Sapthami Gowda Abhishek Ambareesh : ಅಭಿಷೇಕ್‌ ಅಂಬರೀಶ್‌ ಕಾಳಿ ಸಿನಿಮಾಗೆ ಕಾಂತಾರ ಬೆಡಗಿ ಸಪ್ತಮಿ ನಾಯಕಿ

ಕಾಂತಾರ ಸಿನಿಮಾ ವಿಶ್ವವ್ಯಾಪಿ ಹಿಟ್‌ ಆಗುತ್ತಿದ್ದಂತೆಯೇ ನಟಿ ಸಪ್ತಮಿ ಗೌಡ ಸ್ಯಾಂಡಲ್‌ವುಡ್‌ನ (Sapthami Gowda Abhishek Ambareesh) ಬಹುಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದಾರೆ. ಮುಂಗಾರು ಮಳೆ ಕೃಷ್ಣ ಮತ್ತು ಅಭಿಷೇಕ್‌ ಅಂಬರೀಶ್‌ ಕಾಂಬಿನೇಷನ್‌ನ ಕಾಳಿ ಸಿನಿಮಾಗೆ ಕಾಂತಾರ ಸಿನಿಮಾದ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಸಪ್ತಮಿ ಗೌಡ ಅಧಿಕೃತವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಾಂತಾರ ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ ಹಳ್ಳಿ ಹುಡುಗಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾ ಸೂಪರ್‌ ಹಿಟ್‌ ಆದಮೇಲೆ ಸಪ್ತಮಿ ಗೌಡ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಕೇವಲ ಕನ್ನಡ ಸಿನಿರಂಗದಲ್ಲಿ ಮಾತ್ರವಲ್ಲದೇ ಪರಭಾಷೆಗಳಲ್ಲಿ ಅವಕಾಶಗಳು ಹರಿದು ಬರುತ್ತಿವೆ. ಈ ಹಿಂದೆ ಪರಭಾಷೆಗಳಿಂದ ಬಂದ ಅವಕಾಶಗಳ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅದಕ್ಕೂ ಮೊದಲು ಕನ್ನಡದಲ್ಲಿ ಎರಡರಿಂದ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಅದರಲ್ಲಿ ಮೊದಲು ನಟಿಸುವುದಾಗಿ ಒಪ್ಪಿಕೊಂಡಿದ್ದಾರೆ. ಅದರಲ್ಲಿ ಅಭಿಷೇಕ್‌ ಅಂಬರೀಶ್‌ ಅಭಿನಯದ ಕಾಳಿ ಸಿನಿಮಾವು ಒಂದಾಗಿದೆ.

ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕೃಷ್ಣ ಈಗ ಯಂಗ್‌ ರೆಬಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಇನ್ನೂ ಈಗಾಗಲೇ ಸಿನಿಮಾ ಟೈಟಲ್‌ ಸೇರಿದಂತೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆದರೆ ಈ ಸಿನಿಮಾದ ನಾಯಕಿ ನಟಿಯ ಹೆಸರನ್ನು ಗೌಪ್ಯವಾಗಿ ಇಟ್ಟಿದ್ದರು. ಆದರೆ ಈಗ ಸಿನಿಮಾದ ನಾಯಕಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ : Vikram Gokhale Passes Away : ಬಾಲಿವುಡ್‌ನ ಹಿರಿಯ ನಟ ವಿಕ್ರಮ್ ಗೋಖಲೆ 77 ನೇ ವಯಸ್ಸಿನಲ್ಲಿ ವಿಧಿವಶ

ಇದನ್ನೂ ಓದಿ : Aditi Prabhudeva : ಅದಿತಿ ಪ್ರಭುದೇವ ಅರಶಿನ ಶಾಸ್ತ್ರ : ಪೋಟೋ ವೈರಲ್

ಇದನ್ನೂ ಓದಿ : “Mary” First Look poster: “ಆನ” ನಿರ್ದೇಶಕರ ಹೊಸ ಪ್ರಯತ್ನ: “ಮೇರಿ” ಫಸ್ಟ್‌ ಲುಕ್‌ ಪೋಸ್ಟರ್ ಬಿಡುಗಡೆ

ಕಾಳಿ ಸಿನಿಮಾವು ಕಾವೇರಿ ನದಿ ಗಲಾಟೆಯಲ್ಲಿ ನಡೆದಂತಹ ನೈಜ ಪ್ರೇಮಕಥೆಯನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ಅಭಿಷೇಕ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಫಸ್ಟ್‌ ಲುಕ್‌ ಕೂಡ ಬಿಡುಗಡೆಯಾಗಿದೆ. ಸದ್ಯ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅಭಿಷೇಕ್‌ ಅಂಬರೀಶ್‌ ಸದ್ಯದಲ್ಲೇ ಕಾಳಿ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

Sapthami Gowda Abhishek Ambareesh: Abhishek Ambareesh is Kantara Bedagi Sapthami as the lead in the movie Kali.

Comments are closed.