ಬೆಂಗಳೂರು : ಓದಿ ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿಯಾಗಬೇಕಿದ್ದ ಬಾಲಕಿಯೊಬ್ಬಳು ಇಂಟರನೆಟ್ ಪ್ರಭಾವದಿಂದ ಶಾಮನಿಸಮ್ ಮೋಡಿಗೆ (shamanism influence)ಒಳಗಾಗಿ ಮನೆ ಬಿಟ್ಟು ಹೋಗಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಚಿತ್ರವಾಗಿ ವರ್ತಿಸುತ್ತಿದ್ದ ಮಗಳನ್ನು ಮನೆಯಲ್ಲೇ ಉಳಿಸಿಕೊಳ್ಳಲು ಸರ್ಕಸ್ ಮಾಡಿದ್ದ ಪೋಷಕರು ಈಗ ಕಂಗಲಾಗಿದ್ದು ಮಗಳನ್ನು ಹುಡುಕಿ ಕೊಡುವಂತೆ ಈಗ ಪೊಲೀಸರು ಹಾಗೂ ಸೋಷಿಯಲ್ ಮೀಡಿಯಾ ಮೊರೆ ಹೋಗಿದ್ದಾರೆ.
ಶಾಮನಿಸಂ ಅನ್ನೋದು ಪುರಾತನವಾದ ಒಂದು ಹೀಲಿಂಗ್ ಪದ್ಧತಿ. ಈ ಶಾಮನಿಸಂನಲ್ಲಿ ಪರಿಣಿತಿ ಪಡೆದವರು ಅರೆಪ್ರಜ್ಞಾವಸ್ಥೆಯಲ್ಲಿ ಆತ್ಮಗಳ ಜೊತೆ ಮಾತನಾಡುತ್ತಾರೆ ಎಂದು ನಂಬಲಾಗಿದೆ. ಈ ಶಾಮನಿಸಂಗೆ ಪ್ರಭಾವಿತಳಾಗಿದ್ದ 17 ವರ್ಷದ ಯುವತಿ ಸದಾ ಇಂಟರನೆಟ್ ನಲ್ಲಿ ಶಾಮನಿಸಂಗೆ ಸಂಬಂಧಿಸಿದ ಸಂಗತಿಗಳನ್ನೇ ಹುಡುಕಿ ಅಧ್ಯಯನ ಮಾಡುತ್ತಿದ್ದಳು ಎನ್ನಲಾಗಿದೆ.
ಮಗಳು ಅತಿಯಾಗಿ ಇಂಟರನೆಟ್ ನಲ್ಲಿ ಈ ವಿಚಾರವನ್ನೇ ಆಧ್ಯಯನ ಮಾಡುತ್ತಿರುವುದನ್ನು ನೋಡಿದ ಪೋಷಕರು ಆಕೆಗೆ ಬುದ್ಧಿವಾದ ಹೇಳಿದ್ದು ಇದರಿಂದ ಕೋಪಗೊಂಡ ಬಾಲಕಿ ಪೋಷಕರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದಳಂತೆ. ಮಗಳ ಈ ವರ್ತನೆಯಿಂದ ನೊಂದ ಪೋಷಕರು ಮಗಳಿಗೆ ಕೌನ್ಸಲಿಂಗ್‌ಕೊಡಿಸಿದ್ದರಂತೆ. ಆದರೆ ಇದ್ಯಾವುದಕ್ಕೂ ಬಗ್ಗದ ಯುವತಿ ಶಾಮನಿಸಂ ಹಾಗೂ ದೆವ್ವ ಭೂತದ ವಿಚಾರವನ್ನೇ ಸದಾ ಓದುವುದು, ಇಂಟರನೆಟ್ ಬಳಸಿ ಬ್ರೌಸ್ ಮಾಡುವುದನ್ನು ಮುಂದುವರೆಸಿದ್ದಳು ಎನ್ನಲಾಗಿದೆ.
ಈ ಮಧ್ಯೆ ಅಕ್ಟೋಬರ್ 31 ರಂದು ಬಾಲಕಿ ಎರಡು ಜೊತೆ ಬಟ್ಟೆ,2,500 ರೂ ನಗದಿನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ತಮ್ಮ ಮಗಳು ಮನೆ ಬಿಟ್ಟು ಹೋಗಿರುವುದಕ್ಕೆ ಶಾಮನಿಸಂ ಕಾರಣ ಎಂಬುದು ಹೆತ್ತವರ ಆರೋಪ. ಆಧ್ಮಾತ್ಮಿಕ ಜೀವನದ ಕುರಿತು ತರಬೇರಿ ನೀಡುವ ಪೋಷಕರೊಂದಿಗೂ ಬಾಲಕಿ ಸದಾ ಶಾಮನಿಸಂ ಕುರಿತೇ ಮಾತನಾಡುತ್ತಿದ್ದಳು ಎನ್ನಲಾಗಿದೆ.
ಸದಾ ಆನ್ ಲೈನ್ ನಲ್ಲಿ ಮಾಟ ಮಂತ್ರದ ವಿಡಿಯೋನೋಡುತ್ತಿದ್ದ ಬಾಲಕಿ ಹೆತ್ತವರೊಂದಿಗೆ ಮಾತನಾಡುವುದನ್ನು ಹಾಗೂ ಜನರೊಂದಿಗೆ ಬೆರೆಯುವುದನ್ನೆ ನಿಲ್ಲಿಸಿದ್ದಳು ಎನ್ನಲಾಗಿದೆ. ಹೆತ್ತವರ ದೂರು ಆಧರಿಸಿ ಸುಬ್ರಹ್ಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಈ ಪ್ರಕರಣ ಪೊಲೀಸರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ನಗರದ ಬಸ್ ನಿಲ್ದಾಣ ಸೇರಿದಂತೆ ಹಲವೆಡೆಯ ಸಿಸಿಟಿವಿಯನ್ನು ಪರಿಶೀಲನೆ ನಡೆಸಿರುವ ಪೊಲೀಸರು ಎರಡು ತಿಂಗಳಿನಿಂದ ಬಾಲಕಿ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಪೊಲೀಸರಿಗೆ ದೂರು ನೀಡಿದ ಬಳಿಕ ಹೆತ್ತವರು ಮಗಳ ಹುಡುಕಾಟಕ್ಕಾಗಿ ಸೋಷಿಯಲ್ ಮೀಡಿಯಾ ಮೊರೆ ಹೋಗಿದ್ದು, ಮಗಳನ್ನು ಹುಡುಕಿಕೊಡುವಂತೆ ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ : ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ ಗೆಳೆಯ
ಇದನ್ನೂ ಓದಿ : ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ : ಅಪ್ರಾಪ್ತರು ಸೇರಿ 9 ಮಂದಿಯ ಬಂಧನ
(Girl following spiritual coaches goes missing, parents claim shamanism influence)