Dakshina Kannada District Football League : ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಲೀಗ್ : ಜಯಭೇರಿ ಸಾಧಿಸಿದ ಯೇನಪೋಯ, ಯುನೈಟೆಡ್ ತಂಡ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ (Dakshina Kannada District Football League) ನೇತೃತ್ವದಲ್ಲಿ ಪ್ರತಿ ವರ್ಷ ಫುಟ್ಬಾಲ್ ಲೀಗ್ ಟೂರ್ನಮೆಂಟ್‌ ನಡೆಸಲಾಗುತ್ತದೆ. ಈ ಭಾರಿ ಕೂಡ ಒಂದು ತಿಂಗಳ ಕಾಲ ನಗರದ ನೆಹರೂ ಮೈದಾನದಲ್ಲಿ ನಡೆದ ಫುಟ್ಬಾಲ್ ಲೀಗ್ ಟೂರ್ನಮೆಂಟ್‌ನಲ್ಲಿ ಯೆನಪೋಯ ಕಾಲೇಜು ತಂಡ ಮತ್ತು ಮಂಗಳೂರು ಯುನೈಟೆಡ್ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಇದೀಗ ಗ್ರಾಮೀಣ ಪ್ರದೇಶದಲ್ಲಿ ಅನುಭವಿ ಆಟಗಾರರನ್ನೊಳಗೊಂಡ ಹಿರಿಯರ ತಂಡಗಳನ್ನು ‘ಎ’ ಮತ್ತು ಹೊಸತಾಗಿ ರಿಜಿಸ್ಟರ್ ಆಗಿರುವ ಕಿರಿಯರ ತಂಡಗಳನ್ನು ‘ಬಿ’ ಎಂದು ಪ್ರತ್ಯೇಕವಾಗಿ ಗುಂಪುಗಳನ್ನಾಗಿ ಮಾಡಲಾಗಿತ್ತು. ಈ ಫುಟ್ಬಾಲ್‌ ಟೂರ್ನಮೆಂಟ್‌ನಲ್ಲಿ ಎರಡೂ ಗುಂಪುಗಳಲ್ಲಿ ತಲಾ 16 ತಂಡಗಳು ಭಾಗವಹಿಸಿದ್ದವು. ಪಂದ್ಯಾಟವು ಸಂಜೆ ನಾಲ್ಕರಿಂದ 7 ಗಂಟೆಗಳ ವರೆಗೆ ಒಂದು ತಿಂಗಳ ಕಾಲ ನಡೆದಿತ್ತು. ಎ ಡಿವಿಶನ್ ವಿಭಾಗದಲ್ಲಿ ಯೆನಪೋಯ ಕಾಲೇಜಿನ ತಂಡ ಪ್ರಥಮ ಹಾಗೂ ಬೆಂಗ್ರೆ ಬ್ರದರ್ಸ್ ದ್ವಿತೀಯ ಸ್ಥಾನ ಪಡೆದಿದೆ. ಬಿ ವಿಭಾಗದಲ್ಲಿ ಮಂಗಳೂರು ಯುನೈಟೆಡ್ ಪ್ರಥಮ ಮತ್ತು ಯುನೈಟೆಡ್ ಪಜೀರ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ : Udupi drug case: ಉಡುಪಿ : ಗಾಂಜಾ ಸೇವನೆ ಪ್ರಕರಣ, ಇಬ್ಬರು ಮಹಿಳೆಯರು ಸೇರಿ ಮೂವರು ಅರೆಸ್ಟ್‌

ಇದನ್ನೂ ಓದಿ : Amit Shah to Puttur: ನಾಳೆ ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಇದನ್ನೂ ಓದಿ : Amit Shah roadshow cancelled: ಕೊರಗಜ್ಜನ ದೈವ ಕೋಲಕ್ಕಾಗಿ ಮಂಗಳೂರಿನಲ್ಲಿ ಅಮಿತ್‌ ಶಾ ರೋಡ್‌ ಶೋ ರದ್ದು

ಪ್ರತೀ ವರ್ಷ ಜಿಲ್ಲಾ ಮಟ್ಟದಲ್ಲಿ ಈ ಟೂರ್ನಮೆಂಟ್ ನಡೆಯುತ್ತಿದ್ದು, ಇದರಲ್ಲಿ ವಿಜೇತ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತದೆ. ಅಲ್ಲದೇ ವಿಜೇತ ತಂಡದಿಂದ ತಲಾ ಇಬ್ಬರು ಆಟಗಾರರನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಯುನೈಟೆಡ್ ಫುಟ್ಬಾಲ್ ತಂಡದ ಮಾಲಿಕ ತೌಸೀಫ್ ತಿಳಿಸಿದ್ದಾರೆ. ಈ ಫುಟ್ಬಾಲ್‌ ಟೂರ್ನಮೆಂಟ್‌ನಿಂದ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಕ್ಕಂತೆ ಆಗಿದೆ. ಈ ಟೂರ್ನಮೆಂಟ್‌ನಲ್ಲಿ ಡಿಎಂ ಅಸ್ಲಾಂ ಡಿಕೆಶಿ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷೆ, ಎಸಿಪಿ ಗೀತಾ ಕುಲಕರ್ಣಿ (ಸಂಚಾರ) ಕಾರ್ಪೊರೇಟರ್, ಎಸಿ ವಿನಯರಾಜ್ ಮತ್ತಿತರರು ಉಪಸ್ಥಿತರಿದ್ದರು.

Dakshina Kannada District Football League: Yenapoya, United team won

Comments are closed.