ಬೆಂಗಳೂರು : ಆತ ಎಲ್ಲಿಗೆ ಹೋಗಬೇಕಾದ್ರೂ ವಿಮಾನದಲ್ಲಿಯೇ ಸಂಚಾರ ಮಾಡ್ತಿದ್ದ. ಸದಾ ಮೈತುಂಬಾ ಚಿನ್ನ ಹಾಕೋಂಡು ಶೋಕಿ ಮಾಡ್ತಿದ್ದ. ಆದ್ರೆ ಆತ ಮಾಡುತ್ತಿದ್ದುದು ಮಾತ್ರ ಮನೆ ಕಳ್ಳತನ. ಕಳವು ಮಾಡಿ ಶೋಕಿ ಲೈಫ್ ಮಾಡ್ತಿದ್ದ, ಆರೋಪಿ ಫಿಂಗರ್ ಪ್ರಿಂಟ್‌ನಿಂದಾಗಿ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹೌದು, ಬೆಂಗಳೂರಿನಲ್ಲಿ ಒಂದಿಲ್ಲೊಂದು ಕಡೆ ಮನೆ ಕಳವು ಮಾಮೂಲು. ಇದು ಬೆಂಗಳೂರು ಪೊಲೀಸರಿಗೆ ತಲೆನೋವು ತರಿಸಿದೆ. ಆದ್ರೀಗ ಬಸವನಗುಡ ಪೊಲೀಸರು ಮನೆಗಳ್ಳರನ್ನು ಖೆಡ್ಡಾಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈ ಮೂಲದ ಸಲೀಂ ಶೇಖ್ ಅಲಿಯಾಸ್ ಶೋಕಿ ಸಲೀಮ್, ಬಿಲಾಲ್ ಮಂಡಲ್ ಹಾಗೂ ಜಾಲಿಕ್ ಅನ್ನುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 1 ಕೋಟಿ 80 ಲಕ್ಷ ಮೌಲ್ಯದ 3.3 ಕೆಜಿ ಚಿನ್ನಾಭರಣ ಹಾಗೂ 18 ಕೆಜಿ ಬೆಳ್ಳಿಯ ಆಭರಣವನ್ನು ಜಪ್ತಿ ಮಾಡಿದ್ದಾರೆ.

ಮನೆಕಳವು ಮಾಡೋಕೆ ಬರ್ತಿದ್ದುದು ವಿಮಾನದಲ್ಲಿ !
ಮನೆಗಳ್ಳತನ ಮಾಡೋದನ್ನೇ ಕಸುಬನ್ನಾಗಿ ಮಾಡಿಕೊಂಡಿದ್ದ ಈ ಮೂವರು ಕೂಡ ಹೈಟೆಕ್ ಲೈಫ್ ಲೀಡ್ ಮಾಡ್ತಿದ್ರು. ಅದ್ರಲ್ಲೂ ಗ್ಯಾಂಗ್ ಲೀಡರ್ ಆಗಿದ್ದ ಶೋಕಿ ಸಲೀಮ್ ತಾನು, ಬೆಂಗಳೂರಿನಲ್ಲಿ ಬ್ಯುಸಿನೆಸ್ ಮಾಡ್ತಿದ್ದೀನಿ ಅಂತಾ ಹೇಳ್ತಿದ್ದ. ಬೆಂಗಳೂರು ಹಾಗೂ ಮುಂಬೈ ನಡುವಿನ ಓಡಾಟ ವಿಮಾನದಲ್ಲಿಯೇ ನಡೆಯುತ್ತಿತ್ತು. ಮೈತುಂಬಾ ಚಿನ್ನಾಭರಣಗಳನ್ನು ಹಾಕಿಕೊಂಡು ಪೋಸ್ ಕೊಡ್ತಿದ್ದ. ಹೀಗಾಗಿಯೇ ಮನೆಯವರು, ಊರವರೆಲ್ಲಾ ಬ್ಯುಸಿನೆಸ್ ಮಾಡ್ತಿದ್ದಾನೆ ಅಂತಾನೇ ಭಾವಿಸಿಕೊಂಡಿದ್ದರು.

ಮೈತುಂಬಾ ಆಭರಣ, reels ವಿಡಿಯೋ ಶೋಕಿ
ಕಳವು ಮಾಡುತ್ತಿದ್ದ ಆಭರಣಗಳನ್ನು ಖರ್ಚಿಗೆ ಬೇಕಾಗುವಷ್ಟ ಮಾರಾಟ ಮಾಡಿ ಉಳಿದ ಆಭರಣವನ್ನು ಮೈ ಮೇಲೆ ಹಾಕಿಕೊಂಡು ರೀಲ್ಸ್ ವಿಡಿಯೋ ಮಾಡುತ್ತಿದ್ದ. ಸದಾ ರೀಲ್ಸ್‌ನಲ್ಲಿ ಸಕ್ರೀಯವಾಗಿರುತ್ತಿದ್ದ ಶೋಕಿ ಸಲೀಂ ಸಾಕಷ್ಟು ಫ್ಯಾನ್ಸ್‌ಗಳನ್ನು ಹೊಂದಿದ್ದಾನೆ. ಅಲ್ಲದೇ ಊರಲೆಲ್ಲಾ ಸಲೆಬ್ರಿಟಿ ತರ ಓಡಾಡಿಕೊಂಡು ಪೋಸ್ ಕೊಡ್ತಿದ್ದ.

ಫಿಂಗರ್ ಪ್ರಿಂಟ್‌ನಿಂದ ಸಿಕ್ಕಿಬಿದ್ದ ಖತರ್‌ನಾಕ್ ಕಳ್ಳ
ಇತ್ತೀಚೆಗೆ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೊಂದು ಕಳ್ಳತನ ನಡೆದಿತ್ತು. ಕಳ್ಳರ ಬೆನ್ನು ಬಿದ್ದ ಪೊಲೀಸರು ಫಿಂಗರ್ ಪ್ರಿಂಟ್ ಮಾದರಿಯನ್ನು ಸಂಗ್ರಹಿಸಿದ್ದಾರೆ. ಹಳೆಯ ಕಳ್ಳತನದಲ್ಲಿ ಭಾಗಿಯಾಗಿದ್ದ ಕಳ್ಳರ ಫಿಂಗರ್ ಪ್ರಿಂಟ್ ಜೊತೆಗೆ ಟ್ಯಾಲಿ ಮಾಡಿದ್ದಾರೆ. ಆಗ ಫಿಂಗರ್ ಪ್ರಿಂಟ್ ಶೋಕಿ ಸಲೀಂನ ಜೊತೆ ಟ್ಯಾಲಿ ಆಗಿತ್ತು. ಕೂಡಲೇ ಪೊಲೀಸರು ಅಲರ್ಟ್ ಆಗಿದ್ದು, ಸಲೀಂನ ಗ್ಯಾಂಗ್‌ಅನ್ನು ಹೆಡೆಮುರಿ ಕಟ್ಟಿದ್ದಾರೆ.
ಬಸವನಗುಡಿ ಠಾಣೆಯ ಪೊಲೀಸರು ಮುಂಬೈ ಗ್ಯಾಂಗ್ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ. ಬಂಧಿತರಿಂದ ಬರೋಬ್ಬರಿ 3 ಕೆಜಿ ಚಿನ್ನಾಭರಣದಲ್ಲಿ 1 ಕೆಜಿಯಷ್ಟು ಆಭರಣ ಗಳನ್ನು ವಶಕ್ಕೆ ಪಡೆದಿದ್ದಾರೆ. ಅದ್ರಲ್ಲೂ ಜಪ್ತಿ ಮಾಡಿರುವ ಚಿನ್ನಾಭರಣ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದ್ದು ಅನ್ನೋದು ತಿಳಿದು ಬಂದಿದೆ. ಅಲ್ಲದೇ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : Udupi : ಪ್ರೇಯಸಿಗೆ ಚೂರಿ ಇರಿದು, ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ
ಇದನ್ನೂ ಓದಿ : Bangalore : ಮಾರಕಾಸ್ತ್ರ ಹಿಡಿದು ಬಾರ್ ಒಳಗೆ ನುಗ್ಗಿದ ಪುಡಿ ರೌಡಿಗಳು !
( He was on the plane and was stealing, arrest Basavanagudi Police Bangalore )