Chinese Loan App : ಚೈನೀಸ್‌ ಲೋನ್‌ ಆಪ್‌ಗಳ ವಿರುದ್ಧ ಬೆಂಗಳೂರು ಪೊಲೀಸ್‌ ಸಮರ

ಬೆಂಗಳೂರು : ಸುಲಭವಾಗಿ ಸಾಲ ನೀಡುವ ಆಮಿಷವೊಡ್ಡುವ ಚೈನಾ ಲೋನ್ ಆಪ್(Chinese Loan App) ಗಳು ಜನರಿಗೆ ಕಿರುಕುಳ ನೀಡುತ್ತಿವೆ. ಈ ಹಿನ್ನೆಲೆಯಲ್ಲೀಗ ಚೈನಾ ಆಪ್ ಗಳ ವಿರುದ್ದ ಬೆಂಗಳೂರು ಪೊಲೀಸರು ಸಮರ ಸಾರಿದ್ದಾರೆ. ಚೀನಾ ವ್ಯಕ್ತಿಗಳು ನಿಯಂತ್ರಿಸುವ ಚೈನೀಸ್‌ ಲೋನ್‌ ಆಪ್‌ಗಳ ಮೇಲೆ ರಮನ್‌ ಗುಪ್ತಾ ಸಿಸಿಬಿ ಅಧಿಕಾರಿಗಳು ಮತ್ತು ಬೆಂಗಳೂರು ಸೈಬರ್‌ ಕ್ರೈಂ ಬ್ರಾಂಚ್‌ ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತನಿಖೆಯ ವೇಳೆಯಲ್ಲಿ ನೂರಾರು ಕೋಟಿ ರೂಪಾಯಿ ಹಣವನ್ನು ಪೊಲೀಸರು ಫ್ರೀಸ್‌ ಮಾಡಿದ್ದಾರೆ.

ಇತ್ತೀಚಿನ ಕಾಲದಲ್ಲಿ ಆನ್‌ಲೈನ್‌ ಮೂಲಕ ಹಣವನ್ನು ಪಾವತಿಸುವ ಆಪ್‌ಗಳ ಜೊತೆಗೆ ಆನ್‌ಲೈನ್‌ಗಳಲ್ಲಿ ಸಾಲವನ್ನು ನೀಡುವ ಆಪ್‌ ಗಳು ಆರಂಭಗೊಂಡಿವೆ. ಜನರು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದನೇ ಬಂಡವಾಳ ಮಾಡಿಕೊಂಡು ಆಪ್ ಗಳ ಮೂಲಕ ಸುಲಭ ಸಾಲದ ಆಮಿಷವೊಡ್ಡುತ್ತಿದ್ದಾರೆ. ಸಾಲ ಕೊಟ್ಟ ನಂತರದಲ್ಲಿ ಜನರಿಂದ ದುಬಾರಿ ಬಡ್ಡಿ ವಸೂಲಿ ಮಾಡುವುದು ಮಾತ್ರವಲ್ಲ, ಇನ್ನಿಲ್ಲದ ಕಿರುಕುಳ ನೀಡಲು ಆರಂಭಿಸುತ್ತಿದ್ದಾರೆ. ಆರಂಭದಲ್ಲಿ ಏಳು ಸಾವಿರ ರೂಪಾಯಿ ಸಾಲ ಕೊಟ್ಟು, ನಂತರ ಅದನ್ನು ಮರುಪಾವತಿ ಮಾಡದ ಜನರಿಗೆ ಅಶ್ಲೀಲ ಮೆಸೇಜ್ ಕಳುಹಿಸುವ ಮೂಲಕ ಹಿಂಸೆ ನೀಡುತ್ತಿದ್ದಾರೆ. ಇಂತಹ ಲೋನ್ ಆಪ್ಲಿಕೇಷನ್ ಗಳಿಗೆ ಹೆದರಿ ಸಾಕಷ್ಟು ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಈ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರು ಸೈಬರ್ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಕಳೆದ ಒಂದು ವರ್ಷದಿಂದಲೂ ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದರು. ಒಂದು ವರ್ಷದಿಂದ ಲೋನ್‌ ಅಕೌಂಟಿಗೆ ಹೋಗುತ್ತಿದ್ದ ಸುಮಾರು ನೂರು ಕೋಟಿ ರೂಪಾಯಿ ಹಣವನ್ನು ಫ್ರೀಜ್‌ ಮಾಡಿದ್ದಾರೆ. ಸಿಸಿಬಿ ಅಧಿಕಾರಿಗಳು 18 ಪ್ರಕರಣಗಳಲ್ಲಿ ಅಂದಾಜು 80 ಕೋಟಿಯಷ್ಟು ಹಣವನ್ನು ವಿವಿಧ ಬ್ಯಾಂಕ್‌ ಅಕೌಂಟ್‌ಗಳಿಂದ ಫ್ರೀಜ್‌ ಮಾಡಿದ್ದಾರೆ.

ಸಿಸಿಬಿ ಅಧಿಕಾರಿಗಳು ಫ್ರೀಜ್‌ ಮಾಡಿದ ಹಣವನ್ನು ಮುಟ್ಟುಗೋಲು ಹಾಕುವಂತೆ ಇಡಿಗೆ ಶಿಫಾರಸು ಮಾಡಿದ್ದಾರೆ. ಚೈನೀಸ್‌ ಲೋನ್‌ ಆಪ್‌ಗಳ ವಿರುದ್ಧ ಇಡಿ ಕೂಡ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಭಾರತದಲ್ಲಿ ಲೋನ್‌ ಆಪ್‌ಗಳ ಮೂಲಕ ಸಂಪಾದಿಸುವ ಕೋಟ್ಯಾಂತರ ರೂಪಾಯಿ ಹಣವನ್ನು ಹಾಂಕಾಂಗ್‌ ಮತ್ತು ಚೀನಾ ದೇಶಕ್ಕೆ ಟ್ರೇಡಿಂಗ್‌ ವರ್ಗಾವಣೆ ಮಾಡಲಾಗುತ್ತಿದೆ. ಭಾರತದಿಂದ ಹೋಗುತ್ತಿರುವ ಕೋಟ್ಯಾಂತರ ರೂಪಾಯಿ ಹಾಗೂ ಫ್ರೀಸ್‌ ಆಗಿರುವ ಹಣದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ : Fake Blood Platelets : ಡೆಂಗ್ಯೂ ರೋಗಿಗೆ ಪ್ಲಾಸ್ಮಾ ಬದಲು ಮೂಸಂಬಿ ಜೂಸ್ : ನಕಲಿ ಪ್ಲೇಟ್‌ ಲೆಟ್‌ ಜಾಲಪತ್ತೆ, 10 ಮಂದಿ ಅರೆಸ್ಟ್

ಇದನ್ನೂ ಓದಿ : Madhya Pradesh Bus Truck Accident : ಬಸ್‌ – ಟ್ರಕ್ ಭೀಕರ ಅಪಘಾತ :15 ಸಾವು, 40 ಮಂದಿ ಗಂಭೀರ

ಇದನ್ನೂ ಓದಿ : Gujarath Traffic rules: ಈ ರಾಜ್ಯದಲ್ಲಿ 7 ದಿನ ಟ್ರಾಫಿಕ್ ರೂಲ್ಸ್ ಇರಲ್ವಂತೆ.. ವಾಹನ ಸವಾರರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್..!

ಈ ಪ್ರಕರಣದಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ರೇಜರ್‌ಪೇ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಹಣಕಾಸು ಸಂಸ್ಥೆಗಳ ಕಛೇರಿಗಳ ಮೇಲೆ ಇಡಿ ಅಧಿಕಾರಿಗಳು ಕಾರ್ಯಚರಣೆಯನ್ನು ನಡೆಸಿದ್ದಾರೆ. ಚೈನೀಸ್‌ ಆಪ್‌ಗಳು, ಚೀನಾ ವ್ಯಕ್ತಿಗಳು ನಿಯಂತ್ರಿಸುವ ಹಾಗೂ ನಿರ್ವಹಿಸುವ ಘಟಕಗಳನ್ನು ವಶಪಡಿಸಿಕೊಂಡು ಇಡಿ ಅಧಿಕಾರಿಗಳು ಕಾರ್ಯಚರಣೆಯನ್ನು ಪ್ರಾರಂಭಿಸಿದ್ದಾರೆ. ಇನ್ನಾದರೂ ದೇಶದ ಜನರು ಆನ್‌ಲೈನ್‌ ಮೂಲಕ ಲೋನ್‌ನ್ನು ಪಡೆಯುವ ಮೂಲಕ ಎಚ್ಚರ ವಹಿಸಬೇಕೆಂದು ತಿಳಿಸಿದ್ದಾರೆ.

Bangalore police war against Chinese loan apps

Comments are closed.