Major National Emergency : ಉತ್ತರ ಕೊರಿಯಾದಲ್ಲಿ (North Korea) ಮೊದಲ ಕೋವಿಡ್ -19 ಪ್ರಕರಣ ಪತ್ತೆ : ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ

ಸಿಯೋಲ್ : ಉತ್ತರ ಕೊರಿಯಾದಲ್ಲಿ (North Korea) ಮೊದಲ ಕೋವಿಡ್ -19 ಪ್ರಕರಣ ಪತ್ತೆಯಾಗಿದೆ. ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಸಾಂಕ್ರಾಮಿಕ ರೋಗವನ್ನು ನಿಯಂತ್ರಣ ದಲ್ಲಿ ಇರಿಸಿಕೊಂಡಿದ್ದ ಉತ್ತರ ಕೊರಿಯಾ ಇದೀಗ ಮೊದಲ ಕೋವಿಡ್‌ ಪ್ರಕರಣ ದಾಖಲಾಗುತ್ತಿದ್ದಂತೆಯೇ ತೀವ್ರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು (Major National Emergency) ಘೋಷಣೆ ಮಾಡಿದೆ.

ಪ್ಯೊಂಗ್ಯಾಂಗ್‌ನಲ್ಲಿ ಜ್ವರದಿಂದ ಬಳಲುತ್ತಿರುವ ರೋಗಿಗಳಿಂದ ತೆಗೆದ ಮಾದರಿಯಲ್ಲಿ ಕೋವಿಡ್‌ ವೈರಸ್‌ನ ಹೆಚ್ಚು ಹರಡುವ ಒಮಿಕ್ರಾನ್ ರೂಪಾಂತರ ಸೋಂಕು ಇರುವುದು ಪತ್ತೆಯಾಗಿದೆ ಎಂದು ಅಧಿಕೃತ KCNA ಸುದ್ದಿ ಸಂಸ್ಥೆ ಹೇಳಿದೆ. ಕೋವಿಡ್‌ ವೈರಸ್‌ ಸೋಂಕು ತೀವ್ರವಾಗಿ ಹರಡುವಿಕೆಯನ್ನು ತಡೆಯುವ ಹಿನ್ನೆಲೆಯಲ್ಲಿ ಉತ್ತರ ಕೋರಿಯಾ ಅಧ್ಯಕ್ಷ
ಕಿಮ್ ಜೊಂಗ್ ಉನ್ ಸೇರಿದಂತೆ ದೇಶದ ಉನ್ನತ ಅಧಿಕಾರಿಗಳು ಬಿಕ್ಕಟ್ಟಿನ ಕುರಿತು ಚರ್ಚಿಸಲು ಪೊಲಿಟ್‌ಬ್ಯುರೊ ಸಭೆಯನ್ನು ನಡೆಸಿದ್ದಾರೆ.

ಕೋವಿಡ್‌ ವೈರಸ್‌ ಸೋಂಕು ಹರಡುವಿಕೆಯ ಮೂಲವನ್ನು ಪತ್ತೆಮಾಡಿ, ಕಡಿಮೆ ಅವಧಿಯಲ್ಲಿ ವೈರಸ್‌ ನಿಯಂತ್ರಣ ಮಾಡುವ ಸಲುವಾಗಿ ಗರಿಷ್ಠ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ. ನಾವು ಶೀಘ್ರದಲ್ಲಿಯೇ ತುರ್ತು ಪರಿಸ್ಥಿತಿಯನ್ನು ಜಯಿಸುತ್ತೇವೆ. ಅಲ್ಲದೇ ಕೋವಿಡ್‌ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತೇವೆ ಎಂದು ಕಿಮ್‌ ಸಭೆಯಲ್ಲಿ ತಿಳಿಸಿದ್ದಾರೆ.

ಅಷ್ಟೇ ಅಲ್ಲಾ ದೇಶದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಇನ್ನು ಲಾಕ್‌ಡೌನ್‌ ಸೇರಿದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆಯೇ ಕರೆ ಈಡಿದ್ದಾರೆ. ನಾಗರೀಕರಿಗೆ ದೇಶದಾದ್ಯಂತ ಎಲ್ಲಾ ನಗರಗಳು ಮತ್ತು ಕೌಂಟಿಗಳಲ್ಲಿ ತಮ್ಮ ಪ್ರದೇಶಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ : ಮಗುವಿನ ಹೆಸರಿನ ಜೊತೆಯಲ್ಲಿ ತಂದೆಯ ಹೆಸರು ಮಾತ್ರವೇಕೆ..? ಇಟಲಿ ಕೋರ್ಟ್ ಪ್ರಶ್ನೆ

ಇದನ್ನೂ ಓದಿ : ಡೊನಾಲ್ಡ್​​ ಟ್ರಂಪ್​ ನಿಷೇಧಿತ ಟ್ವಿಟರ್​ ಖಾತೆಗೆ ಮರುಜೀವ ಕೊಡುತ್ತೇನೆಂದ ಎಲಾನ್​ ಮಸ್ಕ್​

North Korea First Covid-19 Case Confirms Declares Major National Emergency

Comments are closed.