ಇಂದಿನಿಂದ ಜಾರಿಗೆ ಬಂತು ಹೊಸ ನಿಯಮ : ಬ್ಯಾಂಕ್ ಖಾತೆಯಲ್ಲಿ 500 ರೂ. ಬ್ಯಾಲೆನ್ಸ್ ಕಡ್ಡಾಯ !

ನವದೆಹಲಿ : ಬ್ಯಾಂಕುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮ ಪಾಲನೆ ಮಾಡೋದು ಕಡ್ಡಾಯ. ಹಲವು ಬ್ಯಾಂಕುಗಳು ಈ ನಿಯಮವನ್ನು ಪಾಲನೆ ಮಾಡುತ್ತಿವೆ. ಅದ್ರಲ್ಲೂ ಇದೀಗ ಪೋಸ್ಟ್ ಆಫೀಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಕನಿಷ್ಟ 500ರೂಪಾಯಿ ಬ್ಯಾಲೆನ್ಸ್ ಇಡಲೇ ಬೇಕು.

ಕಳೆದ ಕೆಲ ವರ್ಷಗಳಿಂದಲೂ ಜನರು ಹೆಚ್ಚಾಗಿ ಪೋಸ್ಟ್ ಆಫೀಸ್ ಬ್ಯಾಂಕ್ ಗಳ ಮೊರೆ ಹೋಗುತ್ತಿದ್ದಾರೆ. ಪೋಸ್ಟ್ ಆಫೀಸ್ ಬ್ಯಾಂಕ್ ಕೂಡ ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಇದೀಗ ಖಾತೆಯಲ್ಲಿ ಕನಿಷ್ಠ 500 ರೂಪಾಯಿ ಹಣ ಇಡುವುದನ್ನು ಕಡ್ಡಾಯಗೊಳಿಸಿದೆ.

ನೀವೇನಾದ್ರೂ ಪೋಸ್ಟ್ ಆಫೀಸ್ ಬ್ಯಾಂಕಿನಲ್ಲಿ 1000 ರೂಪಾಯಿ ಹಣವನ್ನು ಇಟ್ಟಿದ್ರೆ ನೀವು ಅದರಲ್ಲಿ 500 ರೂಪಾಯಿಯನ್ನು ಮಾತ್ರವೇ ತೆಗೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಒಂದೊಮ್ಮೆ ಕನಿಷ್ಟ ಉಳಿತಾಯ ನಿಯಮವನ್ನು ಪಾಲನೆ ಮಾಡದೇ ಇದ್ರೆ 100 ರೂಪಾಯಿ ದಂಡ ಪಾವತಿಸಲೇ ಬೇಕು.

ಹೊಸ ನಿಯಮದ ಪ್ರಕಾರ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಲು 500 ರೂಪಾಯಿ ಠೇವಣಿ ಇಡಬೇಕು. ಪ್ರಸ್ತುತ ಉಳಿತಾಯ ಖಾತೆಯ ಹಣಕ್ಕೆ ಶೇ.4ರ ಬಡ್ಡಿದರವನ್ನು ನೀಡಲಾಗುತ್ತಿದೆ. ಅಂದಹಾಗೆ ಈ ಹೊಸ ನಿಯಮ ಡಿಸೆಂಬರ್ 11 ರಿಂದಲೇ ಜಾರಿಗೆ ಬರುತ್ತಿದೆ.

Comments are closed.