ಸೋಮವಾರ, ಏಪ್ರಿಲ್ 28, 2025
HomeCrimeHonnali Accident case: ಹೊನ್ನಾಳಿ ಚಂದ್ರಶೇಖರ್‌ ಸಾವನ್ನು ಹೋಲುತ್ತಿದೆ ಈ ದುರ್ಘಟನೆ

Honnali Accident case: ಹೊನ್ನಾಳಿ ಚಂದ್ರಶೇಖರ್‌ ಸಾವನ್ನು ಹೋಲುತ್ತಿದೆ ಈ ದುರ್ಘಟನೆ

- Advertisement -

ದಾವಣಗೆರೆ: (Honnali Accident case) ಬೆಳಗಾವಿಯಿಂದ ಶಿವಮೊಗ್ಗಕ್ಕೆ ಸ್ನೇಹಿತರನ್ನು ಬಿಟ್ಟು ಕಾರಿನಲ್ಲಿ ವಾಪಾಸ್‌ ತನ್ನ ಊರಿಗೆ ಬರುತ್ತಿದ್ದ ಯುವಕನೊಬ್ಬ ಭೀಕರ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಬಸವನಕುಡಚಿ ಗ್ರಾಮದ ಎಎಸ್‌ ಐ ಪುತ್ರ ಪ್ರಕಾಶ್‌ ಚೆಂಬಪ್ಪ ಎನ್ನುವವರೇ ಮೃತ ದುರ್ದೈವಿ.

ಶಿಮೊಗ್ಗಕ್ಕೆ ತನ್ನ ಸ್ನೇಹಿತರನ್ನು ಬಿಟ್ಟು ವಾಪಾಸ್‌ ಹೊನ್ನಾಳಿ-ಹರಿಹರ ಮಾರ್ಗವಾಗಿ ಬೆಳಗಾವಿಗೆ ಪ್ರಕಾಶ್‌ ಕಾರಿನಲ್ಲಿ ಒಬ್ಬನೇ ಬರುತ್ತಿದ್ದರು. ಈ ವೇಳೆ ಮಾಸಡಿ ಗ್ರಾಮದ ಸಮೀಪವಿರುವ ಮಹೇಶ್ವರ ಹಳ್ಳದ ಹತ್ತಿರದಲ್ಲಿ ಹೊನ್ನಾಳಿ ಮತ್ತು ಹರಿಹರ ರಸ್ತೆಗೆ ನಿರ್ಮಿಸಿರುವ ಸೇತುವೆಗೆ ಕಾರು ಡಿಕ್ಕಿ (Honnali Accident case) ಹೊಡೆದು ಹಳ್ಳಕ್ಕ ಬಿದ್ದಿದೆ. ಕಾರಿನಲ್ಲಿದ್ದ ಎರಡು ಏರ್‌ ಬ್ಯಾಗ್‌ ಗಳು ಓಪನ್‌ ಆಗಿದ್ದು, ಯುವಕನ ಮೃತದೇಹ ಕಾರಿನ ಹಿಂಬದಿಯ ಸೀಟಿನಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ : Chandigarh Murder Case : ಪತಿಯನ್ನು ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತ್ತಿಟ್ಟ ಪತ್ನಿ

ಇದನ್ನೂ ಓದಿ : Engagement Cancel : ಎಂಗೇಜ್ಮೆಂಟ್‌ ಆದ್ಮೇಲೆ ಹಳೆ ಪ್ರಿಯತಮೆ ಜೊತೆ ಓಡಿಹೋದ ಮರೆಪ್ಪ

ಇದನ್ನೂ ಓದಿ : Assault On Student by Teacher : ಮಗ್ಗಿ ಹೇಳದ ವಿದ್ಯಾರ್ಥಿ ಕೈಗೆ ಗಾಯ ಮಾಡಿದ ಶಿಕ್ಷಕ

ಚಂದ್ರಶೇಖರ್‌ ಸಾವನ್ನು ಹೋಲುತ್ತಿದೆ ಈ ಘಟನೆ:

ಕಾಕತಾಳೀಯ ಎಂಬಂತೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್‌ ಸಾವಿಗೂ ಪ್ರಕಾಶ್ ಸಾವಿಗೂ ಸಾಮ್ಯತೆ ಕಂಡು ಬಂದಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತುಂಗಾನಾಲೆಯಲ್ಲಿ ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರಶೇಖರ್‌ ಕಾರು ಕಾಲುವೆಗೆ ಬಿದ್ದು ಕಾರಿನ ಹಿಂಬದಿಯ ಸೀಟಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈಗ ಅದೇ ರೀತಿಯಲ್ಲಿ ಪ್ರಕಾಶ್‌ ಸಾವು ಕೂಡ ನಡೆದಿದ್ದು, ಮಹೇಶ್ವರ ಹಳ್ಳಕ್ಕೆ ಕಾರು ಬಿದ್ದು ಪ್ರಕಾಶ್‌ ಸಾವನ್ನಪ್ಪಿದ್ದಾರೆ.

(Honnali Accident case) A young man who left his friends in Shimoga from Belgaum and was coming back to his hometown in a car died in a terrible accident in Honnali taluk of Davangere district. The deceased is Prakash Chembappa, son of ASI of Basavanakudachi village of Belagavi district.

RELATED ARTICLES

Most Popular