
ಚಂಡೀಗಢ : ಪರೀಕ್ಷೆ ಮುಗಿಸಿ ಕಾಲೇಜಿನಿಂದ ಹೊರ ಬರುತ್ತಿದ್ದ ಯುವತಿಯೋರ್ವಳನ್ನು ಯವಕ ನೋರ್ವ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಫರಿದಾಬಾದ್ ನಲ್ಲಿ ನಡೆದಿದೆ.

ನಿಖಿತಾ ಎಂಬ 21 ವರ್ಷ ಯುವತಿ ಕಾಲೇಜಿಗೆ ಪರೀಕ್ಷೆ ಬರೆಯಲು ತೆರಳಿದ್ದಳು. ತನ್ನ ಸ್ನೇಹಿತೆಯ ಜೊತೆಯಲ್ಲಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಇಬ್ಬರು ಯುವಕರು ನಿಖಿತಾಳನ್ನು ಕಾರಿನೊಳಗೆ ತಳ್ಳಿ ಅಪಹರಣ ಮಾಡಲು ಯತ್ನಿಸಿದ್ದರು. ಆದರೆ ಯುವತಿ ಅವರಿಬ್ಬರ ಕೈಯಿಂದ ತಪ್ಪಿಸಿಕೊಂಡಿದ್ದಾಳೆ. ಈ ವೇಳೆಯಲ್ಲಿ ಆಕೆಯ ಗೆಳತಿ ಕೂಡ ಸಹಾಯ ಮಾಡಲು ಯತ್ನಿಸಿದ್ದಾಳೆ. ಅಂತಿಮವಾಗಿ ಸಿಟ್ಟಿಗೆದ್ದ ಯುವಕ ನಿಖಿತಾಗೆ ಗುಂಡಿಕ್ಕಿ ಕಾರಿನಲ್ಲಿ ಇನ್ನೋರ್ವನ ಜೊತೆಗೆ ಪರಾರಿಯಾಗಿದ್ದಾನೆ.

ನಡು ರಸ್ತೆಯಲ್ಲಿಯೇ ಯುವತಿಯೋರ್ವಳನ್ನು ಅಪಹರಣ ಮಾಡಲು ಯತ್ನಿಸಿ, ಹತ್ಯೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಕೂಡ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಯುವತಿಯನ್ನು ಹತ್ಯೆ ಮಾಡಿರುವ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ. ಕೊಲೆ ಮಾಡಿರುವ ಯುವಕ ಹಾಗೂ ಯುವತಿ ಪರಿಚಯಸ್ಥರು ಎನ್ನುವುದು ತಿಳಿದು ಬಂದಿದೆ. ಆದರೆ ಘಟನೆ ನಿಖರವಾದ ಕಾರಣ ತಿಳಿದುಬಂದಿಲ್ಲ.