ಮುಂಬೈ : ಸಿನಿಮಾದಲ್ಲಿ ಅವಕಾಶ ನೀಡೋದಾಗಿ ಆಮಿಷವೊಡ್ಡಿ ನಂತರ ಯುವತಿಯರು ಹಾಗೂ ಮಹಿಳೆಯನ್ನು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ನಿರ್ಮಾಪಕನೋರ್ವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಮೀರಾ ರಸ್ತೆಯಲ್ಲಿರುವ ವಸತಿ ಸಮುಚ್ಚಯದಲ್ಲಿ ಹಲವು ವರ್ಷಗಳಿಂದಲೂ ಆರೋಪಿ ಖಾನಯಲಾಲ್ ಬಾಲ್ಚಂದಾನಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ವನಿತಾ ಇಂಗಲ್ ಎಂಬಾಕೆ ಏಜೆಂಟ್ ಆಗಿ ಕೆಲಸವನ್ನು ಮಾಡುತ್ತಿದ್ದರು.

ಖಾನಯಲಾಲ್ ಬಾಲ್ಚಂದಾನಿ ತಾನು ನಿರ್ಮಾಪಕ ಎಂದು ಯುವತಿಯರು ಹಾಗೂ ಮಹಿಳೆಯರ ಬಳಿಯಲ್ಲಿ ಪರಿಚಯ ಮಾಡಿಸಿಕೊಳ್ಳುತ್ತಿದ್ದ. ನಂತರದಲ್ಲಿ ಅವರಿಗೆ ಸಿನಿಮಾದ ಆಫರ್ ತೋರಿಸಿ ವೇಶೈಾವಾಟಿಕೆ ದಂಧಗೆ ಬಳಸಿಕೊಳ್ಳುತ್ತಿದ್ದ. ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ : ವಿಶಾಲ ಗಾಣಿಗ ಕೊಲೆಗೆ 6 ತಿಂಗಳ ಹಿಂದೆ ಸ್ಕೆಚ್ : ಹಣದ ಪಾರ್ಸೆಲ್ ಕಳುಹಿಸಿ ಕೊಲೆ ಮಾಡಿಸಿದ ಪತಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಧಿಕಾರಿ ಡಾ.ಮಹೇಶ್ ಪಾಟೀಲ್ ತಿಳಿಸಿದ್ದಾರೆ. ಒಂದೆಡೆ ಅಶ್ಲೀಲ ಚಿತ್ರಗಳ ನಿರ್ಮಾಣದ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.