ಸೋಮವಾರ, ಜೂನ್ 16, 2025
HomeCrimeGaya railway accident: ಚಲಿಸುತ್ತಿದ್ದ ರೈಲಿನಿಂದ ಹೊರಬಿದ್ದ ಮಹಿಳೆ : ಮುಂದೆ ಏನಾಯ್ತು?

Gaya railway accident: ಚಲಿಸುತ್ತಿದ್ದ ರೈಲಿನಿಂದ ಹೊರಬಿದ್ದ ಮಹಿಳೆ : ಮುಂದೆ ಏನಾಯ್ತು?

- Advertisement -

ಗಯಾ: (Gaya railway accident) ರೈಲು ಹಳಿ ದಾಟುತ್ತಿದ್ದಾಗ ನಿಂತಿದ್ದ ರೈಲು ಹಠಾತ್ತನೆ ಚಲಿಸಲು ಪ್ರಾರಂಭಿಸಿದ ಪರಿಣಾಮ ಮಹಿಳೆಯೊಬ್ಬರು ರೈಲಿನಿಂದ ಕೆಳಗಡೆ ಬಿದ್ದಿದ್ದು, ಮಹಿಳೆ ಗಾಯಗೊಂಡ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ. ಗಯಾದ ಟಂಕುಪ್ಪಾ ರೈಲು ನಿಲ್ದಾಣದಲ್ಲಿ ಈ ಘಟನೆ ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಗಯಾದ ಟಂಕುಪ್ಪಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಪ್ಲಾಟ್‌ಫಾರ್ಮ್‌ನ ಇನ್ನೊಂದು ಬದಿಯಲ್ಲಿ ನಿಂತಿದ್ದ ಮಹಿಳೆ ಮತ್ತೊಂದು ರೈಲನ್ನು ಹತ್ತಬೇಕಾಗಿತ್ತು. ಇದಕ್ಕೆ ಮಹಿಳೆ ಹಳಿ ದಾಟಲೆಂದು ನಿಂತಿದ್ದ ರೈಲನ್ನು ಹತ್ತಿ ರೈಲಿನ ಇನ್ನೊಂದು ಬಾಗಿಲಿನಿಂದ ಇಳಿಯಲು ಹೊರಟಿದ್ದರು. ಈ ಸಂದರ್ಭ ರೈಲು ಹಠಾತ್ತನೇ ಚಲಿಸಲು ಪ್ರಾರಂಭಿಸಿದ್ದು, ಮಹಿಳೆ ತನ್ನ ಹಿಡಿತ ತಪ್ಪಿ ರೈಲಿನ ಕೆಳಗೆ ಬಿದ್ದಿದ್ದಾಳೆ.

ಮಹಿಳೆ ರೈಲಿನ ಕೆಳಗೆ ಬಿದ್ದಿರುವುದನ್ನು ಕಂಡ ಕೆಲ ಪೊಲೀಸರು ಕೂಡಲೇ ಧಾವಿಸಿ ಆಕೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಮಹಿಳೆಯ ತಲೆಗೆ ಪೆಟ್ಟಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ರೈಲಿನಡಿಯಲ್ಲಿ ಬಿದ್ದ ಮಹಿಳೆಗೆ ಗಾಯವಾಗದಂತೆ ಶಾಂತವಾಗಿ ಟ್ರ್ಯಾಕ್ ಮೇಲೆ ರೈಲು ಹಾದುಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ : Davanagere bike accident: ಅಪರಿಚಿತ ವಾಹನಕ್ಕೆ ಬೈಕ್‌ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು

ನರೇಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ನವದೆಹಲಿ: ರಾಜಧಾನಿಯ ನರೇಲಾ ಕೈಗಾರಿಕಾ ಕಾರ್ಖಾನೆ ಪ್ರದೇಶದಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಮುಂಜಾನೆ 4 ಗಂಟೆಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, 12 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಬೆಳಗ್ಗೆ 7.30ರ ಸುಮಾರಿಗೆ ಅದನ್ನು ನಂದಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಗ್ನಿ ಅವಘಡಕ್ಕೆ ನಿಖರ ಕಾರಣಗಳು ಏನೆಂಬುದು ತಿಳಿದುಬಂದಿಲ್ಲ.

ಸದ್ಯ ಎರಡು ಪ್ರತ್ಯೇಕ ಪ್ರಕರಣಗಳು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಬೆಂಕಿ ಅವಘಡ ಸಂಭವಿಸಲು ಕಾರಣಗಳೇನು ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : PU Student died: ಆಸೆಯಿಂದ ಪರೋಟ ತಿಂದ ಪಿಯು ವಿದ್ಯಾರ್ಥಿನಿಯ ಬದುಕು ಅಂತ್ಯ

ಇದನ್ನೂ ಓದಿ : Udupi drug case: ಉಡುಪಿ : ಗಾಂಜಾ ಸೇವನೆ ಪ್ರಕರಣ, ಇಬ್ಬರು ಮಹಿಳೆಯರು ಸೇರಿ ಮೂವರು ಅರೆಸ್ಟ್‌

Gaya railway accident: Woman fell out of moving train: What happened next?

RELATED ARTICLES

Most Popular