ಸೂರತ್ : ಮಕ್ಕಳ ಬಗ್ಗೆ ಎಷ್ಟೇ ಕಾಳಜಿವಹಿಸಿದ್ರೂ ಕಡಿಮೆಯೇ. ಮನೆಯಲ್ಲಿದ್ದವರು ತಮ್ಮಷ್ಟಕ್ಕೆ ತಾವು ಕೆಲಸದಲ್ಲಿದ್ದರು, ಮಗು ತನ್ನಷ್ಟಕ್ಕೆ ಸೈಕಲ್ ಆಟವಾಡಿಕೊಂಡಿತ್ತು. ಸೈಕಲ್ ಕುಳಿಯುತ್ತಾ, ತುಳಿಯುತ್ತಾ ಮಗು ಬಾಲ್ಕನಿಯ ಕಡೆಗೆ ಬಂದಿದೆ. ಸೈಕಲ್ ನಿಂದ ಕೆಳಗೆ ಇಳಿದು ಕಂಬಿ ಹತ್ತಲು ಮುಂದಾಗಿದೆ. ದುರದೃಷ್ಟವಶಾತ್ ಮಗು 8ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದೆ. ಮಗುವಿನ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಈ ಘಟನೆ ನಡೆದಿರೋದು ಗುಜರಾತ್‌ನ ಸೂರತ್‌ನಲ್ಲಿ.
ಎರಡು ವರ್ಷದ ಮಗು ಮಿಹಿರ್ ಪೋಷಕರು ಅಪಾರ್ಟ್‌ಮೆಂಟ್‌ನ ಎಂಟನೇ ಮಹಡಿಯಲ್ಲಿ ವಾಸವಾಗಿದ್ದರು. ಮಗು ಆಟವಾಡುತ್ತಿದೆ ಎಂದು ಸುಮ್ಮನಾಗಿದ್ರು. ಆದ್ರೆ ಮಗು 70 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದೆ. ಕೆಳಗಿನ ಮನೆಯವರು ಏನಾಗಿದೆ ಎಂದು ಹೊರ ಬಂದು ನೋಡುವಾಗ ಮಗು ಕೆಳಗೆ ಬಿದ್ದಿತ್ತು.
ಇದನ್ನೂ ಓದಿ : ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ : ನಟ ವಿವೇಕ್, ಮಹೇಶ್ ಪತ್ತೆ ವಿಚಾರಣೆ
ಕೂಡಲೇ ಮಗುವಿನ ಪೋಷಕರಿಗೆ ಸುದ್ದಿ ತಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ಕುರಿತು ಕಗರ್ತಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರ ನಿರ್ಲಕ್ಷ್ಯದ ಕುರಿತು ಪೊಲೀಸರು ತನಿಖೆಯನ್ನು ನಡೆಸಲಿದ್ದಾರೆ. ಒಂದು ಕ್ಷಣದ ಎಡವಟ್ಟಿನಿಂದಾಗಿ ಪೋಷಕರು ತಮ್ಮ ಕರುಳ ಕುಡಿಯನ್ನೇ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ : ಪರೀಕ್ಷೆ ಬರೆದ ವಿದ್ಯಾರ್ಥಿನಿಯ ಬದುಕನ್ನೇ ಮುಗಿಸಿದ ಸಹಪಾಠಿ : ಪರೀಕ್ಷಾ ಕೊಠಡಿಯಲ್ಲಿ ನಡೆಯಿತು ಆಘಾತಕಾರಿ ಘಟನೆ
( 2 years Old boy fall of eight floor Residential tower Surat Gujarat)