Former MLA Neeraja Reddy : ಭೀಕರ ಕಾರು ಅಪಘಾತ ; ಮಾಜಿ ಶಾಸಕಿ, ಬಿಜೆಪಿ ನಾಯಕಿ ನೀರಜಾ ರೆಡ್ಡಿ ಸಾವು

ತೆಲಂಗಾಣ : (Former MLA Neeraja Reddy) ಕಾರಿನ ಟೈರ್‌ ಸ್ಪೋಟಗೊಂಡು ಕಾರು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಮಾಜಿ ಶಾಸಕಿಯೋರ್ವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಗಡ್ಯಾಲ್ ಜೋಗುಲಾಂಬ ಜಿಲ್ಲೆಯ ಇಟಿಕ್ಯಾಲ ಗ್ರಾಮದ ಬಳಿ ನಡೆದಿದೆ. ಆಲೂರು ಕ್ಷೇತ್ರದ ಮಾಜಿ ಶಾಸಕಿ ಪಾಟೀಲ್ ನೀರಜಾ ರೆಡ್ಡಿ (50 ವರ್ಷ) ಭಾನುವಾರ ತೆಲಂಗಾಣದ ಗಡ್ಯಾಲ್ ಜೋಗುಲಾಂಬ ಜಿಲ್ಲೆಯ ಇಟಿಕ್ಯಾಲ ಗ್ರಾಮದ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಹೈದರಾಬಾದ್‌ನಿಂದ ಕರ್ನೂಲ್‌ಗೆ ತೆರಳುತ್ತಿದ್ದ ವೇಳೆ ತೆಲಂಗಾಣದ ಇಟಿಕ್ಯಾಲ ಮಂಡಲ್‌ನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44ರಲ್ಲಿ ಟೈರ್‌ ಒಡೆದು ಕಾರು ಪಲ್ಟಿಯಾಗಿದೆ. ಪರಿಣಾಮ ಶಾಸಕಿಯ ತಲೆ ಮತ್ತು ದೇಹಕ್ಕೆ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೀರಜಾ ರೆಡ್ಡಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ

“ನೀರಜಾ ರೆಡ್ಡಿ ಅವರು ಹೈದರಾಬಾದ್‌ನಿಂದ ಕರ್ನೂಲ್‌ಗೆ ತಮ್ಮ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ವಾಹನದ ಹಿಂಬದಿಯ ಒಂದು ಟೈರ್ ಒಡೆದ ಪರಿಣಾಮ ಕಾರು ರಸ್ತೆಯಿಂದ ಆಚೆಗೆ ಪಲ್ಟಿಯಾಗಿದೆ ಮತ್ತು ಕ್ಯಾರೇಜ್‌ವೇ ಆಚೆಗಿನ ಕಡಿದಾದ ಗ್ರೇಡಿಯಂಟ್ ಕೆಳಗೆ ಪಲ್ಟಿಯಾಗಿದೆ. ಅಪಘಾತವು ಮಧ್ಯಾಹ್ನ 4.40 ರ ಸುಮಾರಿಗೆ ಸಂಭವಿಸಿದೆ ಎಂದು ಹೇಳಲಾಗಿದೆ.” ಎಂದು ಆಲಂಪುರ್ ಸರ್ಕಲ್ ಇನ್ಸ್‌ಪೆಕ್ಟರ್ ದಿ ಹಿಂದೂಗೆ ತಿಳಿಸಿದ್ದಾರೆ.

ನೀರಜಾ ರೆಡ್ಡಿ 2009 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಆಯ್ಕೆಯಾದರು. ಆದರೆ 2019 ರಲ್ಲಿ ಅವರು ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ (ವೈಎಸ್‌ಆರ್‌ಸಿಪಿ) ಸೇರಿದರು. ನಂತರ, ಅವರು ಬಿಜೆಪಿಗೆ ಸೇರ್ಪಡಗೊಂಡರು. ಅವರ ಪತಿ ಪಾಟೀಲ್ ಶೇಶಿ ರೆಡ್ಡಿ, ಪತ್ತಿಕೊಂಡ ಮಾಜಿ ಶಾಸಕರಾಗಿದ್ದು, 1996 ರಲ್ಲಿ ಬಣ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟರು. ಬಿಜೆಪಿ ಸೇರಿದ ನಂತರ ನೀರಜಾ ರೆಡ್ಡಿ ಅವರನ್ನು ಆಲೂರು ಕ್ಷೇತ್ರದ ಪಕ್ಷದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಆಂಧ್ರಪ್ರದೇಶ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ವಿಷ್ಣುವರ್ಧನ್ ರೆಡ್ಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ

ಇದನ್ನೂ ಓದಿ : Couple cutoff their heads : ಅಪಾರ ದೈವ ಭಕ್ತಿ : ತಲೆಯನ್ನು ಕತ್ತರಿಸಿ ದೇವರಿಗೆ ಸಮರ್ಪಿಸಿದ ದಂಪತಿ

Former MLA Neeraja Reddy: Terrible car accident; Former MLA, BJP leader Neeraja Reddy passed away

Comments are closed.