ಬೆಂಗಳೂರು : ಹಿರಿಯ ಐಎಎಸ್ ಅಧಿಕಾರಿ ಆರ್.ಪಿ ಶರ್ಮಾ ತಮ್ಮ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ತಮ್ಮ ನಿವಾಸದಲ್ಲಿ ಈ ಘಟನೆ ನಡೆದಿದ್ದು ಶರ್ಮಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನ ಕೊತ್ತನೂರಿ ನಿವಾಸದಲ್ಲಿ ಸರ್ವೀಸ್ ರಿವಾಲ್ವರ್ ಕ್ಲೀನ್ ಮಾಡುವಾಗ ಆರ್ ಪಿ ಶರ್ಮಾ ಆಕಸ್ಮಿಕವಾಗಿ ಗುಂಡು ಸಿಡಿದಿದೆ ಎನ್ನಲಾಗಿದೆ. ಸದ್ಯ ಆರ್ ಪಿ ಶರ್ಮಾ ಅವರನ್ನು ಹೆಬ್ಬಾಳದಲ್ಲಿರುವ ಖಾಸಗಿ ದಾಖಲು ಮಾಡಲಾಗಿದ್ದು, ಸದ್ಯ ಶರ್ಮಾ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.

ಆರ್.ಪಿ.ಶರ್ಮಾ ಅವರ ಮನೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಭೇಟಿ ನೀಡಿದ್ದು, ಪರಿಶೀಲನೆಯನ್ನು ನಡೆಸಿದ್ದಾರೆ. ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ಅವರಿಗೆ ಮಿಸ್ ಫೈರಿಂಗ್ ನಿಂದ ಗುಂಡು ಹಾರಿದೆ.

ಆದ್ರೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಆರ್ ಪಿ ಶರ್ಮಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಮಲ್ ಪಂತ್ ಹೇಳಿದ್ದಾರೆ.