Man attacks 60-year-old mother : ತಾಯಿ ನಡೆದಾಡುವ ದೇವರು ಅಂತಾರೆ. ತಾಯಿಯಾದವಳೂ ಸಹ ಮಕ್ಕಳನ್ನು ಪಾಲನೆ ಪೋಷಣೆ ಮಾಡಿ ಬೆಳೆಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾಳೆ. ಆದರೆ ಇಲ್ಲೊಬ್ಬ ಕ್ರೂರಿ ತನ್ನ ವೃದ್ಧ ತಾಯಿಗೆ ಇಟ್ಟಿಗೆಯಿಂದ ಜಪ್ಪಿ ಹಲ್ಲೆಗೈದಿದ್ದಾನೆ . ಆಸ್ತಿ ವಿಚಾರಕ್ಕಾಗಿ ತಾಯಿಯೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆದರೆ ಇದಾದ ಬಳಿಕ ಪೊಲೀಸರು ನನ್ನನ್ನು ಬಂಧಿಸುತ್ತಾರೆ ಎಂಬ ಭಯದಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿಯು ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಿದ್ದನು ಎನ್ನಲಾಗಿದೆ. ಇತ್ತ ತಾಯಿಯು ಗುರುಗ್ರಾಮದ ಸೆಕ್ಟರ್ 11ನಲ್ಲಿ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಿದ್ದರು.
ಶುಕ್ರವಾರದಂದು ತನ್ನ ತಾಯಿ ವಾಸವಿದ್ದ ನಿವಾಸಕ್ಕೆ ಆಗಮಿಸಿದ ಆರೋಪಿಯು ತನ್ನ ಸಹೋದರಿಯರ ಮದುವೆ ವಿಚಾರದಲ್ಲಿ ತಾಯಿಯೊಂದಿಗೆ ಗಲಾಟೆ ಮಾಡಿದ್ದಾರೆ. ತಂಗಿಯಂದಿರಿಗೆ ಮದುವೆ ಆಗದೇ ಇರೋದ್ರಿಂದಲೇ ನನಗೆ ಆಸ್ತಿ ಸಿಗುತ್ತಿಲ್ಲ ಎಂದು ಗಲಾಟೆ ಎಬ್ಬಿಸಿದ್ದಾನೆ.
ಈ ಗಲಾಟೆಯು ತಾರಕ್ಕೇರಿದ್ದು ಪರಿಣಾಮವಾಗಿ ಆರೋಪಿಯು ಅಲ್ಲೇ ಇದ್ದ ಇಟ್ಟಿಗೆಯನ್ನು ಎತ್ತಿಕೊಂಡು ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಕೂಡಲೇ ತಾಯಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಆರೋಪಿಯು ಬಂಧನದ ಭಯದಲ್ಲಿ ತಾಯಿಯ ಎದುರಲ್ಲೇ ವಿಷ ಸೇವನೆ ಮಾಡಿದ್ದಾನೆ.
ಈತನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಈತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಮಾಡಲಾಗಿದ್ದು ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಐಪಿಸಿ ಸೆಕ್ಷನ್ 323 ಹಾಗೂ 506 ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.
Gurugram: Man attacks 60-year-old mother with brick, consumes poison fearing arrest
ಇದನ್ನು ಓದಿ : Gungun Upadhyay : ಹೋಟೆಲ್‌ನ 6ನೇ ಮಹಡಿಯಿಂದ ಜಿಗಿದು ಖ್ಯಾತ ಮಾಡೆಲ್ ಗುಂಗುನ್ ಉಪಾಧ್ಯಾಯ ಆತ್ಮಹತ್ಯೆ ಯತ್ನ
ಇದನ್ನೂ ಓದಿ : Badava Rascal : ಕನ್ನಡದ ಬಳಿಕ ತೆಲುಗಿಗೆ ಬಡವ ರಾಸ್ಕಲ್ : ಡಾಲಿ ಧನಂಜಯ್ ಸಿನಿಮಾ ಪೋಸ್ಟರ್ ರಿಲೀಸ್