ಉಡುಪಿ : ಸುಳ್ಳು ದಾಖಲೆಗಳನ್ನು ನೀಡಿ ಮೂರನೇ ಮದುವೆಯಾಗಿ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಮೂಳೂರಿನ ನಿವಾಸಿ ಮೂಳೂರು ನಿವಾಸಿ ಮೊಹಮ್ಮದ್ ರಫೀಕ್ (44ವರ್ಷ) ಬಂಧಿತ ಆರೋಪಿಯಾಗಿದ್ದಾನೆ.
ರಫೀಕ್ 2000ನೇ ಇಸವಿಯಲ್ಲಿ ಮೂರನೇ ಮದುವೆಯಾಗುವ ಸಂದರ್ಭದಲ್ಲಿ ಜಮಾ ಅತ್ ವ್ಯಾಪ್ತಿಯ ಮಸೀದಿಯ ಲೆಟರ್ ಹೆಡ್ ದುರುಪಯೋಗ ಪಡಿಸಿಕೊಂಡಿದ್ದಾನೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳೆದ 20 ವರ್ಷಗಳಿಂದಲೂ ಆರೋಪಿ ನಾಪತ್ತೆಯಾಗಿದ್ದ. ಇದೀಗ ಉಳ್ಳಾಲದಲ್ಲಿ ಆರೋಪಿಯ ಎರಡನೇ ಪತ್ನಿಯ ಮಗಳ ಮದುವೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಕಾಪು ಕ್ರೈಂ ಎಸ್‌ಐ ಐ.ಆರ್. ಗಡ್ಡೇಕರ್, ಸಿಬ್ಬಂದಿಗಳಾದ ಸುಧಾಕರ್, ರಫೀಕ್, ಸಂದೇಶ್, ಆನಂದ್ ಕಾರ್ಯಾಚರಣೆ ನಡೆಸಿ, ಮಗಳ ಮದುವೆ ಮುಗಿದ ಬಳಿಕ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೊಹಮ್ಮದ್ ರಫೀಕ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನವಿಧಿಸಿದೆ.