ಬೆಳ್ತಂಗಡಿ : ಬೆಂಕಿ ಕೆನ್ನಾಲಗೆಗೆ ತುತ್ತಾದ ಸೂಪರ್‌ ಮಾರ್ಕೆಟ್‌ : ಲಕ್ಷಾಂತರ ರೂ ನಷ್ಟ

ಬೆಳ್ತಂಗಡಿ : ಬೆಳ್ಳಂಬೆಳಿಗ್ಗೆ ಸೂಪರ್‌ ಮಾರ್ಕೆಟ್‌ನಲ್ಲಿ (Fire disaster) ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ನಷ್ಟ ಆಗಿದೆ. ಮುಂಡಾಜೆಯಲ್ಲಿ ಸೂಪರ್‌ ಮಾರ್ಕೆಟ್‌ ಒಂದರಲ್ಲಿ ಇಂದು ಬೆಳಗ್ಗಿನ ಜಾವ ಆಕಸ್ಮಿಕ ಅಗ್ನಿ ದುರಂತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಬರುವರುವುದರ ಒಳಗೆ ಬೆಂಕಿ ಕಿನ್ನಾಲೆಗೆ ಸುಟ್ಟು ಕರಕಲಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಬಿ. ಎಂ ಹಂಝ ಎಂಬವರ ಮಾಲಿಕತ್ವದ ಸೂಪರ್‌ ಮಾರ್ಕೆಟ್‌ನಲ್ಲಿ ಬೆಳಗ್ಗೆ ಐದು ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳು ಕಾರಣವೇನು ಎಂಬುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸ್ಥಳೀಯರ ಸಹಕಾರದೊಂದಿಗೆ ಅಗ್ನಿಶಾಮಕ ದಳ ಬೆಂಕಿ ನಂದಿಸುವಷ್ಟರಲ್ಲಿ ಅಂಗಡಿ ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಇದನ್ನೂ ಓದಿ : ಲೇಡಿ ಸಿಂಗಂ ಸಾವಿನ ಪ್ರಕರಣ : ಸಿಬಿಐಗೆ ಹಸ್ತಾಂತರಿಸಿದ ಅಸ್ಸಾಂ ಸರಕಾರ

ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಈ ಘಟನೆ ಆಕಸ್ಮಿಕವೋ ಅಥವಾ ಬೇಕೆಂದು ಮಾಡಿರುವುದೋ ಎಂದು ಸೂಕ್ತ ತನಿಖೆ ಮೂಲಕ ತಿಳಿಯಬೇಕಾಗಿದೆ.

ಉಳ್ಳಾಲದಲ್ಲಿ ರೈಲು ಢಿಕ್ಕಿ ಯುವಕ ಬಲಿ

ಉಳ್ಳಾಲ : ಚಲಿಸುತ್ತಿರುವ ರೈಲು ಢಿಕ್ಕಿ ಹೊಡೆದ ಪರಿಣಾಮವಾಗಿ ಹಳಿ ದಾಟುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸದ್ಯ ಈ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ತೊಕ್ಕಟ್ಟು ಓಳಪೇಟೆಬಳಿ ಶನಿವಾರ ರಾತ್ರಿ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಅಪಘಾತದಲ್ಲಿ ಮೃತಪಟ್ಟ ಯುವಕ 40 ವರ್ಷದ ಬಿಹಾರ ಮೂಲದ ಶ್ರವಣ್‌ ದಾಸ್‌ ಎಂದು ಗುರುತಿಸಲಾಗಿದೆ. ಶ್ರವಣ್‌ ದಾಸ್‌ ಕಲ್ಕಟ್ಟದಲ್ಲಿ ಕೆಲಸ ಮುಗಿಸಿ ತೊಕ್ಕೊಟ್ಟು ವಿನಲ್ಲಿರುವ ನಿವಾಸಕ್ಕೆ ಬಂದಿರುತ್ತಾರೆ. ಈ ವೇಳೆ ಸಾಂಬಾರ್‌ ತರಲೆಂದು ಹೊಟೇಲ್‌ಗೆ ಹೋಗಿ ವಾಪಸ್‌ ರೈಲ್ವೆ ಹಳಿ ದಾಟಿ ಬರುವಾಗ ರೈಲು ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಶ್ರವಣ್‌ ದಾಸ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳಕ್ಕೆ ಬಂದ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಿಸೆಯಲ್ಲಿ ದೊರೆತ ಆಧಾರ್‌ ಕಾರ್ಡ್‌ ಮೂಲಕ ಗುರುತು ಹಿಡಿಯಲಾಗಿದೆ. ಅವರ ಪತ್ನಿ ಮಕ್ಕಳು ಬಿಹಾರದಲ್ಲಿದ್ದು, ಶ್ರವಣ್‌ ದಾಸ್‌ ಬಾಡಿಗೆ ಕೊಠಡಿಯಲ್ಲಿ ಒಂಟಿಯಾಘಿ ಇದ್ದರು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Fire disaster: Belthangadi: Supermarket gutted by fire: Loss of lakhs of rupees

Comments are closed.