Gas leak : ಕುಮಟಾದ ಕಡೇಕೋಡಿ ಬಳಿ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ

ಕುಮಟಾ : ಗೋವಾದಿಂದ ಮಂಗಳೂರಿನತ್ತ ಸಾಗುತ್ತಿದ್ದ ಗ್ಯಾಸ್‌ ಟ್ಯಾಂಕರ್‌ನಲ್ಲಿ (Gas leak) ಅನಿಲ ಸೋರಿಕೆಯಾಗಿ ಕೆಲ ಕಾಲ ಆತಂಕ ಸೃಷ್ಟಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಳಿಯ ಕಡೇಕೋಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನಡೆದಿದೆ.

ಗ್ಯಾಸ್‌ ತುಂಬಿಸಿಕೊಂಡಿದ್ದ ಟ್ಯಾಂಕರ್‌ ಗೋವಾದಿಂದ ಮಂಗಳೂರಿನತ್ತ ಸಾಗುತ್ತಿತ್ತು. ಈ ವೇಳೆಯಲ್ಲಿ ಟ್ಯಾಂಕರ್‌ ಕುಮಟಾ ತಾಲೂಕಿನ ಕಡೇಕೋಡಿ ಬಳಿಗೆ ಬರುತ್ತಿದ್ದಂತೆಯೇ ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಯಾಗಲು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಗ್ಯಾಸ್‌ ಸೋರಿಕೆ ತಡೆಯಲು ಶ್ರಮಿಸಿದ್ದಾರೆ.

ಇದನ್ನೂ ಓದಿ : Coastal Crime News : ಮಂಗಳೂರು : ಕ್ಷುಲಕ ವಿಚಾರಕ್ಕೆ ಕಾರ್ಮಿಕನಿಗೆ ಬೆಂಕಿ ಹಚ್ಚಿ ಕೊಲೆ, ಮಾಲೀಕ ಅರೆಸ್ಟ್‌

ಇದನ್ನೂ ಓದಿ : China Crime News‌ : ಶಿಶುವಿಹಾರದಲ್ಲಿ ಚೂರಿ ಇರಿತದಿಂದ 6 ಮಂದಿ ಸಾವು, ಒಬ್ಬರಿಗೆ ಗಾಯ

ಗ್ಯಾಸ್‌ ಟ್ಯಾಂಕರ್‌ನಿಂದ ಅಡುಗೆ ಅನಿಲ ಸೋರಿಕೆಯಾಗಿದೆ ಎಂದು ಆತಂಕಕ್ಕೆ ಒಳಗಾಗಿದ್ದರು. ಆದರೆ ಟ್ಯಾಂಕ್‌ನಲ್ಲಿ ಇದಿದ್ದು, ನೈಟ್ರೋಜನ್ ಲಿಕ್ವಿಡ್ ಎಂದು ತಿಳಿದು ನಿಟ್ಟುಸಿರುವ ಬಿಟ್ಟಿದ್ದಾರೆ. ಸ್ಥಳಕ್ಕೆ ಕುಮಟಾ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Gas leak from gas tanker near Kadekodi in Kumta

Comments are closed.