ಹೋಟೆಲ್ ಕೆಲಸ, ಬಿಸ್ಲೆರಿ ಮಾರಾಟ, ಕೈ ಕೊಟ್ಟ ಸಿನಿಮಾ : ಇದು ಕಾಂತಾರ ರಿಷಬ್ ಶೆಟ್ಟಿ ಜೀವನ ಸಾಧನೆ

ಸದ್ಯ ಭಾರತೀಯ ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿರೋದು ಕಾಂತಾರ (Kantara) , ಇನ್ನೊಂದು ರಿಷಬ್ ಶೆಟ್ಟಿ. ಕರಾವಳಿಯ ಕೆರಾಡಿ ಅನ್ನೋ ಪುಟ್ಟ ಗ್ರಾಮದಲ್ಲಿ ಜನಿಸಿದ್ದ ರಿಷಬ್ ಶೆಟ್ಟಿ ಇಂದು ಭಾರತೀಯ ಸಿನಿಮಾ ರಂಗವೇ ಕನ್ನಡದತ್ತ ಮುಖ ಮಾಡುವಂತೆ ಮಾಡಿದ್ದಾರೆ. ಕಾಂತಾರ ಒಂದು ದಂತ ಕಥೆ ಅನ್ನೋ ಶೀರ್ಷಿಕೆಯಲ್ಲಿ ತೆರೆ ಕಂಡಿರುವ ಸಿನಿಮಾ ದಿನದಿಂದ ದಿನಕ್ಕೆ ಸೂಪರ್ ಸಕ್ಸಸ್ ಕಾಣುತ್ತಿದೆ. ಒಂದು ಕಾಲದಲ್ಲಿ ಬದುಕಿನ ಬಂಡಿ ಸಾಗಿಸಲು ಬಿಸ್ಲೆರಿ ಮಾರಾಟ ಮಾಡುತ್ತಿದ್ದ ಹುಡುಗ ಇಂದು ಬೆಸ್ಟ್ ನಟ, ನಿರ್ದೇಶಕನಾಗಿ ಹೊರ ಹೊಮ್ಮಿದ್ದಾರೆ. ಇಂತಹ ಸಾಧಕನ ಸಾಧನೆಯ (Rishab Shetty Biography) ಹಿಂದಿದೆ ರೋಚಕ ಸ್ಟೋರಿ.

Rishab Shetty Biography : ಪ್ರಶಾಂತ್ ಶೆಟ್ಟಿ- ರಿಷಬ್ ಶೆಟ್ಟಿ ಆಗಿದ್ದು ಹೇಗೆ ?

ಕಾಂತಾರ ಸಿನಿಮಾದ ಮೂಲಕ ದೇಶದಾದ್ಯಂತ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ಹುಟ್ಟಿ ಬೆಳೆದಿರೋದು ಉಡುಪಿ ಜಿಲ್ಲೆಯ ಕೆರಾಡಿ ಅನ್ನೋ ಗ್ರಾಮದಲ್ಲಿ 7 ಜುಲೈ 1983 ಜನಿಸಿದ ರಿಷಬ್ ಶೆಟ್ಟಿ ಅವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ. ಆದರೆ ಪ್ರಶಾಂತ್ ಶೆಟ್ಟಿ ಅಂದ್ರೆ ಸದ್ಯಕ್ಕೆ ಯಾರಿಗೂ ಗೊತ್ತಾಗೋದಿಲ್ಲ. ರಿಷಬ್ ಶೆಟ್ಟಿ ಹೆಸರಿನ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಿಷಬ್ ಕೆರಾಡಿ ಗ್ರಾಮದ ಭಾಸ್ಕರ ಶೆಟ್ಟಿ ಹಾಗೂ ರತ್ನಾವತಿ ಶೆಟ್ಟಿ ದಂಪತಿಗಳ ಮಗ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ರಿಷಬ್ ಶೆಟ್ಟಿ ಹುಟ್ಟೂರಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಪೂರೈಸಿ ಕಾಲೇಜು ಸೇರೋದಕ್ಕೆ ಅಕ್ಕನ ಜೊತೆಗೆ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ MBA ಮಾಡುವ ಮೊದಲು ಜಯನಗರದ BHS ಕಾಲೇಜಿನಲ್ಲಿ B.Com ಮಾಡಿದರು. ಕೆ.ಆರ್.ಪುರಂನಲ್ಲಿ ಕೆಲಸ ಮಾಡುತ್ತಿದ್ದ ಅಕ್ಕನನ್ನು ಕೆಲಸಕ್ಕೆ ಬಿಟ್ಟು ನಂತರ ಹೆಸರುಘಟ್ಟದಲ್ಲಿರುವ ಸಿನಿಮಾ ಇನ್ಸ್ಟಿಟ್ಯೂಟ್ ಗೆ ತೆರಳುತ್ತಿದ್ದರಂತೆ. ಕಾಲೇಜು ಮುಗಿದ ನಂತರ ಅಕ್ಕನನ್ನು ಮನೆಗೆ ಕರೆ ತರುವುದು ನಿತ್ಯದ ಕಾಯಕವಾಗಿತ್ತು. ಆರಂಭದಲ್ಲಿ ಪ್ರಶಾಂತ್ ಶೆಟ್ಟಿ ಆಗಿದ್ದ ರಿಷಬ್ ಶೆಟ್ಟಿ ಅವರಿಗೆ ಕೆಲವೊಂದು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತ್ತಾದ್ರೂ ಸಿನಿಮಾ ಸೆಟ್ಟೇರುವ ಮೊದಲೇ ಪ್ರಾಜೆಕ್ಟ್ ನಿಂತು ಹೋಗುತ್ತಿತ್ತು. ತಮ್ಮ ಕಷ್ಟದ ಸಮಯದಲ್ಲಿ ತಂದೆ ಭಾಸ್ಕರ ಶೆಟ್ಟಿ ಅವರು ಮಗನಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ರಂತೆ. ಜ್ಯೋತಿಷ್ಯ ಶಾಸ್ತ್ರದ ಮೇಲೆ ಅಪಾರವಾದ ನಂಬಿಕೆ ಹೊಂದಿದ್ದ ಭಾಸ್ಕರ ಶೆಟ್ಟಿ ಸ್ವತಃ ಜ್ಯೋತಿಷಿಯಾಗಿದ್ದರು. ಸಿನಿಮಾ ರಂಗದ ಸ್ಟಾರ್ ನಟರಾಗಿರುವ ಡಾ.ರಾಜ್ ಕುಮಾರ್ ಹಾಗೂ ರಜನಿಕಾಂತ್ ಅವರಂತೆ ತನ್ನ ಮಗ ಕೂಡ ಹೆಸರು ಗಳಿಸಲಿ ಅನ್ನೋ ಕಾರಣಕ್ಕೆ ರಿಷಬ್ ಎಂದು ಮಗನಿಗೆ ನಾಮಕರಣ ಮಾಡಿದ್ದರು.

ಹೋಟೆಲ್‌ ನಲ್ಲಿ ನಷ್ಟ, ಬಿಸ್ಲೆರಿ ಮಾರಾಟ : ಹಟಬಿಡದ ಸಾಧಕ

ರಿಷಬ್‌ ಶೆಟ್ಟಿ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪೂರೈಸಿದ್ದರು ಕೂಡ ಬಾಲ್ಯದಿಂದಲೇ ಸಿನಿಮಾ ರಂಗದಲ್ಲಿ ಮಿಂಚು ಹುಚ್ಚಿತ್ತು. ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದರು. ಸಿನಿಮಾದಲ್ಲಿ ಕ್ಲ್ಯಾಪ್‌ ಬಾಯ್‌, ಸಹ ನಿರ್ದೇಶಕನ ಕೆಲಸ ಸಿಗುತ್ತಿತ್ತಾದ್ರೂ ಅದರಲ್ಲಿ ಬರುತ್ತಿದ್ದ ಸಂಪಾದನೆ ಜೀವನ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಬದುಕಿನ ಬಂಡಿಯನ್ನು ಸಾಗಿಸಲು ರಿಷಬ್‌ ಶೆಟ್ಟಿ ಬಿಸ್ಲೆರಿ ಮಾರಾಟ ಮಾಡುವ ಕಾಯಕವನ್ನು ಆರಂಭಿಸಿದ್ರು. ಆ ಕೆಲಸದ ಜೊತೆ ಜೊತೆಗೆ ಸಿನಿಮಾ ಆಫರ್ ಗಳಿಗಾಗಿ ಅಲೆದಾಡುತ್ತಿದ್ದರು. ತನ್ನ ದುಡಿಮೆಯಲ್ಲಿ ಉಳಿಸಿದ ಹಣ, ಮನೆಯವರ ಸಹಕಾರದಿಂದ ಹೋಟೆಲ್‌ ವ್ಯವಹಾರವನ್ನು ಆರಂಭಿಸಿದ ರಿಷಬ್‌ ಶೆಟ್ಟಿ ಉದ್ಯಮದಲ್ಲಿ ನಷ್ಟವನ್ನು ಅನುಭವಿಸುತ್ತಾರೆ. ನಂತರದಲ್ಲಿ ಬೇರೊಬ್ಬರ ಹೋಟೆಲ್‌ ನಲ್ಲಿಯೂ ಒಂದಿಷ್ಟು ಸಮಯ ಕೆಲಸ ಮಾಡಿದ್ದರು. ಆದರೂ ಸಿನಿಮಾದ ಮೇಲಿನ ಆಸಕ್ತಿ ಕಡಿಮೆ ಆಗಲೇ ಇಲ್ಲ. ಸಿನಿಮಾ ರಂಗದಲ್ಲಿ ಏನಾದರೂ ಒಂದು ಸಾಧನೆಯನ್ನು ಮಾಡಲೇ ಬೇಕು ಅನ್ನೋ ಹಠಕ್ಕೆ ಬಿದ್ದ ರಿಷಬ್‌ ತಮ್ಮ ಪ್ರಯತ್ನವನ್ನು ನಿಲ್ಲಿಸಲೇ ಇಲ್ಲ. ತುಗ್ಲಕ್‌ ಸಿನಿಮಾದ ಹೊತ್ತಲ್ಲೇ ರಕ್ಷಿತ್‌ ಶೆಟ್ಟಿ ಪರಿಚಯವಾಗಿತ್ತು. ಆ ಪರಿಚಯವೇ ಮುಂದೆ ರಿಷಬ್‌ ಸಿನಿಮಾ ಬದುಕಲ್ಲಿ ಹೊಸ ತಿರುವನ್ನು ತಂದುಕೊಟ್ಟಿತ್ತು.

Rishab Shetty Biography : ರಿಷಬ್ ಶೆಟ್ಟಿ ಸಿನಿ ಪಯಣ

2010 ನಮ್ ಏರಿಯಾಲಿ ಒಂದಿನ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಿಷಬ್ ಶೆಟ್ಟಿ, 2012ರಲ್ಲಿ ತುಘಲಕ್ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದರು. 2013 ಅಟ್ಟಹಾಸ ಸಿನಿಮಾದಲ್ಲಿ ಸಹ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿದ್ದರು. 2013ರಲ್ಲಿ ತೆರೆ ಕಂಡ ಲೂಸಿಯಾ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ ಅವರ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ನಂತರದಲ್ಲಿ ಉಳಿದವರು ಕಂಡಂತೆ ಸಿನಿಮಾದಲ್ಲಿ ರಘ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 2016ರಲ್ಲಿ ತೆರೆಕಂಡ ರಿಕ್ಕಿ ಸಿನಿಮಾದ ಮೂಲಕ ರಿಷಬ್ ಶೆಟ್ಟಿ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ರಾಷ್ಟ್ರೀಯ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಅಷ್ಟೇ ಅಲ್ಲಾ ಬಾಕ್ಸಆಫೀಸ್ ನಲ್ಲೂ ಉತ್ತಮ ಕಲೆಕ್ಷನ್ಸ್ ಮಾಡಿದೆ.

ಅಂಬಿ ನಿನಗೆ ವಯಸ್ಸಾಯ್ತು, ಬೆಲ್ ಬಾಟಂ, ಕಥಾ ಸಂಗಮ, ಅವನೆ ಶ್ರೀಮನ್ನನಾರಾಯಣ, ಹೀರೋ, [email protected] ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇನ್ನು ರಾಜ್‌ ಬಿ. ಶೆಟ್ಟಿ ಜೊತೆಯಾಗಿ ನಟಿಸಿರುವ ಗರುಡ ಗಮನ ವೃಷಭ ವಾಹನ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಹರಿಕಥ ಅಲ್ಲಾ ಗಿರಿಕಥೆ ಸಿನಿಮಾ ಅಷ್ಟೊಂದು ಸಕ್ಸಸ್ ಕಾಣದೇ ಇದ್ರೂ ಕೂಡ ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿಯೇ ಎಲ್ಲಾ ದಾಖಲೆಗಳನ್ನು ಅಳಿಸಿ ಮುನ್ನುಗ್ಗುತ್ತಿದೆ. ಕನ್ನಡ ಮಾತ್ರವಲ್ಲದೇ ಮಿಶನ್ ಇಂಪೋಸಿಬಲ್ ಅನ್ನೋ ತೆಲುಗು ಸಿನಿಮಾದಲ್ಲಿ ರಿಷಬ್ ನಟಿಸಿದ್ದಾರೆ.

ನಿರ್ದೇಶಕನಾಗಿ ಸಕ್ಸಸ್ ಕಂಡ ರಿಷಬ್ ಶೆಟ್ಟಿ
2016 : ರಿಕ್ಕಿ
2018 : ಕಿರಿಕ್ ಪಾರ್ಟಿ
2019 : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು.
2022 : ಕಾಂತಾರ

ನಿರ್ಮಾಪಕರಾಗಿ ರಿಷಬ್ ಶೆಟ್ಟಿ

2021 : ಹೀರೋ
2021 : ಪೆಡ್ರೋ
2022 : ಶಿವಮ್ಮ

ರಿಷಬ್ ಶೆಟ್ಟಿ ಮುಂದಿನ ಸಿನಿಮಾಗಳು :
ಬೆಲ್ ಬಾಟಂ-2, ಮಹನೀಯರೆ ಮಹಿಳೆಯರೇ, ಅಂತಗೋಣಿ ಶೆಟ್ಟಿ, ಬ್ಯಾಚುಲರ್ ಪಾರ್ಟಿ ಸಿನಿಮಾಗಳು ಇನ್ನಷ್ಟೇ ತೆರೆಗೆ ಬರಬೇಕಾಗಿದೆ.

ರಿಷಬ್ ಶೆಟ್ಟಿ ಅವರಿಗೆ ದೊರೆತ ಪ್ರಶಸ್ತಿಗಳು :

ಸ್ಯಾಂಡಲ್ ವುಡ್ ನಲ್ಲಿ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಸಾಧನೆಗೆ ಈಗಾಗಲೇ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾಕ್ಕೆ 2016 ರಲ್ಲಿ ಕರ್ನಾಟಕ ರಾಜ್ಯ ಸ್ಟೇಟ್ ಫಿಲ್ಮ್ ಅವಾರ್ಡ್ (ಬೆಸ್ಟ್ ಫ್ಯಾಮಿಲಿ ಎಂಟಟೈನರ್ ), 64ನೇ ಫಿಲ್ಮ್ ಫೇರ್ ಸೌತ್ ಇಂಡಿಯಾ ( ಬೆಸ್ಟ್ ಡೈರೆಕ್ಟರ್ ಅವಾರ್ಡ್), 2nd IIFA Utsavam ( ಬೆಸ್ಟ್ ಡೈರೆಕ್ಟರ್ ), 6th SIIMA Awards ( ಬೆಸ್ಟ್ ಡೈರೆಕ್ಟರ್) ಪ್ರಶಸ್ತಿಯನ್ನು ಬಾಚಿಕೊಂಡಿದ್ರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ 66ನೇ ಬೆಸ್ಟ್ ಮಕ್ಕಳ ಸಿನಿಮಾ ರಾಷ್ಟ್ರೀಯ ಪ್ರಶಸ್ತಿ, 2018 Karnataka State Film Awards (ಬೆಸ್ಟ್ ಫ್ಯಾಮಿಲಿ ಎಂಟಟೈನರ್ ), 66ನೇ ಫಿಲ್ಮಫೇರ್ ಪ್ರಶಸ್ತಿ ದಕ್ಷಿಣ ಭಾರತ ( ಬೆಸ್ಟ್ ಸಿನಿಮಾ ಹಾಗೂ ಬೆಸ್ಟ್ ನಿರ್ದಶನ ) ಅಲ್ಲದೇ 8th SIIMA Awards ( ಬೆಸ್ಟ್ ಡೈರೆಕ್ಟರ್ ಹಾಗೂ ಬೆಸ್ಟ್ ಮೂವಿ ವಿಭಾಗ ) ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಸೂಪರ್ ಸಕ್ಸಸ್ ಕಂಡ ಕಾಂತಾರ :
ರಿಷಬ್ ಶೆಟ್ಟಿ ಅವರ ವೃತ್ತಿ ಬದುಕಿನಲ್ಲೇ ನಿರ್ದೇಶಕ, ನಟನಾಗಿ ಪ್ರಖ್ಯಾತಿಯನ್ನು ತಂದು ಕೊಟ್ಟ ಸಿನಿಮಾ ಕಾಂತಾರ. ಕರಾವಳಿ ಭಾಗದ ಸಂಸ್ಕೃತಿ, ದೈವಾರಾಧನೆಯ ಕಥಾ ಹಂದರವನ್ನು ಹೊಂದಿರುವ ಕಾಂತಾರ ಸಿನಿಮಾ ಕನ್ನಡ ಭಾಷೆಯಲ್ಲಿ ತೆರೆ ಕಂಡಿದ್ದರೂ ಕೂಡ ಇಂದು ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಕನ್ನಡದ ಬೆನ್ನಲ್ಲೇ ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆ ಕಂಡಿದ್ದು, ಕೆಜಿಎಫ್, ಆರ್ ಆರ್ ಆರ್ ಸೇರಿದಂತೆ ಹಲವು ದಾಖಲೆಗಳನ್ನು ಅಳಿಸಿ ಮುನ್ನುಗ್ಗುತ್ತಿದೆ. ಬುಕ್ ಮೈಶೋದಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾ ಅನ್ನೋ ಖ್ಯಾತಿಗೂ ಕಾಂತಾರ ಪಾತ್ರವಾಗಿದೆ.

ರಿಷಬ್ ಶೆಟ್ಟಿ ಪತ್ನಿ ಡಿಸೈನರ್ ಮತ್ತು ಮಗ:

ಅವರು 9 ಫೆಬ್ರವರಿ 2017 ರಂದು ಪ್ರಗತಿ ಶೆಟ್ಟಿ ಅವರನ್ನು ವಿವಾಹವಾದರು. ರಿಷಬ್ ಶೆಟ್ಟಿ ಜೀವನಚರಿತ್ರೆ ದಂಪತಿಗೆ ರಣವಿತ್ ಶೆಟ್ಟಿ ಎಂಬ ಮಗನಿದ್ದಾನೆ, 07 ಏಪ್ರಿಲ್ 2019 ರಂದು ಜನಿಸಿದರು. ಈಗಿನಂತೆ, ರಿಷಬ್ ಶೆಟ್ಟಿ ಅವರ ಮಗ ರಣ್ವಿತ್ ಶೆಟ್ಟಿ ಅವರ ವಯಸ್ಸು 3 ವರ್ಷಗಳು. ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.‌ ರಿಷಬ್ ಶೆಟ್ಟಿ ಜೀವನಚರಿತ್ರೆಯಲ್ಲಿ ದಂಪತಿಗಳು ತಮ್ಮ ಎರಡನೇ ಮಗುವನ್ನು ಮಾರ್ಚ್ 4 ರ ಶುಕ್ರವಾರದ ಮುಂಜಾನೆ ಸ್ವಾಗತಿಸಿದರು. ಅವರ ಪತ್ನಿ ಪ್ರಗತಿ ರಿಷಬ್ ಶೆಟ್ಟಿಗೆ ಅವರ ಮೊದಲ ಉಡುಗೊರೆ ಕಿವಿಯೋಲೆಗಳು ಆದರೆ ಪ್ರಗತಿ ರಿಷಬ್ ಶೆಟ್ಟಿ ಅವರಿಗೆ ಓಲ್ಡ್ ಮಾಂಕ್ ರಮ್ ಅನ್ನು ಉಡುಗೊರೆಯಾಗಿ ನೀಡಿದರು. ಪ್ರಗತಿ ಶೆಟ್ಟಿ ಈ ಹಿಂದೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲಾ ಕಾಂತಾರ (Kantara) ಸಿನಿಮಾದಲ್ಲಿಯೂ ಪ್ರಗತಿ ಶೆಟ್ಟಿ ಅವರೇ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಕರಾವಳಿ ಭಾಗದ ಕಲೆ, ಸಂಸ್ಕೃತಿ, ಆಚಾರ ವಿಚಾರ, ದೈವಾರಾಧನೆಯ ಬಗ್ಗೆ ಅಪಾರವಾದ ನಂಬಿಕೆ ಇರಿಸಿಕೊಂಡಿರುವ ವೃಷಬ್‌ ಶೆಟ್ಟಿ ಅವರ ಪತ್ನಿ, ಕಾಂತಾರ ಸಿನಿಮಾಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ರಿಷಬ್‌ ಶೆಟ್ಟಿ ಅವರ ಸಾಧನೆಗೆ ಪ್ರಗತಿ ಶೆಟ್ಟಿ ಬೆನ್ನೆಲುಬಾಗಿ ನಿಂತಿದ್ದಾರೆ.

ರಿಷಬ್ ಶೆಟ್ಟಿ ಅವರ ಹೆಚ್ಚಿನ ಮಾಹಿತಿಗಾಗಿ : www.rishabshettyfilms.com ಸಂಪರ್ಕಿಸಬಹುದಾಗಿದೆ.

ಸದ್ಯ ರಿಷಬ್ ಶೆಟ್ಟಿ ಜೀವನಚರಿತ್ರೆಯಲ್ಲಿಯೇ ಕಾಂತಾರ ಸಿನಿಮಾ ಅದ್ಭುತ ಯಶಸ್ಸಿನಲ್ಲಿ ಮುಳುಗಿದ್ದಾರೆ. ಕನ್ನಡ ಭಾಷೆಯಲ್ಲಿಯೇ ಸಿನಿಮಾವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಬೇಕು ಅನ್ನೋ ಕನಸು ಕಂಡಿದ್ದ ರಿಷಬ್‌ ಶೆಟ್ಟಿ ಅವರ ಕನಸು ಇಂದು ನನಸಾಗಿದೆ. ಕಾಂತಾರ ಸಿನಿಮಾ ವಿಶ್ವದಾದ್ಯಂತ ಈಗಾಗಲೇ 100 ಕೋಟಿ ಗಳಿಸಿದ ಸಾಧನೆಯನ್ನು ಮಾಡಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಭಾಷೆಗೂ ಡಬ್ ಆಗಿದೆ. ಅಲ್ಲದೇ ಖ್ಯಾತ ನಿರ್ಮಾಪಕರೊಬ್ಬರು ಕಾಂತಾರ ಸಿನಿಮಾವನ್ನು ಮಲಯಾಲಂ ಆವೃತ್ತಿಗೆ ತರಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಇದೀಗ ಮಲ್ಟಿಪ್ಲೆಕ್ಸ್ ಮಾತ್ರವಲ್ಲ ತೆರೆ ಕಂಡಿರುವ ಎಲ್ಲಾ ಸಿಂಗಲ್ ಸ್ಕ್ರೀನ್ ಸಿನಿಮಾಗಳಲ್ಲಿಯೂ ಹೌಸ್ ಪುಲ್ ಪ್ರದರ್ಶನವನ್ನು ಕಾಣುತ್ತಿದೆ. ಕರಾವಳಿ ಭಾಗದ ಜನರು ಯಾವುದೇ ಸಿನಿಮಾವನ್ನು ಅಷ್ಟಾಗಿ ಮೆಚ್ಚಿಕೊಳ್ಳುವುದಿಲ್ಲ. ಆದರೆ ಕಾಂತಾರ ಸಿನಿಮಾ ನೋಡಲು ಹಳ್ಳಿ ಹಳ್ಳಿಗಳಿಂದಲೂ ಜನರು ಥಿಯೇಟರ್ ನತ್ತ ಬರುತ್ತಿದ್ದಾರೆ.

ಕರಾವಳಿ ಭಾಗದಲ್ಲಿನ ಕಲಾವಿದರನ್ನೇ ಇಟ್ಟುಕೊಂಡು ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದು, ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಯಾವುದೇ ಸಿನಿಮಾ ಬಿಡುಗಡೆ ಆದಾಗಲೂ ಯುವಕ, ಯುವತಿಯರೇ ಹೆಚ್ಚಾಗಿ ಸಿನಿಮಾ ಮಂದಿರಕ್ಕೆ ಬರುತ್ತಾರೆ. ಆದ್ರೆ ಕಾಂತಾರ ಮಾತ್ರ ವೃದ್ದರನ್ನೂ ಕೂಡ ಸಿನಿಮಾ ಥಿಯೇಟರ್ ಗೆ ಕರೆಯಿಸುವ ಕಾರ್ಯವನ್ನು ಮಾಡಿದೆ. ರಿಷಬ್‌ ಶೆಟ್ಟಿ ಜೀವನದಲ್ಲಿ ಕಾಂತಾರ ಅತ್ಯಂತ ಯಶಸ್ವಿ ಸಿನಿಮಾ ಆಗಿದೆ. ಸಿನಿಮಾ ನೋಡಿದ ಖ್ಯಾತ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ಸಿನಿಮಾ ವಿಮರ್ಷಕರೂ ಕೂಡ ವೃಷಭ್ ಶೆಟ್ಟಿ ಅವರ ನಟನೆ, ನಿರ್ದೇಶನವನ್ನು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ : Kanthara Movie : ದಾಖಲೆ‌‌ ಮೊತ್ತಕ್ಕೆ ಕಾಂತಾರ ರೈಟ್ಸ್ ಸೇಲ್: ಓಟಿಟಿಯಲ್ಲೂ ಗೆದ್ದ ರಿಷಬ್ ಶೆಟ್ಟಿ

ಇದನ್ನೂ ಓದಿ : Hindi YouTuber praises the movie ‘Kantara’:ರಿಷಬ್​ ಶೆಟ್ಟಿ ಕಾಲಿಗೆ ಬಿದ್ದು ‘ಕಾಂತಾರ’ ಸಿನಿಮಾ ಹಾಡಿಹೊಗಳಿದ ಹಿಂದಿ ಯುಟ್ಯೂಬರ್​ : ವಿಡಿಯೋ ವೈರಲ್​

ಇದನ್ನೂ ಓದಿ : Kantara Movie : ಕಾಂತಾರ ಸಕ್ಸಸ್ ಮೂಲಕ ನನಸಾಯ್ತು ನಟ ಯಶ್ ಕಂಡಿದ್ದ ಕನಸು

Rishab Shetty Biography Kantara director Family, wife, qualification, upcoming movies

Comments are closed.