Dhoni Inaugurates Super Kings Academy : ಹೊಸೂರಿನ ಧೋನಿ ಗ್ಲೋಬಲ್ ಸ್ಕೂಲ್‌ನಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿ ಉದ್ಘಾಟಿಸಿದ ಮಾಹಿ

ಬೆಂಗಳೂರು : (Dhoni Inaugurates Super Kings Academy) ಟೀಮ್ ಇಂಡಿಯಾದ ಲೆಜೆಂಡ್ರಿ ಕ್ಯಾಪ್ಟನ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ದೇಶದ ವಿವಿಧ ನಗರಗಳಲ್ಲಿ “ಎಂ.ಎಸ್ ಧೋನಿ ಗ್ಲೋಬಲ್ ಸ್ಕೂಲ್” (MS Dhoni global school)ನಡೆಸುತ್ತಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಹೊಸೂರಿನಲ್ಲಿ “ಎಂ.ಎಸ್ ಧೋನಿ ಗ್ಲೋಬಲ್ ಸ್ಕೂಲ್” (MS Dhoni global school) ಇದ್ದು, ಅಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ (Chennai Super Kings – CSK) ಅಕಾಡೆಮಿ ಶುರುವಾಗಿದೆ. ಸೋಮವಾರ ಬೆಂಗಳೂರಿಗೆ ಆಗಮಿಸಿದ್ದ ಎಂ.ಎಸ್ ಧೋನಿ, ಹೊಸೂರಿನ ತಮ್ಮ ಗ್ಲೋಬಲ್ ಸ್ಕೂಲ್’ನಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿ(Dhoni Inaugurates Super Kings Academy)ಯನ್ನು ಉದ್ಘಾಟಿಸಿದ್ದಾರೆ.

ಐಪಿಎಲ್’ನಲ್ಲಿ 4 ನಾಲ್ಕು ಬಾರಿ ಪ್ರಶಸ್ತಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈಗಾಗಲೇ ತಮಿಳುನಾಡಿನ ಸೇಲಂ ಹಾಗೂ ಚೆನ್ನೈನಲ್ಲಿ ಅಕಾಡೆಮಿಗಳನ್ನು ಹೊಂದಿದೆ. ಹೊಸೂರಿನ ಅಕಾಡೆಮಿ ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ. ಹೊಸೂರಿನ ಸೂಪರ್ ಕಿಂಗ್ಸ್ ಅಕಾಡೆಮಿ (Dhoni Inaugurates Super Kings Academy)ಒಂದು ಟರ್ಫ್ ಪಿಚ್ ಸಹಿತ ಒಟ್ಟು 8 ಕ್ರಿಕೆಟ್ ಪಿಚ್’ಗಳನ್ನು ಹೊಂದಿದೆ.

ಇದನ್ನೂ ಓದಿ : Dhoni Entertainment : ಕ್ಯಾಪ್ಟನ್ ಕೂಲ್ ಧೋನಿ ಇನ್ನು ಮುಂದೆ ಸಿನಿಮಾ ಪ್ರೊಡ್ಯೂಸರ್.. ತಮಿಳು, ತೆಲುಗು, ಮಲಯಾಳಂ ಚಿತ್ರ ನಿರ್ಮಿಸಲಿದ್ದಾರೆ ಮಾಹಿ

ತಮ್ಮದೇ ಗ್ಲೋಬಲ್ ಸ್ಕೂಲ್’(MS Dhoni global school)ನಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿ ಉದ್ಘಾಟಿಸಿ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ “ನಾನು ಯಾವುದೇ ಶಾಲೆಗಳಿಗೆ ಭೇಟಿ ಕೊಟ್ಟರೂ, ನನ್ನ ಶಾಲಾ ದಿನಗಳು ನೆನಪಾಗುತ್ತವೆ. ನನ್ನ ಪ್ರಕಾರ ಶಾಲಾ ದಿನಗಳೇ ನಮ್ಮ ಜೀವನದ ಅತ್ಯಂತ ಶ್ರೇಷ್ಠ ಕ್ಷಣಗಳು. ಓದು, ಆಟ ಎಲ್ಲವೂ ಇರುತ್ತವೆ. ಶಾಲೆಯಲ್ಲಿ ಕಳೆದ ದಿನಗಳು ಜೀವನದಲ್ಲಿ ಯಾವತ್ತೂ ಮರಳಿ ಬರಲು ಸಾಧ್ಯವಿಲ್ಲ. ಅಲ್ಲಿ ಸವಿನೆನಪುಗಳಿರುತ್ತವೆ. ಅಲ್ಲಿ ನಿಮಗೆ ಸ್ನೇಹಿತರಾದವರು ತುಂಬಾ ವರ್ಷಗಳವರೆಗೆ ಸ್ನೇಹಿತರಾಗಿರುತ್ತಾರೆ” ಎಂದಿದ್ದಾರೆ.

ಇದನ್ನೂ ಓದಿ : Syed Mushtaq Ali T20 : ಇಂದಿನಿಂದ ಸೈಯದ್ ಮುಷ್ತಾಕ್ ಟಿ20 ಟೂರ್ನಿ: ಮಯಾಂಕ್ ನಾಯಕತ್ವದ ಕರ್ನಾಟಕಕ್ಕೆ ಮಹಾರಾಷ್ಟ್ರ ಎದುರಾಳಿ

ಇದನ್ನೂ ಓದಿ : Virat Kohli : ಆಸ್ಟ್ರೇಲಿಯಾದ ಬೀದಿಗಳಲ್ಲಿ ರಾರಾಜಿಸುತ್ತಿದೆ ವಿರಾಟ್ ಕೊಹ್ಲಿ ಕಟೌಟ್.. ಕ್ಯಾಪ್ಟನ್ ರೋಹಿತ್‌ಗಿಲ್ಲ ಕಟೌಟ್ ಭಾಗ್ಯ

2008ರಿಂದಲೂ ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಎಂ.ಎಸ್ ಧೋನಿ ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. 2010ರಲ್ಲಿ ಧೋನಿ ನಾಯಕತ್ವದಲ್ಲಿ ಮೊದಲ ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದ ಸೂಪರ್ ಕಿಂಗ್ಸ್, ನಂತರ 2011, 2018 ಹಾಗೂ 2021ರಲ್ಲೂ ಪ್ರಶಸ್ತಿ ಗೆದ್ದಿತ್ತು. 2023ನೇ ಸಾಲಿನ ಐಪಿಎಲ್’ನಲ್ಲಿ ಎಂ.ಎಸ್ ಧೋನಿ ಕೊನೆಯ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಮುಂದಿನ ಐಪಿಎಲ್ ಬಳಿಕ ವೃತ್ತಿಪರ ಕ್ರಿಕೆಟ್’ಗೆ ಧೋನಿ ವಿದಾಯ ಹೇಳುವ ಸಾಧ್ಯತೆಯಿದೆ.

Mahi inaugurated the Super Kings Academy at Dhoni Global School, Hosur

Comments are closed.