ಮಂಗಳವಾರ, ಏಪ್ರಿಲ್ 29, 2025
HomeCrimeHonnavar accident:ಹೊನ್ನಾವರ : ಭೀಕರ ಅಪಘಾತ: 15 ಮಂದಿಗೆ ಗಾಯ, ಓರ್ವ ಸಾವು

Honnavar accident:ಹೊನ್ನಾವರ : ಭೀಕರ ಅಪಘಾತ: 15 ಮಂದಿಗೆ ಗಾಯ, ಓರ್ವ ಸಾವು

- Advertisement -

ಹೊನ್ನಾವರ:(Honnavar accident) ಟೆಂಪೋ ಪಲ್ಟಿಯಾಗಿ ಓರ್ವ ಸಾವನ್ನಪ್ಪಿ, 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69 ರ ಖರ್ವಾ ತಿರುವಿನಲ್ಲಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಗೇರುಸೊಪ್ಪಾ ಕಡೆಯಿಂದ (Honnavar accident)ಹೊನ್ನಾವರ ಮಾರ್ಗವಾಗಿ ಪ್ರಯಾಣಿಕರು ಕರೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಹನುಮಂತ ಪೂಜಾರಿ ಎಂಬವರು ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದ್ದು,ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ:Bada Poojary died : ಕಂಬಳ ಕ್ಷೇತ್ರದ ಸಾಧಕ ಇರುವೈಲ್‌ ಪಾಣಿಲ ಬಾಡ ಪೂಜಾರಿ ವಿಧಿವಶ

ಇದನ್ನೂ ಓದಿ:Dhoni Inaugurates Super Kings Academy : ಹೊಸೂರಿನ ಧೋನಿ ಗ್ಲೋಬಲ್ ಸ್ಕೂಲ್‌ನಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿ ಉದ್ಘಾಟಿಸಿದ ಮಾಹಿ

ಇನ್ನು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಹನುಮಂತ ಪೂಜಾರಿ ಎಂಬವರು ಸಾವನ್ನಪ್ಪಿದ್ದಾರೆ. ಇನ್ನು ಮಹೇಶ್ ನಾಯ್ಕ ಎಂಬವರ ತಲೆಗೆ ಗಂಭೀರ ಗಾಯವಾಗಿದ್ದು, ಆತನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಸ್ಥಳಕ್ಕೆ ಹೊನ್ನಾವರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ:Himanta Biswa:ಘೇಂಡಾಮೃಗಕ್ಕೆ ಟ್ರಕ್‌ ಢಿಕ್ಕಿ : ವಿಡಿಯೋ ವೈರಲ್‌

Honnavar: Terrible accident: 15 injured, one dead

RELATED ARTICLES

Most Popular