PUBG New State Mobile: ಪಬ್ಜಿ ಗೇಮ್‌ಗೆ ಹೊಸ ಹೆಸರು; ಜನಪ್ರಿಯ ಗೇಮ್‌ನ್ನು ಇನ್ಮೇಲೆ ಏನಂತ ಕರೆಯೋದು?

PUBG New State Game ಹಿಂದಿನ ಗೇಮಿಂಗ್ ಕಂಪನಿಯಾದ ಕ್ರಾಫ್ಟನ್ ತಾನಿ ನಿರ್ಮಿಸಿದ ಗೇಮ್‌ಗೆ ‘ನ್ಯೂ ​​ಸ್ಟೇಟ್ ಮೊಬೈಲ್’ ಎಂದು ಮರುನಾಮಕರಣ ಮಾಡಿರುವುದಾಗಿ ಘೋಷಿಸಿದ್ದಾರೆ. ದಕ್ಷಿಣ ಕೊರಿಯಾ ಮೂಲದ ಕಂಪನಿಯಾದ ಕ್ರಾಪ್ಟನ್ ಇತ್ತೀಚಿಗೆ ಟ್ವೀಟ್‌ ಮೂಲಕ ಪಬ್ಜಿ ನ್ಯೂ ಸ್ಟೇಟ್ ಗೇಮ್‌ಗೆ PUBG New State Mobile ಎಂಬ ಹೊಸ ಹೆಸರನ್ನು ಇಟ್ಟಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.

ಅಂದಹಾಗೆ ಕಂಪನಿ ನೀಡಿರುವ ಮಾಹಿತಿಯ ಪ್ರಕಾರ ನವೆಂಬರ್ 2021 ರಲ್ಲಿ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಈ ಹೊಸ ಹೆಸರು ಅನ್ವಯವಾಗಲಿದೆ.  ಅತ್ಯಂತ ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್‌ ಆಗಿರುವ ಪಬ್ಜಿ ವರದಿಗಳ ಪ್ರಕಾರ ಈವರೆಗೆ ಒಟ್ಟು 45 ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದ್ದು ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದೆ.

PUBG ನ್ಯೂ ಸ್ಟೇಟ್ ಗೇಮ್‌ನ ಡೆಸ್ಕ್‌ಟಾಪ್ ಆವೃತ್ತಿಯನ್ನುಕ್ರಾಪ್ಟನ್ ಬಿಡುಗಡೆ ಮಾಡಿದೆ. ಹೀಗಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಪಬ್ಜಿ ಆಡುವವರಿಗಾಗಿ ಹೊಸ ಹೆಸರನ್ನು ಕಂಪನಿ ಘೋಷಿಸಿದೆ ಎಂದು ವರದಿಯಾಗಿದೆ. ಮೊಬೈಲ್‌ ಆವೃತ್ತಿಯ ಗೇಮ್‌ಗೆ PUBG ನ್ಯೂ ಸ್ಟೇಟ್ ಮೊಬೈಲ್ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದು ಇತ್ತೀಚೆಗೆ ಆಟವಾಡಲು ಉಚಿತ ಆಟವಾಗಿದ ಜನಪ್ರಿಯ ಅನ್ನು ಮರುಹೆಸರಿಸುವ ಕ್ರಾಫ್ಟನ್‌ನ ಇತ್ತೀಚಿನ ಕ್ರಮವು ಆಟವು ಮೊಬೈಲ್-ಕೇಂದ್ರಿತ ಆಟವಾಗಿ ಉಳಿಯುತ್ತದೆ ಮತ್ತು ನಿರೀಕ್ಷಿಸಲಾಗಿದೆ ಎಂದು ಹೇಳುತ್ತದೆ. ಮುಂಬರುವ ದಿನಗಳಲ್ಲಿ ಅದೇ ರೀತಿ ಇರಲು, ಪಿಸಿ ಮತ್ತು ಕನ್ಸೋಲ್‌ಗಳನ್ನು ಸಕ್ರಿಯಗೊಳಿಸಿದ ಆಟಕ್ಕೆ ಅಪ್‌ಗ್ರೇಡ್ ಮಾಡುತ್ತಿಲ್ಲ.

ಇದಲ್ಲದೆ, PUBG ನ್ಯೂ ಸ್ಟೇಟ್ ಮೊಬೈಲ್‌ನ ನಿರ್ಮಾತೃ ಕ್ರಾಫ್ಟನ್ ಕಂಪನಿಯು ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ಗೇಮ್‌ನ ಹೊಸ ಹೆಸರನ್ನು ನವೀಕರಿಸಿದೆ. ಪಬ್ಜಿ  ಯಾವಾಗಲೂ ಮೊಬೈಲ್-ಕೇಂದ್ರಿತ ಅನುಭವವಾಗಿದೆ ಎಂಬುದನ್ನು ಸಹ ಕ್ರಾಪ್ಟನ್ ಸ್ಪಷ್ಟಪಡಿಸಿದೆ.

ಭಾರತ ಸರ್ಕಾರವು ನಿಷೇಧಿಸುವ ಮುನ್ನ ಟೆನ್ಸೆಂಟ್ ಕಂಪನಿಯ ಒಡೆತನದಲ್ಲಿದ್ದ ಪಬ್ಜಿ ಗೇಮ್‌ನ್ನು ಆನಂತರ ಕ್ರಾಫ್ಟನ್ ಕಂಪನಿಯು ನಿರ್ವಹಿಸುತ್ತಿದೆ. ಭಾರತದಲ್ಲಿ ಗೇಮ್‌ನ PUBG ಎಂಬ ಟ್ಯಾಗ್‌ನೇಮ್‌ನ್ನು ತೆಗೆದುಹಾಕಲು ಕ್ರಾಪ್ಟನ್ ಯೋಚಿಸುತ್ತಿದೆ ಎಂದು ಸಹ ಹೇಳಲಾಗಿದೆ.ಭಾರತದಲ್ಲಿ ಪಬ್ಜಿ  ನಿಷೇಧದ ನಂತರ BGMI ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಮೊಬೈಲ್ ಗೇಮ್‌ಅನ್ನು ತನ್ನ ತೆಕ್ಕೆಗೆ ತೆಗದುಕೊಂಡು ಮರು ಬಿಡುಗಡೆ ಮಾಡಿತು.

ಇದನ್ನೂ ಓದಿ: India 2nd Largest Smartphone Manufacturer: ಭಾರತ ಜಗತ್ತಿನಲ್ಲೇ 2ನೇ ಅತಿದೊಡ್ಡ ಮೊಬೈಲ್ ತಯಾರಕ ದೇಶ; 2020-21 ರಲ್ಲಿ 30 ಕೋಟಿ ಮೊಬೈಲ್ ಫೋನ್‌ ಉತ್ಪಾದನೆ!

(PUBG New State Mobile new name for PUBG new state game)

Comments are closed.