನೀಡಿದ ದೂರಿನ ನಂತರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಗೀಕ್‌ಲೂರ್ನ್‌ನ ಸಿಇಒ ಶ್ರೀನಿವಾಸ್ ಅವರನ್ನು ಪೊಲೀಸರು ಬಂಧಿಸಿದ್ದು, ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ರಾಮನ್ ಪಿ ಸಿ ಮತ್ತು ಆಪರೇಷನ್ ಹೆಡ್ ಅಮನ್ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಂಪೆನಿ ಉದ್ಯೋಗಿಗಳ ಜೊತೆಗೆ ಮಾಡಿಕೊಂಡಿರುವ ಒಪ್ಪಂದವನ್ನು ಕ್ಷುಲಕ ಕಾರಣ ಹೇಳಿ ರದ್ದುಗೊಳಿಸಿದೆ. ವಿದ್ಯಾರ್ಥಿಯೋರ್ವ ದೂರು ನೀಡಿದ ಬೆನ್ನಲ್ಲೇ ಸುಮಾರು 13 ವಿದ್ಯಾರ್ಥಿಗಳು ಕಂಪೆನಿಯ ವಿರುದ್ದ ದೂರು ನೀಡಿದ್ದಾರೆ. ಇನ್ನು ಕಂಪೆನಿಯು ಮುಂಬೈ ಹಾಗೂ ಆಂಧ್ರಪ್ರದೇಶದಲ್ಲಿಯೂ ಇಂತಹದ್ದೇ ವಂಚನೆಯನ್ನು ಮಾಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಿ.ಕೃಷ್ಣಕಾಂತ್ ಅವರು ತಿಳಿಸಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆಯನ್ನು ನಡೆಸುತ್ತಿದ್ದಾರೆ.
Education Loan Fraud Rs 18 Crore for Students Bengaluru-Based Firm Geeklurn