Hamsalekha Politics : ಡಿಕೆಶಿ ಪಾದಯಾತ್ರೆಗೆ ನಾದಬ್ರಹ್ಮನ ಸಾಥ್ : ಹಾಡು ಬರೆದುಕೊಡ್ತಾರಂತೆ ಹಂಸಲೇಖ

ರಾಜಕೀಯ ಹಾಗೂ ಸಿನಿಮಾ ಎರಡೂ ಆಪ್ತಸ್ನೇಹಿತರಂತಿರುವ ರಂಗಗಳು. ರಾಜಕೀಯದವರೂ ಸಿನಿಮಾಗೆ ಎಂಟ್ರಿಕೊಡೋದು ಹಾಗೂ ಸಿನಿಮಾ ನಟನಟಿಯರು ರಾಜಕೀಯಕ್ಕೆ ಬರೋದು ಎರಡು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಈಗ ರಾಜಕೀಯದ ಮಹತ್ವದ ಕಾರ್ಯಕ್ರಮವೊಂದಕ್ಕೆ ಸಂಗೀತ ನಿರ್ದೇಶಕ ಹಂಸಲೇಖ (Hamsalekha Politics) ಬಹಿರಂಗ ಬೆಂಬಲ ಘೋಷಿಸುವ ಮೂಲಕ ಈ ಬಾಂಧವ್ಯವನ್ನು ಸಾಬೀತುಪಡಿಸಿದ್ದು, ಹಂಸಲೇಖ ರಾಜಕೀಯಕ್ಕೆ ಬರ್ತಾರೆ ಅನ್ನೋ ಊಹಾಪೋಹಗಳಿಗೆ ಜೀವತುಂಬಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ಡಿ‌.ಕೆ.ಶಿವಕುಮಾರ್ ಮೇಕೆದಾಟು ಯೋಜನೆಗೆ ಆಗ್ರಹಿಸಿ ಜನವರಿ ೯ ರಂದು ಪಾದಯಾತ್ರೆ ಆಯೋಜಿಸಿದ್ದು ಈ ಪಾದಯಾತ್ರೆಗೆ ಎಲ್ಲರನ್ನೂ ಆಹ್ವಾನಿಸಿ ಬೆಂಬಲ ಕೋರುತ್ತಿದ್ದಾರೆ. ಮೊನ್ನೆಯಷ್ಟೇ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ‌ ನೀಡಿದ್ದ ಡಿ.ಕೆ.ಶಿವಕುಮಾರ್ ಎಲ್ಲ ಸ್ಟಾರ್ ನಟರು ಹಾಗೂ ಚಲನಚಿತ್ರ ಮಂಡಳಿಯ ಬೆಂಬಲ ಕೋರಿದ್ದರು.

ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸರಿಗಮಪ ಕಾರ್ಯಕ್ರಮಕ್ಕೆ ಭೇಟಿ ನೀಡಿ ಅಲ್ಲಿಯೂ ಕೂಡ ತಮ್ಮ ಕಾರ್ಯಕ್ರಮದ ರೂಪುರೇಷೆ ವಿವರಿಸಿ ಯೋಜನೆಗೆ ಪಾದಯಾತ್ರೆಗೆ ಬೆಂಬಲ ಕೋರಿದ್ದರು. ಈ ಎಲ್ಲ ಬೆಳವಣಿಗೆಗಳ ಬಳಿಕ ಇದೀಗ ಸಂಗೀತ ನಿರ್ದೇಶಕ ಹಂಸಲೇಖ ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ್ ಆಯೋಜಿಸಿರುವ ಪಾದಯಾತ್ರೆಗೆ ಬೆಂಬಲ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಪಾದಯಾತ್ರೆಗಾಗಿ ಎರಡು ವಿಶೇಷ ಹಾಡನ್ನು ರಚಿಸಿಕೊಡುವುದಾಗಿ ಹಂಸಲೇಖ ಡಿಕೆಶಿಯವರಿಗೆ ಭರವಸೆ ನೀಡಿದ್ದಾರಂತೆ. ಅಷ್ಟೇ ಅಲ್ಲ ಹಂಸಲೇಖ ಬರೆಯೋ ಎರಡು ಹಾಡುಗಳಿಗೆ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಸಂಗೀತ ಸಂಯೋಜನೆ ಕೂಡ ಮಾಡಲಿದ್ದಾರಂತೆ.

ಇತ್ತೀಚಿಗಷ್ಟೇ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ಧ ರಾಮಯ್ಯ ನವರ ಜೊತೆ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ್ದ ಹಂಸಲೇಕ ಅವರು ಸಿದ್ಧು ಪರ ಬ್ಯಾಟಿಂಗ್ ಮಾಡಿದ್ದು, ಈಗ ಧರ್ಮೋಕ್ರಸಿ ಇದೆ.‌ಡೆಮೋಕ್ರಸಿಗಾಗಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂದಿದ್ದರು. ಅಲ್ಲದೇ ಹಂಸಲೇಖ, ಪೇಜಾವರಶ್ರೀಗಳ ಬಗ್ಗೆ ಹೇಳಿದ ಮಾತಿನಲ್ಲಿ ತಪ್ಪೇನು ಇಲ್ಲ ಎಂದು ಸಿದ್ಧರಾಮಯ್ಯ ಹಂಸಲೇಖ ಬೆಂಬಲಕ್ಕೆ ನಿಂತಿದ್ದರು.

ಇದರ ಬೆನ್ನಲ್ಲೇ ಹಂಸಲೇಖ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತು ರಾಜಕೀಯ ವಲಯದಲ್ಲೇ ಕೇಳಿಬಂದಿದ್ದು ರಾಜಾಜಿನಗರ ಕ್ಷೇತ್ರದಿಂದ ಹಂಸಲೇಖ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಈಗ ಡಿಕೆಶಿ ಪಾದಯಾತ್ರೆಗೆ ಹಂಸಲೇಕ ಬೆಂಬಲ ಹಾಗೂ ಮಾತುಗಳು ಈ ಊಹಾಪೋಹಗಳಿಗೆ ಪುಷ್ಠಿಕೊಟ್ಟಿದ್ದು ಒಟ್ಟಿನಲ್ಲಿ ನಾದಬ್ರಹ್ಮ ಹಂಸಲೇಖ ರಾಜಕೀಯ ಪ್ರವೇಶ ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ : Gujarat High Court : ದಂಪತಿ ನಡುವಿನ ಲೈಂಗಿಕ ಸಂಬಂಧದ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು​

ಇದನ್ನೂ ಓದಿ : IPS Officers Promotions : ಹೊಸ ವರ್ಷಕ್ಕೆ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ : ಐಪಿಎಸ್ ಗಳಿಗೆ ಮುಂಬಡ್ತಿ, ವರ್ಗಾವಣೆ

( DK Shivakumar Hiking Support Hamsalekha and Dedicating Songs, Maybe enter Politics)

Comments are closed.