ಸೋಮವಾರ, ಏಪ್ರಿಲ್ 28, 2025
HomeCrimeಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ಕ್ಯಾಮರಾ ಇಟ್ಟು ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ :‌ ಖಾಸಗಿ ಹಾಸ್ಟೆಲ್‌ ಮಾಲೀಕ ಅರೆಸ್ಟ್

ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ಕ್ಯಾಮರಾ ಇಟ್ಟು ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ :‌ ಖಾಸಗಿ ಹಾಸ್ಟೆಲ್‌ ಮಾಲೀಕ ಅರೆಸ್ಟ್

- Advertisement -

ಜೈಪುರ: ‌ದೂರದ ಊರುಗಳಿಗೆ ತೆರಳಿದ್ದಾಗ ವಸತಿ ವ್ಯವಸ್ಥೆ ಪಡೆಯುವ ವೇಳೆ (Harassment of students) ಎಚ್ಚರವಾಗಿರಬೇಕು. ಯಾಕೆಂದ್ರೆ ಇತ್ತೀಚಿನ ದಿನಗಳಲ್ಲಿ ಸ್ಪೈ ಕ್ಯಾಮರಾ ಇಟ್ಟು ಯುವತಿಯರು, ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುವ ಘಟನೆಗಳು ವರದಿಯಾಗುತ್ತಿವೆ. ಇದೀಗ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಹಾಸ್ಟೆಲ್‌ ಮಾಲೀಕನೇ ಯುವತಿಯರ ಬೆಡ್‌ರೂಂ ಹಾಗೂ ಬಾತ್‌ರೂಂನಲ್ಲಿ ಸ್ಪೈ ಕ್ಯಾಮರಾ ಇಟ್ಟು ವಿಡಿಯೋ ಚಿತ್ರೀಕರಿಸಿ ಇದೀಗ ಅಂದರ್‌ ಆಗಿದ್ದಾನೆ. ರಾಜಸ್ಥಾನದ (Rajasthan) ಉದಯಪುರದಲ್ಲಿ ಈ ಘಟನೆ ನಡೆದಿದೆ. ಯುವತಿಯರು ಬಾಡಿಗೆ ಫ್ಲ್ಯಾಟ್‌ನಲ್ಲಿ ಸ್ಪೈ ಕ್ಯಾಮೆರಾಗಳು ಪತ್ತೆಯಾಗಿವೆ. ಸ್ನಾನಗೃಹ, ಮಲಗುವ ಕೋಣೆಗಳು ಮತ್ತು ಇತರ ಸ್ಥಳಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಯುವತಿಯರಿಗೆ ಹಾಸ್ಟೆಲ್‌ ಬಾಡಿಗೆ ನೀಡುವ ಮುನ್ನ ಮಾಲೀಕರೇ ಕ್ಯಾಮರಾಗಳನ್ನು ಅಳವಡಿಸಿದ್ದರು ಎಂದು ತಿಳಿದು ಬಂದಿದೆ.

ಉದಯಪುರ ವಿಭಾಗದ ಅತಿದೊಡ್ಡ ಮೋಹನ್‌ಲಾಲ್ ಸುಖದಿಯಾ ವಿಶ್ವವಿದ್ಯಾಲಯವು ಬೋಹ್ರಾ ಗಣೇಶ್ ಪ್ರದೇಶದಲ್ಲಿದ್ದು, ಈ ಪ್ರದೇಶದಲ್ಲಿ ನೂರಾರು ಯುವಕ ಯುವತಿಯರು ಬಾಡಿಗೆ ಕೊಠಡಿ ಅಥವಾ ಫ್ಲ್ಯಾಟ್‌ಗಳನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು ತಿಳಿದುಬಂದಿದೆ. ರಾಜಸ್ಥಾನದ ಉದಯಪುರದ ಪ್ರತಾಪನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್‌ ದಾಖಲಾಗಿದೆ. ಈ ಹಿನ್ನೆಲೆ ಈ ಪ್ರಕರಣ ಸಂಬಂಧ ರಾಜ್‌ಸಮಂದ್‌ನ ನಾಥದ್ವಾರ ನಿವಾಸಿ ರಾಜೇಂದ್ರ ಸೋನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬೋಹ್ರಾ ಗಣೇಶ್‌ ಜೀ ಮಂದಿರ ರಸ್ತೆಯಲ್ಲಿರುವ ಪಾರ್ಥ್ ಕಾಂಪ್ಲೆಕ್ಸ್‌ನಲ್ಲಿರುವ ಫ್ಲ್ಯಾಟ್‌ ಸಂಖ್ಯೆ 401 ಅನ್ನು ರಾಜೇಂದ್ರ ಅಲಿಯಾಸ್ ರಾಜ್ ಸೋನಿ ಅವರಿಂದ ಬಾಡಿಗೆಗೆ ಪಡೆದಿದ್ದೇವೆ. ಕೆಲ ದಿನಗಳ ಹಿಂದೆ ಆಕೆ ಮನೆಗೆ ಹೋಗಿದ್ದ ವೇಳೆ ಫ್ಲ್ಯಾಟ್‌ ಮಾಲೀಕರು ರಿಪೇರಿ ನೆಪದಲ್ಲಿ ಫ್ಲಾಟ್ ತೆರೆದಿದ್ದರು. ಫ್ಲಾಟ್‌ನ ಕೀ ಕೂಡ ಅವರ ಬಳಿ ಇತ್ತು. ಆ ವೇಳೆ ಫ್ಲ್ಯಾಟ್‌ನಲ್ಲಿ ಯುವತಿಯರು ಇಲ್ಲದ ಲಾಭ ಪಡೆದು ಬಾತ್ ರೂಂ, ಬೆಡ್ ರೂಂನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸ್ಪೈ ಕ್ಯಾಮೆರಾಗಳನ್ನು ಅಳವಡಿಸಿದ್ದರು ಎಂದು ಯುವತಿಯರು ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಡಿ.ಕೆ.ಶಿವಕುಮಾರ್‌ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‌ ಗಾಜುಪುಡಿ, ತಪ್ಪಿದ ಬಾರೀ ದುರಂತ

ಇದನ್ನೂ ಓದಿ : ಬಾರೀ ಅಗ್ನಿಅವಘಡ : ಸುಟ್ಟು ಕರಕಲಾಯ್ತು ಮೊಬೈಲ್‌ ಶಾಪ್‌, ದ್ವಿಚಕ್ರ ವಾಹನ ಶೋರೂಂ

ಈ ಸಂಬಂಧ ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆಯಲ್ಲಿ ಆರೋಪಿಯೇ ಕಂಪ್ಯೂಟರ್ ಮತ್ತು ಸಿಸಿಟಿವಿ ಕ್ಯಾಮೆರಾ ವ್ಯವಹಾರ ನಡೆಸುತ್ತಿದ್ದದ್ದು ಕಂಡುಬಂದಿದೆ. ಬಳಿಕ ತಾನೇ ಸ್ಪೈ ಕ್ಯಾಮೆರಾಗಳನ್ನ ಬಾತ್‌ ರೂಮ್‌, ಬೆಡ್‌ ರೂಮ್‌ ನಲ್ಲಿ ಅಳವಡಿಸಿ, ವಿದ್ಯಾರ್ಥಿನಿಯರ ಅಶ್ಲೀಲ ದೃಶ್ಯಗಳನ್ನ ನೋಡುತ್ತಿದ್ದ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯ ಮೊಬೈಲ್‌ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Harassment of students: Keeping camera in bedroom, bathroom and recording video of students: Private hostel owner arrested

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular