ಉತ್ತರ ಪ್ರದೇಶ : Woman Battling For Life: ದೆಹಲಿ ಮೂಲದ ಮಹಿಳೆಯನ್ನು ಅಪಹರಿಸಿದ ಐವರು ಕಾಮುಕರು ಸತತ 2 ದಿನಗಳ ಕಾಲ ಸಾಮೂಹಿಕ ಅತ್ಯಾಚಾರವನ್ನೆಸಗಿದ ಅಮಾನವೀಯ ಘಟನೆಯು ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯು ದೆಹಲಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಅತ್ಯಾಚಾರವೆಸಗಿದ ಬಳಿಕ ಮಹಿಳೆಯನ್ನು ಕಾಮುಕರು ಗೋಣಿಚೀಲದಲ್ಲಿ ಕೈ ಕಾಲನ್ನು ಕಟ್ಟಿ ರಸ್ತೆಯಲ್ಲಿ ಎಸೆದು ಹೋಗಿದ್ದರು ಎನ್ನಲಾಗಿದೆ.
ಸಹೋದರನ ಹುಟ್ಟು ಹಬ್ಬದಲ್ಲಿ ಭಾಗಿಯಾಗಿದ್ದ ಸಂತ್ರಸ್ತೆಯು ಬಳಿಕ ಗಾಜಿಯಾಬಾದ್ನಿಂದ ಮರಳುತ್ತಿದ್ದಳು ಎಂದು ವರದಿಯಾಗಿದೆ. ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಅದೇ ಸ್ಥಳಕ್ಕೆ ಬಂದ ಐವರು ಕಾಮುಕರು ಆಕೆಯನ್ನು ಸ್ಕಾರ್ಪಿಯೋ ಕಾರಿನೊಳಗೆ ಎಳೆದುಕೊಂಡಿದ್ದಾರೆ ಹಾಗೂ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಈ ಘಟನೆಯ ಬಗ್ಗೆ ವಿವರಣೆ ನೀಡಿದ ಗಾಜಿಯಾಬಾದ್ ನಗರದ ಎಸ್ಪಿ ನಿಪುನ್ ಅಗರ್ವಾಲ್, ಅಕ್ಟೋಬರ್ 18ರಂದು ನಂದಗ್ರಾಮ್ ಪೊಲೀಸರಿಗೆ ಆಶ್ರಮ ರಸ್ತೆ ಬಳಿಯಲ್ಲಿ ಮಹಿಳೆಯೊಬ್ಬಳು ಮಲಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಕೆ ದೆಹಲಿಯ ನಿವಾಸಿಯಾಗಿದ್ದು, ನಂದಗ್ರಾಮದಲ್ಲಿರುವ ತನ್ನ ಸಹೋದರನ ನಿವಾಸಕ್ಕೆ ಆಗಮಿಸಿದ್ದಳು. ಆಕೆಯ ಸಹೋದರ ಆಕೆಯನ್ನು ಡ್ರಾಪ್ ಮಾಡಿದ ಬಳಿಕ ಮಹಿಳೆಯಿದ್ದ ಸ್ಥಳಕ್ಕೆ ಬಂದ ಕಾಮುಕರು ಆಕೆಯನ್ನು ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಇಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು ಈ ಸಂಬಂಧ ಎಫ್ಐಆರ್ ಕೂಡ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತರ ಟ್ವಿಟರ್ನಲ್ಲಿ ದೆಹಲಿ ಮಹಿಳಾ ಆಯೋದ ಅಧ್ಯಕ್ಷೆ ಸ್ವಾತಿ ಮಲಿವಾಲ್ ವಿಡಿಯೋ ಶೇರ್ ಮಾಡಿದ್ದು, ಗಾಜಿಯಾಬಾದ್ ಪೊಲೀಸರಿಗೆ ಈ ಸಂಬಂಧ ನೋಟಿಸ್ ನೀಡಿದ್ದಾಗಿ ಎಂದು ಮಾಹಿತಿ ನೀಡಿದ್ದಾರೆ. ಮಹಿಳೆಯ ಖಾಸಗಿ ಭಾಗಗಳಿಗೆ ಕಾಮುಕರು ರಾಡ್ ತೂರಿಸಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಯನ್ನು ಪೊಲೀಸರು ನೋಡಿದ ಸಂದರ್ಭದಲ್ಲಿ ಆಕೆಯ ಖಾಸಗಿ ಅಂಗದಲ್ಲಿ ರಾಡ್ ತೂರಿಸಲಾಗಿತ್ತು ಎಂದು ಹೇಳಿದ್ದಾರೆ .
ಇದನ್ನು ಓದಿ : Third FIR registered :ಮುರುಘಾ ಶರಣರಿಗೆ ಮತ್ತೊಂದು ಆಘಾತ : ಗ್ರಾಮೀಣ ಠಾಣೆಯಲ್ಲಿ ಶ್ರೀಗಳ ವಿರುದ್ಧ ದಾಖಲಾಯ್ತು ಮೂರನೇ ಎಫ್ಐಆರ್
ಇದನ್ನೂ ಓದಿ : ಹೋಟಲ್ ಕೆಲಸ, ಬಿಸ್ಲೆರಿ ಮಾರಾಟ, ಕೈ ಕೊಟ್ಟ ಸಿನಿಮಾ : ಇದು ಕಾಂತಾರ ರಿಷಬ್ ಶೆಟ್ಟಿ ಜೀವನ ಸಾಧನೆ
Ghaziabad Shocker: 38-Year-Old Woman Battling For Life After Being Gangraped, Tortured by 5 Men For 2 Days