Darshan: ದರ್ಶನ್ ಕರೆಗೆ ಓಗೊಟ್ಟ ಅಭಿಮಾನಿಗಳಿಗೆ ಸಿಕ್ತು ದಚ್ಚು ಭೇಟಿ ಅವಕಾಶ.

ಕೊರೋನಾದಿಂದ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಸಂಕಷ್ಟಕ್ಕಿಡಾಗಿದ್ದವು. ರಾಜ್ಯದ ಪ್ರಾಣಿಸಂಗ್ರಹಾಲಯಗಳಲ್ಲಿ ಪ್ರವಾಸಿಗರ ಕೊರತೆಯಿಂದ ಆದಾಯ ಕುಸಿದಿದ್ದು, ಪ್ರಾಣಿಗಳ ನಿರ್ವಹಣೆಯೇ ಕಷ್ಟವಾಗಿತ್ತು. ಈ ವೇಳೆ ಪ್ರಾಣಿಗಳ ಕಷ್ಟಕ್ಕೆ ಸ್ಪಂದಿಸಿದ್ದರು ಸ್ಯಾಂಡಲ್ ವುಡ್ ಯಜಮಾನ.

ಸ್ವತಃ ವಿಡಿಯೋ ಮಾಡಿ ಪ್ರಾಣಿಗಳ ಸಂಕಷ್ಟದ ಬಗ್ಗೆ ಮಾತನಾಡಿದ್ದ ನಟ ದರ್ಶನ್, ಸಾಧ್ಯವಾದಷ್ಟು ಪ್ರಾಣಿಗಳನ್ನು ದತ್ತು ಪಡೆದು ರಾಜ್ಯದ ಮೃಗಾಲಯದ ಪ್ರಾಣಿಗಳು ಹಾಗೂಸಿಬ್ಬಂದಿಗಳ ಬದುಕಿಗೆ ನೆರವಾಗುವಂತೆ ಕೋರಿದ್ದರು.

ದಚ್ಚು ಕರೆಗೆ ಮಹಾಪೂರದಂತೆ ನೆರವಾದ ಅಭಿಮಾನಿಗಳು ಮೈಸೂರು ಸೇರಿದಂತೆ ರಾಜ್ಯದ 8 ಮೃಗಾಲಯಗಳಲ್ಲಿ ನೂರಾರು ಪ್ರಾಣಿಗಳನ್ನು ದತ್ತು ಪಡೆದಿದ್ದರು. ನಿರ್ವಹಣೆಗೆ ಆದಾಯವಿಲ್ಲದೇ ಸೊರಗಿದ್ದ ಝೂಗಳಿಗೆ ಕೋಟ್ಯಾಂತರ ರೂಪಾಯಿ ಆದಾಯ ಸಿಕ್ಕಿತ್ತು.

ಹೀಗಾಗಿ ದಚ್ಚು ಕರೆಗೆ ಓಗೊಟ್ಟು ಪ್ರಾಣಿಗಳನ್ನು ದತ್ತು ಪಡೆದ ಜನರಿಗೆ ದರ್ಶನ್ ಅವರ ಕೈಯಿಂದಲೇ ಪ್ರಮಾಣ ಪತ್ರ ಕೊಡಿಸುವ ಮೂಲಕ ಮೈಸೂರು ಪ್ರಾಣಿಸಂಗ್ರಹಾಲಯದ ಅಧಿಕಾರಿಗಳು ಒಳ್ಳೆ ಕೆಲಸ ಮಾಡಿದ್ದಾರೆ.

ದರ್ಶನ್ ಮೇಲಿನ ಅಭಿಮಾನದಿಂದ ಪ್ರಾಣಿಗಳನ್ನು ದತ್ತು ಪಡೆದ ಜನರಿಗೆ ಸ್ವತಃ ದರ್ಶನ್ ಪ್ರಮಾಣ ಪತ್ರ ವಿತರಿಸಿದ್ದಾರೆ. ನೆಚ್ಚಿನ ನಟನನ್ನು ಹತ್ತಿರದಿಂದ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದು ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

Comments are closed.