ಚಲಿಸುವ ಅಟೋದಲ್ಲೊಂದು ಮನೆಯ ಮಾಡಿ….! ಚೈನೈ ಯುವಕನ ಸೋಲೋ 0.1 ಸಾಹಸ…!!

ಚೈನೈ: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅನ್ನೋ ಮಾತಿದೆ. ಇದಕ್ಕೆ ಕಾರಣವೂ ಇದೆ. ಜಾಗ ಖರೀದಿಸಿ, ಮನೆಯ ಕಚ್ಚಾ ವಸ್ತು ಹೊಂದಿಸಿ ಸ್ಥಳೀಯ ಆಡಳಿತದ ಅನುಮತಿ ಪಡೆದು ಮನೆ ಕಟ್ಟೋದು ಅಷ್ಟು ಸುಲಭದ ಮಾತಲ್ಲ. ಆದರೆ ಇಲ್ಲೊಬ್ಬ ಯುವಕ ಮಾತ್ರ ಯಾರ ಅನುಮತಿಯ ಜಂಜಾಟವೂ ಇಲ್ಲದಂತ ಚಲಿಸುವ ಮನೆ ನಿರ್ಮಿಸಿ ದೇಶದ ಗಮನ ಸೆಳೆದಿದ್ದಾನೆ.

ತಮಿಳುನಾಡಿನ ಚೈನೈ ಮೂಲದ  23 ವರ್ಷದ ಅರುಣ್ ಪ್ರಭು ಇಂತಹದೊಂದು ಸಾಹಸ ಹಾಗೂ ವಿಭಿನ್ನ ಕೆಲಸ ಮಾಡಿ ತಂತ್ರಜ್ಞಾನವನ್ನು ಹೇಗೆಲ್ಲ ಸದ್ಭಳಕೆ ಮಾಡಿಕೊಳ್ಳಬಹುದೆಂಬ ಉದಾಹರಣೆ ಜನರ ಮುಂದಿಟ್ಟಿದ್ದಾರೆ. ಬಜಾಜ್ ನ ಲಗೇಜ್ ರಿಕ್ಷಾವನ್ನು ಅರುಣ್ ಟೆಕ್ನಾಲಜಿ ಬಳಿ 1 ಬೆಡ್ ರೂಂನ ಮನೆಯನ್ನಾಗಿ ಪರಿವರ್ತಿಸಿದ್ದಾರೆ.

ಈ ಮನೆಗೆ ಸೋಲೋ 0.1 ಎಂದು ಹೆಸರಿಡಲಾಗಿದೆ. ಈ ಮನೆ ಸಂಪೂರ್ಣ ಅಟೋದ ಮೂರು ಗಾಲಿಗಳ ಮೇಲೆ ನಿಂತಿದ್ದು, ಟೆರೆಸ್ ನಲ್ಲಿ ಸೋಲಾರ್ ಟವರ್ ಹಾಗೂ 250 ಲೀಟರ್ ನೀರಿನ ಟ್ಯಾಂಕ್ ಕೂಡ ಹೊಂದಿದೆ. ಅರುಣ ಪ್ರಭು ಪ್ರಕಾರ   ಈ ಅಟೋದಲ್ಲಿ ಇಬ್ಬರು ಮಧ್ಯವಯಸ್ಕರು ಆರಾಂ ಆಗಿ ವಾಸಮಾಡಬಹುದು.

ಈ ಮನೆಯಲ್ಲಿ ಬೆಡ್, ಕಿಚನ್, ಲಿವಿಂಗ್ ರೂಂ, ಬಾತ್ ರೂಂ ಹೀಗೆ ಎಲ್ಲ ಸೌಲಭ್ಯವೂ ಇದೆ. ರಿಕ್ಷಾ ಖರೀದಿ ಹೊರತುಪಡಿಸಿ ಕೇವಲ 1 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮನೆ ನಿರ್ಮಿಸಲಾಗಿದೆ. ಸಂಪೂರ್ಣ ಮನೆ ರಿಕ್ಷಾದ ಹಿಂಬದಿ ಭಾಗದ ಮೇಲೆ ನಿಂತಿದೆ. ಇದು 6*6 ಜಾಗದಲ್ಲಿ ಸಿದ್ಧವಾದ  ಈ ಮನೆ ಕಡಿಮೆ ಜಾಗದಲ್ಲಿ ಮನುಷ್ಯನಿಗೆ ಅಗತ್ಯವಾದ ಎಲ್ಲ ಸೌಲಭ್ಯ ಹೊಂದಿದೆ. ಇದೇ ಈ ಮನೆಯ ಹೆಗ್ಗಳಿಕೆ ಎನ್ನುತ್ತಾರೆ ಅರುಣ.

ಮುಂಬೈ,ಚೈನೈನಂತಹ ಮಹಾನಗರದಲ್ಲಿ ಕೊಳಗೇರಿ ಹಾಗೂ ಸ್ಲಂಗಳಲ್ಲಿ ಜನರು ಪುಟ್ಟ ವಾಸಕ್ಕೆ ಯೋಗ್ಯ ಮನೆ ನಿರ್ಮಿಸಲು ಕನಿಷ್ಠ 4-5 ಲಕ್ಷ ವೆಚ್ಚ ಮಾಡುತ್ತಾರೆ. ಆದರೆ ಮನೆಯಲ್ಲಿ ಟಾಯ್ಲೆಟ್ ಸೌಲಭ್ಯವೂ ಇರೋದಿಲ್ಲ. ಇದನ್ನು ನೋಡಿದ ಮೇಲೆ ಜನರಿಗೆ ಕಡಿಮೆ ಬಜೆಟ್ ನಲ್ಲಿ ಕನಿಷ್ಠ ಮೂಲಸೌಲಭ್ಯ ಹೊಂದಿದ ಮನೆಗಳನ್ನು ಒದಗಿಸಬೇಕೆಂಬ ಹಂಬಲ ಮೂಡಿತು. ಹೀಗಾಗಿ ಈ ಮನೆ ಸಿದ್ಧ ಪಡಿಸಿದೆ ಅಂತಾರೆ ಅರುಣ ಪ್ರಭು.

2019 ರ ಅಗಸ್ಟ್ ನಲ್ಲಿ ವೇಸ್ಟ್ ವಸ್ತುಗಳನ್ನು ಬಳಸಿಕೊಂಡು ಅಟೋದಲ್ಲಿ ಮನೆ ನಿರ್ಮಿಸಲು ಆರಂಭಿಸಿದ ಅರುಣ ಪ್ರಭು, ಕೇವಲ 5 ತಿಂಗಳಿನಲ್ಲಿ ಈ ಮನೆ ನಿರ್ಮಿಸಿದ್ದಾರೆ. ಬಸ್ ಗಳಿಂದ ವೇಸ್ಟ್ ಎಂದು ಎಸೆಯಲಾದ ತಗಡಿನ ಹಲಗೆ ಸೇರಿದಂತೆ ಸ್ಕ್ರ್ಯಾಪ್ ವಸ್ತುಗಳನ್ನೇ ಬಳಸಿಕೊಂಡು ಈ ಮನೆ ನಿರ್ಮಿಸಾಗಿದೆ.

ಅರುಣ ಪ್ರಕಾರ ಈ ಟಾಪ್ ಹೌಸ್ ನ್ನು ಇತರ ವಾಹನಗಳ ಮೇಲೂ  ಫಿಕ್ಸ್ ಮಾಡಬಹುದಂತೆ. ಸಧ್ಯ ಬಿಲ್ ಬೋಡ್ ಕಲೆಕ್ಟಿವ್ ಕಂಪನಿಯಲ್ಲಿ ಇಂಜೀನಿಯರ್ ಆಗಿ ಕೆಲಸ ಮಾಡುತ್ತಿರೋ ಅರುಣ್, ತಮ್ಮ  ಈ ಪೋರ್ಟೆಬಲ್ ಹೌಸ್ ನ ಪೇಟೆಂಟ್ ಗಾಗಿ ಕೂಡ ಅಪ್ಲೈ ಮಾಡಿದ್ದಾರಂತೆ. ಸಧ್ಯದ ಪರಿಸ್ಥಿತಿಯಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಮನೆ ಕಟ್ಟೋದಕ್ಕಿಂತ 1 ಲಕ್ಷ ವೆಚ್ಚದಲ್ಲಿ ಸಿಗೋ ಈ ಸೋಲೋ 0.1 ನಿಜಕ್ಕೂ ಬಡವರ ಪಾಲಿಗೆ ನೆಮ್ಮದಿಯ ಸೂರು ಒದಗಿಸೋದರಲ್ಲಿ ಅನುಮಾನವೇ ಇಲ್ಲ.

Comments are closed.