ಭಾನುವಾರ, ಏಪ್ರಿಲ್ 27, 2025
HomeCrimeHebri Mother Daughter Murder Case : ತಾಯಿ ಮತ್ತು ಮಗಳ ಕೊಲೆ ಪ್ರಕರಣ...

Hebri Mother Daughter Murder Case : ತಾಯಿ ಮತ್ತು ಮಗಳ ಕೊಲೆ ಪ್ರಕರಣ : 48 ಗಂಟೆಯೊಳಗೆ ಆರೋಪಿ ಬಂಧನ

- Advertisement -

ಉಡುಪಿ : ಹೆಬ್ರಿಯ ಸಮೀಪದ ಆತ್ರಾಡಿ ಗ್ರಾಮದಲ್ಲಿ ನಡೆದಿದ್ದ ತಾಯಿ, ಮಗಳ ಕೊಲೆ ಪ್ರಕರಣಕ್ಕೆ (Hebri Mother Daughter Murder Case ) ಸಂಬಂಧಿಸಿದಂತೆ 48 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿಯ ಅತ್ರಾಡಿ ಗ್ರಾಮದ ಮದಗ ಮುಳ್ಳಗುಜ್ಜೆ ಎಂಬಲ್ಲಿ ವಾಸವಾಗಿರುವ ಚೆಲುವಿ (28 ವರ್ಷ) ಮತ್ತು 10 ವರ್ಷ ಪ್ರಾಯದ ಮಗಳನ್ನು ಮೇ. 8ರಂದು ಕೊಲೆ ಮಾಡಿರುವ ರೀತಿಯಲ್ಲಿ ಶವ ಪತ್ತೆಯಾಗಿತ್ತು. ಈ ಕುರಿತು ಚೆಲುವಿಯ ತಂಗಿ ದೇವಿ ಹಿರಿಯಡ್ಕ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಕೇವಲ 48 ಗಂಟೆಯೊಳಗೆ ಆರೋಪಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಆರೋಪಿ ಹರೀಶ ಆರ್‌ ಯಾನೆ ಗಣೇಶ (29 ವರ್ಷ) ಎಂಬಾತನನ್ನು ಬಂಧಿಸುವ ಮೂಲಕ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ.

ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಪಿಎಸ್ಐಗಳಾದ ಅನಿಲ್ ಬಿ ಮಾದರ, ಮಧು ಬಿ.ಇ, ಪ್ರೊಬೆಷನರಿ ಪಿ.ಎಸ್.ಐ.ಗಳಾದ ಮಂಜುನಾಥ ಮರಬದ, ರವಿ ಬಿ ಕಾರಗಿ ಸಿಬ್ಬಂದಿಗಳಾದ ರಾಘವೇಂದ್ರ ಮತ್ತು ನಿತಿನ್‌ ಅವರನ್ನು ಒಳಗೊಂಡ ಪೊಲೀಸರ ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ.

ಅನೈತಿಕ ಸಂಬಂಧದಲ್ಲಿ ಚೆಲುವೆ ಮೇಲೆ ಸಂಶಯ !

ಕೊಲೆ ಆರೋಪಿಯಾಗಿರುವ ಹರೀಶ್‌ ಶಿವಮೊಗ್ಗದಲ್ಲಿ ವಾಸವಾಗಿದ್ದ. ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಚೆಲುವಿಯ ದೂರದ ಸಂಬಂಧಿಯಾಗಿರುವ ಹರೀಶ, ಗಂಡನಿಂದ ದೂರವಾಗಿರುವ ಅವಕಾಶವನ್ನು ಬಳಸಿಕೊಂಡು ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಜೊತೆಗೆ ಚೆಲುವಿಯ ಬಳಿಯಲ್ಲಿ ತನ್ನನ್ನು ಮದುವೆಯಾಗುವಂತೆಯೂ ಪೀಡಿಸುತ್ತಿದ್ದ. ಇನ್ನು ಚೆಲುವಿ ಬೇರೆ ಗಂಡಸರ ಜೊತೆ ಪೋನ್‌ನಲ್ಲಿ ಮಾತನಾಡುತ್ತಾನೆ ಎಂಬ ಕುರಿತು ಅನುಮಾನ ಪಡುತ್ತಿದ್ದ. ಊಟ ಮಾಡಿ ರಾತ್ರಿ ಮಲಗಿದ್ದ ವೇಳೆಯಲ್ಲಿ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.

ಕೋಪಗೊಂಡ ಶಾಲಿನಿಂದ ಚೆಲುವಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಹತ್ತು ವರ್ಷದ ಮಗಳು ತನ್ನ ವಿರುದ್ದ ಸಾಕ್ಷ್ಯ ಹೇಳಬಹುದು ಅನ್ನೋ ಕಾರಣಕ್ಕೆ ಮಗಳನ್ನು ಕೂಡ ಕೊಲೆ ಮಾಡಿದ್ದಾನೆ. ತನ್ನ ಮೇಲೆ ಯಾರಿಗೂ ಅನುಮಾನ ಬರಬಾರದು ಅನ್ನೋ ಕಾರಣಕ್ಕೆ ಚೆಲುವಿಯ ಕತ್ತಿನಲ್ಲಿದ್ದ ಐವತ್ತು ಸಾವಿರ ಮೌಲ್ಯದ ಚಿನ್ನದ ಸರ ಹಾಗೂ ಆಕೆಯ ಮೊಬೈಲ್‌ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ : ಹೆಬ್ರಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ತಾಯಿ, ಮಗಳ ಮೃತದೇಹ ಪತ್ತೆ : ಕೊಲೆ ಶಂಕೆ

ಇದನ್ನೂ ಓದಿ : ಕಪ್ಪಗಿದ್ದೀಯಾ ಎಂದು ಪತ್ನಿಯನ್ನು ದೂರಿದ ಪತಿ : ಸ್ಯಾನಿಟೈಸರ್​​ ಸುರಿದುಕೊಂಡು ಪತ್ನಿ ಸೂಸೈಡ್​

Hebri Mother Daughter Murder Case accused Arrest

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular