ಪಂಜಾಬ್ : ಜಿಮ್‌ತೆ ತರಬೇತಿಗೆ ಬರುತ್ತಿದ್ದ ವಿವಾಹಿತ ಮಹಿಳೆಗೆ ಅಮಲು ಪದಾರ್ಥಗಳನ್ನು ನೀಡಿ ಜಿಮ್ ಮಾಲೀಕನೋರ್ವ ಅತ್ಯಾಚಾರವೆಸಗಿದ್ದಾನೆ. ಮಾತ್ರವಲ್ಲ ಆಕೆಯ ವಿಡಿಯೋಗಳನ್ನು ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಪಂಚಾಬ್‌ನ ಲೂದಿಯಾನ ಜಿಲ್ಲೆಯಲ್ಲಿ ನಡೆದಿದೆ.
38 ವರ್ಷದ ಎರಡು ಮಕ್ಕಳ ತಾಯಿಯಾಗಿರುವ ಮಹಿಳೆಯು 2015ರಿಂದ ಸನ್ನಿ ಜಿಮ್ಗೆ ಸೇರಿಕೊಂಡಿದ್ದಳು. ಹರಗೋವಿಂದಪುರ ನಿವಾಸಿ ಧರ್ಮೀಂದ್ರಕುಮಾರ್ ಸನ್ನಿ ಆರಂಭದಿಂದಲೂ ಚೆನ್ನಾಗಿಯೇ ಟ್ರೈನಿಂಗ್ ನೀಡುತ್ತಿದ್ದ. ಇತ್ತೀಚೆಗೆ ಮಹಿಳೆಗೆ ಒಳ್ಳೆಯ ಮೈಕಟ್ಟು ಬರುವ ಸಲುವಾಗಿ ಕೆಲವು ಮಾತ್ರೆ ಹಾಗೂ ಇಂಜೆಕ್ಷನ್ ನೀಡಿದ್ದ ಜಿಮ್ ಮಾಲೀಕ ಧರ್ಮೀಂದ್ರಕುಮಾರ್ ಸನ್ನಿ, ಮಾತ್ರೆಯನ್ನು ಸ್ವೀಕಾರ ಮಾಡುವಂತೆ ಹೇಳಿದ್ದಾನೆ.
ಜಿಮ್ ಮಾಲೀಕ ಹೇಳಿದಂತೆಯೇ ಮಹಿಳೆ ಮಾತ್ರೆ ಸೇವನೆ ಮಾಡಿದ್ದಾರೆ. ಕೂಡಲೇ ಮಹಿಳೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ಈ ವೇಳೆಯಲ್ಲಿ ಜಿಮ್ ಮಾಲೀಕ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಪೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಶುರುಮಾಡಿದ್ದಾನೆ.
ಇದರಿಂದ ಕಿರುಕುಳ ಅನುಭವಿಸಿದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಜಿಮ್ ಮಾಲೀಕ ಧರ್ಮೀಂದ್ರಕುಮಾರ್ ಸನ್ನಿಯನ್ನು ವಶಕ್ಕೆ ಪಡೆದು ವಿಚಾರಣೆಯನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ : ಅತ್ತೆಯ ಮೇಲಿನ ಸಿಟ್ಟಿಗೆ ಟೀಯಲ್ಲಿ ವಿಷ ಬೆರೆಸಿ ಮನೆಯವರಿಗೆ ಕೊಟ್ಟ ಸೊಸೆ
ಇದನ್ನೂ ಓದಿ : ದೇವರ ದರ್ಶನಕ್ಕೆ ಬಂದವ ಈಜಲು ನಾಲೆಗೆ ಇಳಿದ : ಸ್ನೇಹಿತನ ರಕ್ಷಣೆಗೆ ಇಳಿದ ಮೂವರು ನೀರು ಪಾಲು