ಒಂದೇ ಗ್ರಾಮದ ನಾಲ್ವರು ಮಕ್ಕಳು ನಾಪತ್ತೆ : ದೂರು ದಾಖಲು

ತುಮಕೂರು : ಒಂದೇ ಗ್ರಾಮದ ನಾಲ್ವರು ಮಕ್ಕಳು ನಾಪತ್ತೆಯಾಗಿರುವ (Four children missing case) ಘಟನೆ ರಾಜ್ಯದಲ್ಲಿ ಸಂಭವಿಸಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯವೇ ಬೆಚ್ಚಿ ಬೀಳುವಂತೆ ಆಗಿದೆ. ನಾಪತ್ತೆಯಾಗಿರುವ ಮಕ್ಕಳ ಹುಡುಕಾಟಕ್ಕೆ ವಿಶೇಷ ತಂಡವೊಂದನ್ನು ರಚಿಸಿದ್ದು, ಹುಡುಕಾಟ ಕೂಡ ಶುರುವಾಗಿದೆ.

ತುಮಕೂರು ಜಿಲ್ಲೆ ಒಂದೇ ಗ್ರಾಮದ ನಾಲ್ವರು ಮಕ್ಕಳು ನಾಪತ್ತೆಯಾಗಿರುವ ಘಟನೆ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದು, ಗ್ರಾಮದಲ್ಲಿ ಇದೀಗ ಆತಂಕ ಮನೆ ಮಾಡಿದೆ. ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮಿ ಮತ್ತು ಭಾನು ಕಾಣೆಯಾದ ಮಕ್ಕಳು ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಆಟ ಆಡಲೆಂದು ಮನೆಯಿಂದ ಹೋದ ಮಕ್ಕಳು ಮನೆಗೆ ಬಂದಿಲ್ಲ ಎಂದು ಗಾಬರಿಗೊಂಡು ಊರೆಲ್ಲಾ ಹುಡುಕಾಡಿದ ಪೋಷಕರು ಕೊನೆಗೆ ಪಟ್ಟನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ತನಿಖೆ ಮುಂದುವರಿಸಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮಕ್ಕಳ ಪೋಟೋಗಳನ್ನು ಫೋಸ್ಟ್‌ ಮಾಡಿ, ಘಟನೆ ಸಂಬಂಧ ನಾನು ಪೊಲೀಸ್‌ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಾರ್ವಜನಿಕರ ಸಹಕಾರ ಕೂಡ ನಿರೀಕ್ಷಿಸುತ್ತಿದ್ದೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಸಿಲಿಕಾನ್‌ ಸಿಟಿಯಲ್ಲಿ ವರುಣ ಆರ್ಭಟಕ್ಕೆ ಮತ್ತೊಂದು ಬಲಿ

ಇದನ್ನೂ ಓದಿ : ಪ್ರಯಾಣಿಕರಿಗಾಗಿ 1 ಕಿ.ಮೀ. ಹಿಮ್ಮುಖ ಚಲಿಸಿದ ರೈಲು

ಇದನ್ನೂ ಓದಿ : ರಾಜ್ಯದ ರಾಜಧಾನಿಯಲ್ಲಿ ವರುಣನ ಆರ್ಭಟ : ಕಾರು ಮುಳುಗಿ ಯುವತಿ ಸಾವು, ನಾಲ್ವರ ರಕ್ಷಣೆ

ಆಟವಾಡಲು ಮನೆಯಿಂದ ಹೋದವರು ಮನೆಗೆ ವಾಪಸ್ ಬಂದಿಲ್ಲ. ಎಷ್ಟು ಹುಡುಕಿದರೂ ಮಕ್ಕಳು ಸಿಗದ ಕಾರಣ ಪೋಷಕರು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಂದೇ ಗ್ರಾಮದ ಒಂದೇ ವಯೋಮಾನದ 4 ಮಕ್ಕಳು ನಾಪತ್ತೆಯಾಗಿದ್ದು, ಪೋಷಕರು ಆತಂಕಗೊಂಡಿದ್ದಾರೆ. ಘಟನೆ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ವಾಟ್ಸಾಪ್ ಸ್ಕ್ಯಾಮ್ ಹೆಚ್ಚಳ : ಸೈಬರ್ ವಂಚನೆ ತಪ್ಪಿಸಲು ಈ 5 ಅಂಶ ನೆನಪಿನಲ್ಲಿರಲಿ

Four children missing case: Four children missing from the same village: File a complaint

Comments are closed.