ಲಕ್ನೋ : ( Fake Blood Platelets) ಡೆಂಗ್ಯೂ ರೋಗಿಗಳಿಗೆ ರಕ್ತದ ಪ್ಲಾಸ್ಮಾ ಬದಲು ಮೂಸಂಬಿ ಜೂಸ್ ಕುಡಿಸಿದ ಆರೋಪದ ಹಿನ್ನೆಲೆಯಲ್ಲಿ ಪ್ರಯಾಗ್ ರಾಜ್ ನಲ್ಲಿ ಆಸ್ಪತ್ರೆಯನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. ಅಲ್ಲದೇ ಡೆಂಗ್ಯೂ ರೋಗಿಗಳ ಕುಟುಂಬಗಳಿಗೆ ರಕ್ತದ ಪ್ಲಾಸ್ಮಾವನ್ನು ಪ್ಲೇಟ್‌ಲೆಟ್(Fake Blood Platelets)ಗಳಾಗಿ ಮಾರಾಟ ಮಾಡುತ್ತಿದ್ದ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಅಕ್ರಮವಾಗಿ ರಕ್ತ ಪೂರೈಕೆ ಮಾಡಿದ ಆರೋಪದ ಮೇಲೆ ಕೆಲವು ದಿನಗಳ ಹಿಂದೆ 12 ಜನರನ್ನು ಬಂಧಿಸಲಾಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.ಆಸ್ಪತ್ರೆಯೊಂದು ಡೆಂಗ್ಯೂ ಪೀಡಿತರಿಗೆ ಪ್ಲೇಟ್‌ಲೆಟ್‌ಗಳ ಬದಲು ಮೂಸಂಬಿ ರಸ(Fake Blood Platelets) ಕುಡಿಸಿದ್ದಾರೆ. ಇದರಿಂದಾಗಿ ಡೆಂಗ್ಯೂ ರೋಗಿಯೊಬ್ಬರು ಸಾವನ್ನಪ್ಪಿದ್ದರು. ಈ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆಯಲ್ಲಿ ರೋಗಿಗೆ ಪ್ಲೇಟ್ ಲೆಟ್ಸ್ ನೀಡಿರುವುದು ಬಯಲಿಗೆ ಬಂದಿದೆ. ಈ ಕುರಿತು ತನಿಖೆ ನಡೆಸಿದಾಗ ರೋಗಿಗಳ ಸಂಬಂಧಿಗಳು ಪ್ಲೇಟ್ ಲೆಟ್ ಬದಲು ಮೂಸಂಬಿ ಜೂಸ್ ನೀಡಲಾಗಿದೆ ಎಂದು ಆರೋಪಿಸಿದ್ದರು.
ಆದರೆ ಆಸ್ಪತ್ರೆಯ ಸಿಬ್ಬಂದಿಗಳು ತಾವು ರೋಗಿಯ ಸಂಬಂಧಿಕರು ಬ್ಲಡ್ ಬ್ಯಾಂಕ್ ನಿಂದ ತಂದುಕೊಟ್ಟ ಪ್ಲಾಸ್ಮಾವನ್ನೇ ನೀಡಿರುವುದಾಗಿ ಹೇಳಿದ್ದಾರೆ. ಆದರೆ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಿದ ವೇಳೆಯಲ್ಲಿ ರಕ್ತದ ನಕಲಿ ಪ್ಲಾಸ್ಮಾಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ 10 ಮಂದಿ ಆರೋಪಿಗಳನ್ನು ಯುಪಿಯ ಪೋಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : Gujarath Traffic rules: ಈ ರಾಜ್ಯದಲ್ಲಿ 7 ದಿನ ಟ್ರಾಫಿಕ್ ರೂಲ್ಸ್ ಇರಲ್ವಂತೆ.. ವಾಹನ ಸವಾರರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್..!
ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಜ್ವರ ಸಾಕಷ್ಟು ಹರಡುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು ನಕಲಿ ಪ್ಲೇಟ್ ಲೆಟ್ ಮಾಆರಾಟಕ್ಕೆ ಮುಂದಾಗಿದ್ದಾರೆ. ಡೆಂಗ್ಯೂ ರೋಗಿಗಳಿಂದ ದುಬಾರಿ ಹಣವನ್ನು ಪಡೆದು ನಕಲಿ ಪ್ಲಾಸ್ಮಾ ಮಾರಾಟ ಮಾಡುವ ಮೂಲಕ ವಂಚನೆ ನಡೆಸುತ್ತಿದ್ದರು ಅನ್ನೋದು ತನಿಖೆಯ ವೇಳೆಯಲ್ಲಿ ಬಯಲಿಗೆ ಬಂದಿದೆ.
“ಪ್ರಯಾಗ್‌ರಾಜ್‌ನಲ್ಲಿ ಪ್ಲೇಟ್‌ಲೆಟ್ ಬದಲು ಜ್ಯೂಸ್ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ನಾವು ಈ ಆರೋಪಿಗಳನ್ನು ಪ್ರಶ್ನಿಸಿದ್ದೇವೆ, ಆದರೆ ಆ ರೀತಿಯಾಗಿ ನಾವು ಮಾಡುತ್ತಿಲ್ಲ, ಬದಲಿಗೆ ರಕ್ತದ ಪ್ಲಾಸ್ಮಾವನ್ನು ಪ್ಲೇಟ್‌ಲೆಟ್‌ಗಳಾಗಿ ರವಾನಿಸಲಾಗುತ್ತಿದೆ ಎಂದು ಆರೋಪಿಗಳು ಹೇಳಿದ್ದರು” ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಶೈಲೇಶ್ ಪಾಂಡೆ ಅವರು ಹೇಳಿದರು.
ಇದನ್ನೂ ಓದಿ : ಕಾಂತಾರ ಸಿನಿಮಾ ಮೆಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ : ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯೆ
ಇದಕ್ಕೆ ಸಂಬಂಧಿಸಿದಂತೆ ಈ 10 ಮಂದಿ ಆರೋಪಿಗಳಿಂದ ಕೆಲವು ನಗದು, ಮೊಬೈಲ್ ಫೋನ್ ಮತ್ತು ವಾಹನಗಳ ಜೊತೆಗೆ ಪ್ಲಾಸ್ಮಾ ಪೌಚ್‌ಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದು,ಅದರ ಸುಳಿವಿನ ಮೇರೆಗೆ ಹತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೋಲೀಸ್ ಮುಖ್ಯಸ್ಥ ಶೈಲೇಶ್ ಪಾಂಡೆ ಹೇಳಿದರು
ಈ ಘಟನೆಯ ಕುರಿತಾದ ವೀಡಿಯೊ ವೈರಲ್ ಆದ ಬಳಿಕ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ. ಬಳಿಕ ಡೆಂಗ್ಯೂ ರೋಗಿಯಾದ ಪ್ರದೀಪ್ ಪಾಂಡೆ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ಯಾಕೆಟ್‌ಗಳಲ್ಲಿ ನಿಜವಾಗಿಯೂ ಹಣ್ಣಿನ ರಸವಿದೆಯೇ ಎಂಬುದು ಇನ್ನೂ ಸಾಬೀತಾಗಿಲ್ಲದ ಕಾರಣ ವರದಿಗಾಗಿ ಕಾಯಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರಬೇಕಾಗಿದೆ.
(Fake Blood Platelets) The authorities have closed the hospital in Prayagraj due to allegations that Dengue patients were given Moosambi juice instead of street plasma. Also, the police have arrested 10 accused who were selling blood plasma as fake blood platelets to the families of dengue patients.